Pumpkin: ರೋಗ ನಿರೋಧಕ ಶಕ್ತಿ ವೃದ್ಧಿಗೆ ಸಹಕಾರಿ ಕುಂಬಳಕಾಯಿ
TV9 Web | Updated By: Pavitra Bhat Jigalemane
Updated on:
Feb 05, 2022 | 12:45 PM
ಉತ್ತರ ಅಮೆರಿಕಾದಲ್ಲಿ ಹುಟ್ಟಿ ಇದೀಗ ಭಾರತದಲ್ಲೂ ಆಹಾರ ಪ್ರಿಯರ ಪಟ್ಟಿಗೆ ಸೇರಿದ ಕುಂಬಳಕಾಯಿ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿದೆ. ದಿನನಿತ್ಯ ಕುಂಬಳಕಾಯಿಯ ಬಳಕೆಯಿದ್ದರೆ ಆರೋಗ್ಯಕ್ಕೆ ಬೂಸ್ಟರ್ ಇದ್ದಂತೆ ಎನ್ನುತ್ತಾರೆ ವೈದ್ಯರು.
1 / 10
ಉತ್ತರ ಅಮೆರಿಕಾ ಮೂಲದ ಕುಂಬಳಕಾಯಿ ಸಾಕಷ್ಟು ಔಷಧಿಯ ಗುಣಗಳನ್ನು ಹೊಂದಿದೆ. ಯಥೇಚ್ಛವಾದ ವಿಟಮಿನ್, ಮಿನರಲ್ಸ್ಗಳನ್ನು ಹೊಂದಿರುವ ಕುಂಬಳಕಾಯಿ ಭಾರತದಲ್ಲೂ ಹೆಚ್ಚು ಪ್ರಸ್ತುತವಾಗಿದೆ.
2 / 10
ಕುಂಬಳಕಾಯಿಯಲ್ಲಿರು ಫೈಬರ್ ಮತ್ತು ಕಡಿಮೆ ಕ್ಯಾಲೋರಿಗಳು ದೇಹದ ತೂಕ ನಷ್ಟಕ್ಕೆ ಸಹಾಯಕವಾಗಿದೆ.
3 / 10
ಕುಂಬಳಕಾಯಿಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಅಂಶಗಳು ದೀರ್ಘಕಾಲದ ರೋಗಗಳನ್ನು ತಡೆಯುತ್ತದೆ.
4 / 10
ಕಣ್ಣಿನ ಆರೋಗ್ಯಕ್ಕೆ ಬೇಕಾದ ವಿಟಮಿನ್ ಎ ಅಂಶಗಳು ಕುಂಬಳಕಾಯಿಯಲ್ಲಿದೆ. ಹೀಗಾಗಿ ಕುಂಬಳಕಾಯಿಯ ಸೇವನೆಯಿಂದ ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು.
5 / 10
ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕುಂಬಳಕಾಯಿ ಹೆಚ್ಚು ನೆರವಾಗುತ್ತದೆ. ಕುಂಬಳಕಾಯಿಯನ್ನು ಸೇವಿಸುವುದರಿದ ಬಿಳಿ ರಕ್ಕಣಗಳ ಅಭಿವೃದ್ಧಿಯಾಗುತ್ತದೆ.
6 / 10
ಕ್ಯಾನ್ಸರ್ಅನ್ನು ನಿಯಂತ್ರಿಸಲು ಕೂಡ ಕುಂಬಳಕಾಯಿ ಸಹಾಯಕವಾಗಿದೆ. ಇದರಲ್ಲಿನ ಆಲ್ಫಾ ಮತ್ತು ಬೀಟಾ ಕಾರಟಿನ್ ಅಂಶಗಳು ಕೆಲವು ಬಗೆಯ ಕ್ಯಾನ್ಸರ್ಅನ್ನು ನಿಯಂತ್ರಿಸುತ್ತದೆ ಎಂದು ಅಧ್ಯಯಯನದಲ್ಲಿ ಸಾಬೀತಾಗಿದೆ.
7 / 10
ಪೊಟಾಷಿಯಂ, ವಿಟಮಿನ್ ಸಿ ಅಂಶಗಳು ಹೃದಯದ ಆರೋಗ್ಯಕ್ಕೂ ಒಳಿತು. ಕುಂಬಳಕಾಯಿ ಜ್ಯೂಸ್ ರೀತಿಯಲ್ಲಿ ಸೇವಿಸದರೆ ಆರೋಗ್ಯಕ್ಕೆ ಇನ್ನೂ ಉತ್ತಮ.
8 / 10
ಕಾಂತಿಯುತ ಚರ್ಮ ಪಡೆಯಲು ಕುಂಬಳಕಾಯಿ ಸಹಕಾರಿಯಾಗಿದೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಗುಣಗಳು ಮೊಡವೆಗಳ ನಿವಾರಣೆಗೂ ಸಹಾಯಕವಾಗಿದೆ.
9 / 10
ದೇಹದಲ್ಲಿನ ರಕ್ತದೊತ್ತಡ ಕಡಿಮೆ ಮಾಡಿ, ಕುಂಬಳಕಾಯಿಯು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನೂ ನಿಯಂತ್ರಿಸುತ್ತದೆ. ಇದರಿಂದ ಮಧುಮೇಹವೂ ನಿಯಂತ್ರಣದಲ್ಲಿರುತ್ತದೆ.
10 / 10
ನಿಮ್ಮ ಡಯೆಟ್ ಪಟ್ಟಿಗೆ ಕುಂಬಳಕಾಯಿ ಸಂಪೂರ್ಣ ಆಹಾರವಾಗಲಿದೆ. ಮಧುಮೇಹಿಗಳಿಗೂ ಕುಂಬಳಕಾಯಿ ಉತ್ತಮ ಆಹಾರ ಎನ್ನುತ್ತಾರೆ.
Published On - 10:39 am, Sat, 5 February 22