ಯಾದಗಿರಿ ಲುಂಬಿನಿ ಉದ್ಯಾನವನದಲ್ಲಿ ನಿರ್ಮಾಣಗೊಂಡ ಪುಷ್ಪಲೋಕ; ಹೂವು-ಹಣ್ಣುಗಳಿಂದ ನಿರ್ಮಾಣವಾದ ಸಾಧಕರ ಚಿತ್ರಗಳು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 27, 2024 | 3:33 PM

ಯಾದಗಿರಿ ನಗರದ ಪ್ರಮುಖವಾದ ಉದ್ಯಾನವನ ನೋಡಲು ಬಲು ಸುಂದರವಾಗಿದೆ. ಆದ್ರೆ, ಅದೇ ಉದ್ಯಾನವನದಲ್ಲಿ ಇವತ್ತು ಪುಷ್ಪ ಲೋಕವೇ ಅನಾವರಣಗೊಂಡಿತ್ತು. ನಾನಾ ರೀತಿಯ ಹಣ್ಣು ಮತ್ತು ಹೂವುಗಳಿಂದ ಸಿಂಗಾರಗೊಳಿಸಲಾಗಿತ್ತು.. ನೋಡಲು ಬಂದಿದ್ದ ಜನ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು. ಹೇಗಿತ್ತು ಫಲಪುಷ್ಪ ಪ್ರದರ್ಶನ ಅಂತೀರಾ? ಇಲ್ಲಿದೆ ಅದರ ಝಲಕ್​.

1 / 9
ಯಾದಗಿರಿ ನಗರದ ಲುಂಬಿನಿ ಉದ್ಯಾನವನದಲ್ಲಿ ತೋಟಗಾರಿಕೆ ಇಲಾಖೆಯಿಂದ ಮೂರು ದಿನದ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು, ನಿನ್ನೆ ಆರಂಭವಾದ ಫಲಪುಷ್ಪ ಪ್ರದರ್ಶನ ನೋಡಲು ಇವತ್ತು ಜನಸಾಗರವೇ ಹರಿದು ಬಂದಿದ್ದು, ಇಡೀ ಕುಟುಂಬ ಸಮೇತರಾಗಿ ಬಂದು ಪುಷ್ಪ ಲೋಕವನ್ನ ಕಣ್ತುಂಬಿಕೊಂಡರು.

2 / 9
ಅದರಲ್ಲೂ ವಿಶೇಷವಾಗಿ ಯಾದಗಿರಿ ಜಿಲ್ಲೆಯ ನಾನಾ ಭಾಗದಲ್ಲಿ ರೈತರೆ ಬೆಳೆದಿರುವ ಹೂವು ಮತ್ತು ಹಣ್ಣುಗಳನ್ನ ಪ್ರದರ್ಶನಕ್ಕೆ ಇಡಲಾಗಿತ್ತು. ಜೊತೆಗೆ ಬೇರೆ ಜಿಲ್ಲೆಯಿಂದ ಕೆಲ ಹೂವುಗಳನ್ನ ತಂದು ಸಿಂಗಾರಗೊಳಿಸಲಾಗಿತ್ತು.

3 / 9
ಅದರಲ್ಲೂ ಹೂವಿನಲ್ಲಿಯೇ ಸುಂದರವಾದ ಕೆಂಪುಕೋಟೆ ನಿರ್ಮಾಣ ಮಾಡಲಾಗಿದ್ದು, ಈ ಹೂವಿನ ಕೋಟೆಯನ್ನ ನೋಡಿ ಜನ ತಮ್ಮ ಕೈಯಲ್ಲಿದ್ದ ಮೊಬೈಲ್​ನಿಂದ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.

4 / 9
ಇನ್ನು ಕಲ್ಲಂಗಡಿ ಹಣ್ಣಿನಲ್ಲಿ ರಾಮ-ಸೀತೆ ಜೊತೆಗೆ ನಿಂತಿದ್ದು, ಶಿವಲಿಂಗ, ಆಂಜನೇಯನ ಚಿತ್ರ, ಸಿದ್ದೇಶ್ವರ ಶ್ರೀ, ಡಾ. ಬಿಆರ್ ಅಂಬೇಡ್ಕರ್,ಮಹಾತ್ಮ ಗಾಂಧಿ, ಸುಭಾಶ್ಚಂದ್ರ ಬೋಸ್, ಜವಹಾರ್ ಲಾಲ್ ನೆಹರು, ಭಗತ್ ಸಿಂಗ್ ಜೊತೆಗೆ ಬಸವೇಶ್ವರ ಚಿತ್ರಗಳನ್ನ ಕಲ್ಲಂಗಡಿ ಮತ್ತು ಕುಂಬಳಕಾಯಿಯಲ್ಲಿ ಅದ್ಬುತ ರೀತಿಯಲ್ಲಿ ಕೆತ್ತನೆ ಮಾಡಲಾಗಿದೆ.

