- Kannada News Photo gallery Puri Jagannath Rath Yatra Union Minister Ashwini Vaishnaw and Dharmendra Pradhan meet Shankaracharya Swami Nischalananda Saraswati
ಪುರಿ ಜಗನ್ನಾಥ ರಥಯಾತ್ರೆಗೂ ಮುನ್ನ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಭೇಟಿಯಾದ ಧರ್ಮೇಂದ್ರ ಪ್ರಧಾನ್, ಅಶ್ವಿನಿ ವೈಷ್ಣವ್
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಪುರಿ ಜಗನ್ನಾಥ ರಥಯಾತ್ರೆಗೂ ಮುನ್ನ ಮಂಗಳವಾರ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
Updated on: Jun 20, 2023 | 10:17 PM

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಜೂನ್ 19 ರಿಂದ 3 ದಿನಗಳ ಒಡಿಶಾ ಪ್ರವಾಸದಲ್ಲಿದ್ದಾರೆ. ಸೋಮವಾರವೇ ರಥಯಾತ್ರೆಗಾಗಿ ಯಾತ್ರಾರ್ಥಿಗಳಿಗೆ ಮಾಡಲಾದ ವ್ಯವಸ್ಥೆಗಳನ್ನು ಪರಿಶೀಲಿಸಿದ್ದ ಅವರು, ಮಂಗಳವಾರದಂದು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಮಹಾಪ್ರಭು ಜಗನ್ನಾಥರ ರಥಯಾತ್ರೆಯ ಭವ್ಯತೆ ಮನಮೋಹಕವಾಗಿದೆ. ರಥಯಾತ್ರೆಯಲ್ಲಿ ಭಾಗವಹಿಸಲು ಪುರಿಯಲ್ಲಿ ಲಕ್ಷಾಂತರ ಭಕ್ತರು ಸೇರಿಕೊಂಡಿದ್ದಾರೆ. ಮಹಾಪ್ರಭುವಿನ ಪಾದಗಳಿಗೆ ನಮಸ್ಕರಿಸಿದ್ದೇವೆ. ಸರ್ವಶಕ್ತನು ನಮಗೆ ‘ಸನ್ಮಾರ್ಗ’ದ ಹಾದಿಯಲ್ಲಿ ಮಾರ್ಗದರ್ಶನ ನೀಡಲಿ ಮತ್ತು ನಮ್ಮೆಲ್ಲರನ್ನು ಆಶೀರ್ವದಿಸಲಿ. ಜೈ ಜಗನ್ನಾಥ ಎಂದು ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡಿದ್ದಾರೆ.

ಇಂದು ನಾವು ರಥಯಾತ್ರೆಯಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಬಂದಿದ್ದೇವೆ. ಜಗನ್ನಾಥರ ರಥಯಾತ್ರೆಯಲ್ಲಿ ಪಾಲ್ಗೊಳ್ಳುವುದು ಒಂದು ಸೌಭಾಗ್ಯ. ಇಂದು ಮಹಾಪ್ರಭುವಿನ ಆದೇಶದಂತೆ ನಾವು ರಥಯಾತ್ರೆಗೆ ಬಂದಿದ್ದೇವೆ. ಅದಕ್ಕೂ ಮುನ್ನ ಪೂಜ್ಯ ಶಂಕರಾಚಾರ್ಯದ ದರ್ಶನವನ್ನೂ ಪಡೆದು ಆಶೀರ್ವಾದ ಪಡೆದೆವು ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತದ ಹೆಸರು ವಿಶ್ವದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುತ್ತಿದೆ. ಭಾರತದ ಹೆಸರು ಇನ್ನಷ್ಟು ಬೆಳಗಲಿ ಎಂದು ಪ್ರಾರ್ಥಿಸಿದೆವು. ಇದಕ್ಕಾಗಿ ಶಂಕರಾಚಾರ್ಯರ ಆಶೀರ್ವಾದ ಬೇಡಿದೆವು ಎಂದು ಪ್ರಧಾನ್ ಹೇಳಿದ್ದಾರೆ.

ಮಹಾಪ್ರಭು ಶ್ರೀ ಜಗನ್ನಾಥ ಜೀ ಅವರ ಜಗತ್ಪ್ರಸಿದ್ಧ ರಥಯಾತ್ರೆ ಪ್ರಾರಂಭವಾಗುತ್ತಿದೆ. ಇದರಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ಹರ್ಷವಾಗುತ್ತಿದೆ ಎಂದು ಅಶ್ವಿನಿ ವೈಷ್ಣವ್ ಕೂಡ ಟ್ವೀಟ್ ಮಾಡಿದ್ದರು. ಪುರಿಯಲ್ಲಿ ವಿಶ್ವವಿಖ್ಯಾತ ಜಗನ್ನಾಥ ರಥಯಾತ್ರೆ ಮಂಗಳವಾರ ಪ್ರಾರಂಭವಾಗಿದ್ದು, ಭಕ್ತರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಕೂಡ ಶುಭ ಹಾರೈಸಿದ್ದಾರೆ.




