ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್ ವಿವಾಹ ವಾರ್ಷಿಕೋತ್ಸವ ಹೀಗಿತ್ತು
Priyanka Chopra: ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಅವರುಗಳು ಇತ್ತೀಚೆಗಷ್ಟೆ ತಮ್ಮ ಆರನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿದ್ದಾರೆ. ಮಗಳನ್ನು ಕರೆದುಕೊಂಡು ಪ್ರವಾಸ ಹೋಗಿದ್ದಾರೆ ಈ ಜೋಡಿ.
1 / 7
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ವಿವಾಹವಾಗಿ ಆರು ವರ್ಷಗಳಾಗಿವೆ. 2018 ರ ಡಿಸೆಂಬರ್ ತಿಂಗಳಲ್ಲಿ ಅವರು ವಿವಾಹವಾಗಿದ್ದರು. ಭಾರತದಲ್ಲಿ ಬಲು ಅದ್ಧೂರಿಯಾಗಿ ಅವರ ವಿವಾಹ ನಡೆದಿತ್ತು.
2 / 7
ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಅವರುಗಳು ಇತ್ತೀಚೆಗಷ್ಟೆ ತಮ್ಮ ಆರನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿದ್ದಾರೆ. ಮಗಳನ್ನು ಕರೆದುಕೊಂಡು ಪ್ರವಾಸ ಹೋಗಿದ್ದಾರೆ ಈ ಜೋಡಿ.
3 / 7
ಮಗಳೊಟ್ಟಿಗೆ ಹಲವೆಡೆ ಸುತ್ತಾಟ ನಡೆಸಿರುವ ನಿಕ್ ಜೋನಸ್ ಮತ್ತು ಪ್ರಿಯಾಂಕಾ ಚೋಪ್ರಾ, ಮಗಳು ಮಾಲತಿಗೆ ‘ಮೋನಾ 2’ ಸಿನಿಮಾ ಸಹ ತೋರಿಸಿದ್ದಾರೆ. ಮಗಳಿಗೆ ಕ್ರಿಸ್ಮಸ್ ಟ್ರೀ ತೋರಿಸಿದ್ದಾರೆ. ಮಗಳಿಗೆ ಸಿಂಗಾರ ಸಹ ಮಾಡಿದ್ದಾರೆ.
4 / 7
ಪ್ರಿಯಾಂಕಾ ಚೋಪ್ರಾ 2016-17 ರ ಸಮಯದಲ್ಲಿ ಬಾಲಿವುಡ್ನಿಂದ ಹಾಲಿವುಡ್ಗೆ ಶಿಫ್ಟ್ ಆದರು. 2017 ರಲ್ಲಿ ಅವರು ಪಾರ್ಟಿಯೊಂದರಲ್ಲಿ ನಿಕ್ ಜೋನಸ್ ಅನ್ನು ಭೇಟಿಯಾದರು. ಅಲ್ಲಿಂದ ಅವರ ನಡುವೆ ಪ್ರೀತಿ ಬೆಳೆಯಿತು.
5 / 7
ನಿಕ್ ಜೋನಸ್ ಅನ್ನು ವಿವಾಹವಾದ ಬಳಿಕ ಪ್ರಿಯಾಂಕಾ ಚೋಪ್ರಾ ಸಂಪೂರ್ಣವಾಗಿ ಹಾಲಿವುಡ್ನಲ್ಲೇ ಸೆಟಲ್ ಆಗಿದ್ದಾರೆ. ಬೆವರ್ಲಿ ಹಿಲ್ಸ್ ನಲ್ಲಿ ಒಂದು ಮನೆ ಹಾಗೂ ಲಂಡನ್ನಲ್ಲಿ ಒಂದು ಮನೆಯನ್ನು ಪ್ರಿಯಾಂಕಾ ಹೊಂದಿದ್ದಾರೆ.
6 / 7
ನಿಕ್ ಜೋನಸ್ ಅನ್ನು ವಿವಾಹವಾದ ಬಳಿಕ ಪ್ರಿಯಾಂಕಾ ಚೋಪ್ರಾ ಸಂಪೂರ್ಣವಾಗಿ ಹಾಲಿವುಡ್ನಲ್ಲೇ ಸೆಟಲ್ ಆಗಿದ್ದಾರೆ. ಬೆವರ್ಲಿ ಹಿಲ್ಸ್ ನಲ್ಲಿ ಒಂದು ಮನೆ ಹಾಗೂ ಲಂಡನ್ನಲ್ಲಿ ಒಂದು ಮನೆಯನ್ನು ಪ್ರಿಯಾಂಕಾ ಹೊಂದಿದ್ದಾರೆ.
7 / 7
ಇತ್ತೀಚೆಗಷ್ಟೆ ನಿಕ್ ಜೋನಸ್ ಹಾಗೂ ಪ್ರಿಯಾಂಕಾ ಚೋಪ್ರಾ ಅವರುಗಳು ಸೆರೋಗಸಿ ವಿಧಾನದ ಮೂಲಕ ಹೆಣ್ಣು ಮಗುವನ್ನು ಪಡೆದಿದ್ದಾರೆ. ಮಗುವಿಗೆ ಮಾಲತಿ ಜೋನಸ್ ಎಂದು ಹೆಸರಿಟ್ಟಿದೆ ಈ ಜೋಡಿ.