ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾದ ಅಲೆಕ್ಸಾಂಡರ್ ಜ್ವೆರೆವ್ 2015 ರಿಂದ ಗ್ರ್ಯಾಂಡ್ ಸ್ಲಾಮ್ ಆಡುತ್ತಿದ್ದು, 3 ಬಾರಿ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಪ್ರತಿ ಬಾರಿಯೂ ಸೋಲನ್ನು ಎದುರಿಸಿದ್ದಾರೆ. ಈ ಬಾರಿ ಜ್ವೆರೆವ್ ಫೈನಲ್ ತಲುಪಲು ಹೆಚ್ಚಿನ ತೊಂದರೆ ಎದುರಿಸಬೇಕಾಗಲಿಲ್ಲ. ಏಕೆಂದರೆ, 24 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ನೊವಾಕ್ ಜೊಕೊವಿಕ್ ಅವರನ್ನು ಸೆಮಿ-ಫೈನಲ್‌ನಲ್ಲಿ ಎದುರಿಸಿದರಾದರೂ, ಜೊಕೊವಿಕ್ ಕಾಲಿನ ಗಾಯದಿಂದಾಗಿ ಒಂದು ಸೆಟ್‌ನ ನಂತರ ಪಂದ್ಯದಿಂದ ಹಿಂದೆ ಸರಿಯಲು ನಿರ್ಧರಿಸಿದರು.