Updated on: Mar 12, 2022 | 3:37 PM
ಪುನೀತ್ ರಾಜ್ಕುಮಾರ್ ಮೇಲೆ ಫ್ಯಾನ್ಸ್ಗೆ ಇದ್ದ ಅಭಿಮಾನ ಹಾಗೂ ಪ್ರೀತಿ ಅಷ್ಟಿಷ್ಟಲ್ಲ. ಇದನ್ನು ನಾನಾ ರೀತಿಯಲ್ಲಿ ವ್ಯಕ್ತಪಡಿಸಲಾಗುತ್ತಿದೆ. ಅವರ ಕೊನೆಯ ಸಿನಿಮಾ ‘ಜೇಮ್ಸ್’ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈ ಸಿನಿಮಾ ತೆರೆಗೆ ಬರೋಕೆ ಇನ್ನು ಐದು ದಿನ ಮಾತ್ರ ಬಾಕಿ ಇದೆ.
‘ಜೇಮ್ಸ್’ ತೆರೆಕಾಣುವುದಕ್ಕೂ ಒಂದು ವಾರ ಮೊದಲೇ ಸಿನಿಮಾದ ಪ್ರೀ-ಬುಕಿಂಗ್ ಆರಂಭಗೊಂಡಿತ್ತು. ಬುಕ್ ಮೈ ಶೋ ಆ್ಯಪ್ ಮೂಲಕ ಆನ್ಲೈನ್ನಲ್ಲಿ ಟಿಕೆಟ್ಗಳನ್ನು ಮಾರಾಟ ಮಾಡಲಾಗುತ್ತಿದೆ. ಮಾರ್ಚ್ 17ರ ಟಿಕೆಟ್ಗಳು ಈಗಾಗಲೇ ಮಾರಾಟವಾಗುತ್ತಿದೆ.
ಮುಂಜಾನೆ 6 ಗಂಟೆಗೆ ‘ಜೇಮ್ಸ್’ ವಿಶೇಷ ಶೋ ಏರ್ಪಡಿಸಲಾಗಿದೆ. ಇದನ್ನು ಕಣ್ತುಂಬಿಕೊಳ್ಳೋಕೆ ಫ್ಯಾನ್ಸ್ ಮುಗಿಬೀಳುತ್ತಿದ್ದಾರೆ. ಹೀಗಾಗಿ, ಮುಂಜಾನೆ ಶೋಗೂ ಬೇಡಿಕೆ ಸೃಷ್ಟಿಯಾಗುತ್ತಿದೆ. ಪರಿಣಾಮ ಅನೇಕ ಶೋಗಳ ಟಿಕೆಟ್ಗಳು ಈಗಾಗಲೇ ಸೋಲ್ಡ್ಔಟ್ ಆಗಿವೆ.
ಬೆಂಗಳೂರಿನಲ್ಲಿ ಸದ್ಯ 200 ಶೋಗಳ ಟಿಕೆಟ್ಗಳನ್ನು ಮಾರಾಟಕ್ಕೆ ಇಡಲಾಗಿದೆ. ಇದರಲ್ಲಿ ಕೆಲ ಶೋಗಳ ಟಿಕೆಟ್ಗಳು ಸೋಲ್ಡ್ಔಟ್ ಆಗಿದೆ. ಇನ್ನೂ ಕೆಲ ಶೋಗಳು ಟಿಕೆಟ್ಗಳು ಫಿಲ್ಲಿಂಗ್ ಫಾಸ್ಟ್ ತೋರಿಸುತ್ತಿವೆ.
ಹಂತಹಂತವಾಗಿ ಶೋಗಳನ್ನು ಆನ್ಲೈನ್ನಲ್ಲಿ ಬಿಡಲಾಗುತ್ತಿದೆ. ಕರ್ನಾಟಕದಾದ್ಯಂತ ಶೇ.80 ಚಿತ್ರಮಂದಿರಗಳಲ್ಲಿ ಜೇಮ್ಸ್ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಇದರಿಂದ ಈ ಚಿತ್ರ ಭರ್ಜರಿ ಕಲೆಕ್ಷನ್ ಮಾಡುವ ಸೂಚನೆ ಸಿಕ್ಕಿದೆ.