
ವಿಶ್ವ ಪಿಕಲ್ ಬಾಲ್ ಲೀಗ್ 2ನೇ ಸೀಸನ್ ಇತ್ತೀಚೆಗೆ ಪ್ರಾರಂಭ ಆಗಿದೆ. ಈ ಮ್ಯಾಚ್ನಲ್ಲಿ ‘ಬೆಂಗಳೂರು ಜವಾನ್ಸ್’ ತಂಡವು ‘ಪುಣೆ ಯುನೈಟೆಡ್’ ವಿರುದ್ಧ 5-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡುವ ಮೂಲಕ ಭರ್ಜರಿ ಗೆಲುವು ಸಾಧಿಸಿದೆ.

ಪ್ರಿಯಾ ಅಟ್ಲೀ ಮತ್ತು ಖ್ಯಾತ ನಿರ್ದೇಶಕ ಅಟ್ಲೀ ಮಾಲೀಕತ್ವದ ಬೆಂಗಳೂರು ಜವಾನ್ಸ್ ತಂಡವು ವಿಶ್ವ ಪಿಕಲ್ ಬಾಲ್ ಲೀಗ್ನ ಮೊದಲ ಸೀಸನ್ನ ಚಾಂಪಿಯನ್ ತಂಡವಾಗಿದ್ದು, ಮತ್ತೆ ತನ್ನ ಉತ್ತಮ ಆಟ ಮುಂದುವರಿಸಿದೆ.

ಈ ಮ್ಯಾಚ್ ಗೆಲ್ಲುವುದರ ಮೂಲಕ ‘ಬೆಂಗಳೂರು ಜವಾನ್ಸ್’ ತಂಡ ಮುನ್ನುಗ್ಗುತ್ತಿದೆ. ಮೊದಲ ಸೀಸನ್ ಗೆದ್ದ ಹಾಗೇ 2ನೇ ಸೀಸನ್ ಗೆದ್ದು, ತನ್ನ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಸಜ್ಜಾಗಿದೆ ಎಂಬ ಸಂದೇಶವನ್ನು ನೀಡಿದೆ.

‘ಬೆಂಗಳೂರು ಜವಾನ್ಸ್’ ತಂಡವು ಆತ್ಮ ವಿಶ್ವಾಸ ಮತ್ತು ಛಲದೊಂದಿದೆ ಉತ್ತಮ ಪ್ರದರ್ಶನ ನೀಡಿದೆ. ಇದು ಬಲಿಷ್ಠ ತಂಡಗಳಲ್ಲಿ ಒಂದಾಗಿದೆ. ಮ್ಯಾಚ್ ನಡೆಯುವಾಗ ಇಡೀ ಕ್ರೀಡಾಂಗಣದಲ್ಲಿ ‘ಜವಾನ್ಸ್’ ಮಯವಾಗಿತ್ತು.

ಸ್ಟೇಡಿಯಂನಲ್ಲಿ ನೆರೆದಿದ್ದ ನಿರ್ದೇಶಕ ಅಟ್ಲಿ ಅವರ ಅಭಿಮಾನಿಗಳ ಹರ್ಷೋದ್ಗಾರ ಹಾಗೂ ಬೆಂಬಲದಿಂದ ಪಂದ್ಯಕ್ಕೆ ಮತ್ತಷ್ಟು ಮೆರುಗು ಬಂದಿತ್ತು. ತಮ್ಮ ತಂಡ ಗೆದ್ದಿದ್ದಕ್ಕೆ ಅಟ್ಲಿ ಅವರಿಗೆ ಸಖತ್ ಖುಷಿ ಆಗಿದೆ.