5 / 9
ಇದು ಫಲಪುಷ್ಪ ಪ್ರದರ್ಶನದಲ್ಲಿ ಪ್ರಮುಖವಾದ ಆಕರ್ಷಕವಾಗಿದ್ದು, ಇನ್ನು ನೂರಾರು ಜನ ಫಲಪುಷ್ಪ ಪ್ರದರ್ಶನದಲ್ಲಿ ಭಾಗಿಯಾಗಿ ಸೆಲ್ಪಿ ಕ್ಲಿಕ್ಕಿಸಿಕೊಂಡು ಸಕತ್ ಆಗಿ ಎಂಜಾಯ್ ಮಾಡಿದ್ದಾರೆ. ಇದು ಒಂದು ಕಡೆಯಾದ್ರೆ ಇನ್ನೊಂದು ಕಡೆ ಕೇವಲ ಹೂವುಗಳಿಂದ ನಾನಾ ರೀತಿಯ ಐತಿಹಾಸಿಕ ವಸ್ತುಗಳನ್ನ ನಿರ್ಮಾಣ ಮಾಡಲಾಗಿತ್ತು. ಜಿಲ್ಲೆಯ ಪ್ರಮುಖವಾದ ನಾರಾಯಣಪುರ ಜಲಾಶಯ ನಿರ್ಮಾಣ ಮಾಡಲಾಗಿತ್ತು. ಸುಂದರವಾಗಿ ನಿರ್ಮಾಣ ಮಾಡಲಾಗಿದ್ದ ಜಲಾಶಯದ ಮುಂದೆ ನಿಂತ ಜನ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ರು.

6 / 9
ಈ ವರ್ಷ ಕ್ರಿಕೆಟ್ ವಿಶ್ವಕಪ್ ಆಗಿದ್ದರಿಂದ ಕ್ರಿಕೇಟ್ ಮೈದಾನ ಹಾಗೂ ಪಿಚ್ ನಿರ್ಮಾಣ ಮಾಡಿ ಹೂವುಗಳಿಂದ ಬ್ಯಾಟ್ ಮತ್ತು ಬಾಲ್ ನಿರ್ಮಿಸಲಾಗಿದೆ. ಇದರ ಜೊತೆಗೆ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ,ಶಾಸಕ ಚೆನ್ನಾರೆಡ್ಡಿ ಪಾಟೀಲ್, ಶರಣಗೌಡ ಕಂದಕೂರ್,ರಾಜಾ ವೆಂಕಟಪ್ಪ ನಾಯಕ ಸೇರಿದಂತೆ ಜಿಲ್ಲೆಯ ಸಂಬಂಧಿಸಿದ ಪರಿಷತ್ ಸದಸ್ಯರು ಹಾಗೂ ಡಿಸಿ,ಎಸ್ ಪಿ ಹಾಗೂ ಸಿಇಒ ಸೇರಿದಂತೆ ಹಲವು ಜನ ಅಧಿಕಾರಿಗಳ ಚಿತ್ರಗಳನ್ನ ಹಣ್ಣುಗಳಲ್ಲಿ ಬಿಡಿಸಲಾಗಿತ್ತು.

7 / 9
ಇನ್ನು ವಿವಿಧ ಜಾತಿ ತರಕಾರಿಗಳಿಂದ ಗಿಳಿ, ನವಿಲು ಸೇರಿದಂತೆ ನಾನಾ ರೀತಿಯ ಪಕ್ಷಿಗಳ ಸ್ತಬ್ದ ಚಿತ್ರಗಳನ್ನ ಬಿಡಿಸಲಾಗಿತ್ತು.. ಇದರ ಜೊತೆಗೆ ಕೆಂಪು ಮತ್ತು ಹಳದಿ ಬಣ್ಣದ ಹೂವುಗಳಿಂದ ಕರ್ನಾಟಕ ನಕಾಶೆಯನ್ನ ನಿರ್ಮಾಣ ಮಾಡಲಾಗಿತ್ತು. ಹೂವುಗಳಿಂದ ನಿರ್ಮಾಣವಾಗಿದ್ದ ಉದ್ಯೋಗ ಖಾತ್ರಿ ಯೋಜನೆಯ ಲೋಗೋ ಜನರಲ್ಲಿ ನರೇಗಾ ಬಗ್ಗೆ ಜಾಗೃತಿ ಮೂಡಿಸುವಂತಿದೆ.

8 / 9
ಇದರ ಜೊತೆಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ತೋಟಗಾರಿಕೆ ಬೆಳೆಯನ್ನ ಯಾವ ರೀತಿ ಬೆಳೆಯಬೇಕು ಇಲಾಖೆಯಿಂದ ಯಾವ ರೀತಿ ಸಹಾಯ ಸಿಗುತ್ತೆ ಎನ್ನುವ ಬಗ್ಗೆ ರೈತರಿಗೆ ಮಾಹಿತಿ ನೀಡ್ತಾಯಿದ್ರು. ಜೊತೆಗೆ ಜಿಲ್ಲೆಯಲ್ಲಿ ಬೆಳೆದ ಬೇರೆ ಜಿಲ್ಲೆಗಳಲ್ಲಿ ಬೆಳೆಯುವ ಬೆಳೆಗಳ ಬಗ್ಗೆ ಜಿಲ್ಲೆಯ ರೈತರಿಗೆ ಮಾಹಿತಿ ನೀಡುತ್ತಿದ್ದಾರೆ.

9 / 9
ಒಟ್ನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಯಾದಗಿರಿ ನಗರದ ಲುಂಬಿನಿ ವನದಲ್ಲಿ ಪುಷ್ಪಲೋಕವೆ ಅನಾವರಣಗೊಂಡಿತ್ತು. ನಗರದಲ್ಲಿ ಇಂತಹ ಕಾರ್ಯಕ್ರಮ ಆಯೋಜನೆ ಮಾಡಿದ್ದಕ್ಕಾಗಿ ಜನ ಉತ್ಸಾಹ ಮತ್ತು ಸಂತೋಷದಿಂದ ಬಂದು ಭಾಗವಹಿಸುತ್ತಿದ್ದಾರೆ.

Published On - 3:32 pm, Sat, 27 January 24