G20 SUMMIT: ಭಾರತ್ ಮಂಟಪದ ಅಂತಾರಾಷ್ಟ್ರೀಯ ಮಾಧ್ಯಮ ಕೇಂದ್ರಕ್ಕೆ ಭೇಟಿ ನೀಡಿ ಪತ್ರಕರ್ತರಿಗೆ ಧನ್ಯವಾದ ತಿಳಿಸಿದ ಪ್ರಧಾನಿ ಮೋದಿ

|

Updated on: Sep 11, 2023 | 2:27 PM

ದೆಹಲಿಯಲ್ಲಿ ಜಿ-20 ಶೃಂಗಸಭೆ ಮುಕ್ತಾಯಗೊಳ್ಳುತ್ತಿದ್ದಂತೆ, ಪ್ರಧಾನಿ ಮೋದಿ ಅವರು ದೇಶ ವಿದೇಶಗಳ ಮಾಧ್ಯಮ ಮಿತ್ರರಿಗೆ ಧನ್ಯವಾದ ತಿಳಿಸಲು ಭಾರತ್ ಮಂಟಪಂನಲ್ಲಿರುವ ಅಂತಾರಾಷ್ಟ್ರೀಯ ಮಾಧ್ಯಮ ಕೇಂದ್ರಕ್ಕೆ ಭೇಟಿ ನೀಡಿದರು.

1 / 7
ಸೆ. 9,10ರಂದು ಭಾರತ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಬೃಹತ್​​ ಆಗಿ ನಿರ್ಮಾಣ ಮಾಡಲಾಗಿದ್ದ, ಭಾರತ್​​ ಮಂಟಪಂನಲ್ಲಿ ಎರಡು ದಿನಗಳ ಕಾಲ ನಡೆದ ಜಿ-20 ಶೃಂಗಸಭೆ ನೆನ್ನೆ (ಸೆ.10) ಮುಕ್ತಾಯಗೊಂಡಿದೆ.

2 / 7
ಎರಡು ದಿನಗಳ  ಜಿ-20 ಶೃಂಗಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಇನ್ನು ಈ ಸಭೆಯಲ್ಲಿ ಆಫ್ರಿಕನ್ ಒಕ್ಕೂಟಕ್ಕೆ G20 ಖಾಯಂ ಸದಸ್ಯತ್ವವನ್ನು ನೀಡಲಾಗಿದೆ. ಪ್ರಧಾನಿ ಮೋದಿ ಜಾಗತಿಕ ಜೈವಿಕ ಇಂಧನ ಒಕ್ಕೂಟವನ್ನು ಘೋಷಿಸಿದರು, ಭಾರತ ಮಧ್ಯಪ್ರಾಚ್ಯ ಯುರೋಪ್ ಆರ್ಥಿಕ ಕಾರಿಡಾರ್ಗೆ ಸಂಬಂಧಿಸಿದ ಯೋಜನೆಯನ್ನು ಸಹ ಚರ್ಚಿಸಲಾಗಿದೆ ಮತ್ತು ರಷ್ಯಾ ಕುರಿತು ಮಹತ್ವದ ಚರ್ಚೆಗಳು ನಡೆದಿವೆ.

3 / 7
ಇನ್ನು ದೆಹಲಿಯಲ್ಲಿ ಜಿ-20 ಶೃಂಗಸಭೆ ಮುಕ್ತಾಯಗೊಳ್ಳುತ್ತಿದ್ದಂತೆ, ಪ್ರಧಾನಿ ಮೋದಿ ಅವರು ದೇಶ ವಿದೇಶಿಗಳ ಮಾಧ್ಯಮ ಮಿತ್ರರಿಗೆ ಧನ್ಯವಾದ ತಿಳಿಸಲು ಭಾರತ್ ಮಂಟಪಂನಲ್ಲಿರುವ ಅಂತಾರಾಷ್ಟ್ರೀಯ ಮಾಧ್ಯಮ ಕೇಂದ್ರಕ್ಕೆ ಭೇಟಿ ನೀಡಿದರು.

4 / 7
ವಿಶ್ವ ನಾಯಕ ಜತೆಗೆ ನಡೆಸಿದ ಚರ್ಚೆಯ ನಂತರ ಪತ್ರಕರ್ತರನ್ನು ಅಭಿನಂದಿಸಿದ್ದಾರೆ. ಜತೆಗೆ ದೆಹಲಿಯಲ್ಲಿ ನಡೆದ ಶೃಂಗಸಭೆ ಎಲ್ಲ ಹಂತ ಸಭೆಗಳ ಬಗ್ಗೆ ಮತ್ತು ಕಾರ್ಯಕ್ರಮಗಳನ್ನು ವರದಿ ಮಾಡಿದ ಮಾಧ್ಯಮಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

5 / 7
ಪ್ರಧಾನಿ ಮೋದಿ ಅವರು ಭಾರತ್ ಮಂಟಪಂನಲ್ಲಿರುವ ಅಂತಾರಾಷ್ಟ್ರೀಯ ಮಾಧ್ಯಮ ಕೇಂದ್ರದತ್ತ ಬರುತ್ತಿದ್ದಂತೆ ಜೈಘೋಷಗಳು ಮೊಳಗಿದೆ. ಮೋದಿ ಅವರು  ಪತ್ರಕರ್ತರತ್ತ ಕೈಬಿಸಿದ್ದಾರೆ.

6 / 7
ಈ ಎರಡು ದಿನದ ಸಭೆಯಲ್ಲಿ ಯುಎಸ್ ಅಧ್ಯಕ್ಷ ಜೋ ಬಿಡೆನ್, ಯುಕೆ ಪ್ರಧಾನಿ ರಿಷಿ ಸುನಕ್, ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಸೇರಿದಂತೆ ವಿಶ್ವದ ಪ್ರಮುಖ ನಾಯಕರು ಭಾಗವಹಿಸಿದ್ದರು.

7 / 7
ಇಟಲಿ, ಸಿಂಗಾಪುರ ಮತ್ತು ಜರ್ಮನಿ, ಟರ್ಕಿ ದೇಶದ ಮಾಧ್ಯಮಗಳು ಕೂಡ ದೆಹಲಿ ಶೃಂಗಸಭೆಗೆ ಆಮಿಸಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಿ-20 ಶೃಂಗಸಭೆಯ ವೀಕ್ಷಣೆ ಮತ್ತು ಚರ್ಚೆಗೆ ಕಾರಣವಾಗಿತ್ತು.

Published On - 1:07 pm, Mon, 11 September 23