
ನಟಿ ಪ್ರಣಿತಾ ಸುಭಾಶ್ ಅವರು ಇತ್ತೀಚೆಗಷ್ಟೇ ಎರಡನೇ ಮಗುವಿನ ಜನನ ಆಗಿದೆ. ಇತ್ತೀಚೆಗೆ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಈಗ ಪ್ರಣಿತಾ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು ಸಖತ್ ಗ್ಲಾಮರಸ್ ಆಗಿ ಕಾಣಿಸಿದ್ದಾರೆ.

ಪ್ರಣಿತಾ ಸುಭಾಶ್ ಅವರು ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ಅವರು ಸ್ಯಾಂಡಲ್ವುಡ್ ಮಾತ್ರವಲ್ಲದೆ ಪರಭಾಷೆಯಲ್ಲೂ ಕೆಲವು ಸಿನಿಮಾ ಮಾಡಿದ್ದಾರೆ. ಅವರು ಈಗ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಹೊಸ ಫೋಟೋಗಳಿಗೆ ‘ರೂಪಸಿ ಸುಮ್ಮನೆ ಕುಳಿತಿರಲು’ ಎಂದು ಅವರು ಟೈಟಲ್ ನೀಡಿದ್ದಾರೆ. ಈ ಫೋಟೋದಲ್ಲಿ ಅವರು ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.

ಪ್ರಣಿತಾ ಸುಭಾಶ್ ಅವರು ಕೊವಿಡ್ ಸಂದರ್ಭದಲ್ಲಿ ವಿವಾಹ ಆದರು. ನಿತಿನ್ ರಾಜು ಅವರನ್ನು ಪ್ರಣಿತಾ ಮದುವೆ ಆಗಿದ್ದಾರೆ. ಇವರು ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ.

ಪ್ರಣಿತಾ ಅವರು ಮಗಳಿಗೆ ಅರ್ನಾ ಎಂದು ಹೆಸರು ಇಡಲಾಗಿದೆ. ಮಗಳ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಅವರು ಹಂಚಿಕೊಳ್ಳುತ್ತಾ ಇರುತ್ತಾರೆ.