Pooja Hegde: ಲೆಹೆಂಗಾ ಧರಿಸಿ ಮಿಂಚಿದ ನಟಿ ಪೂಜಾ ಹೆಗ್ಡೆ; ಕರಾವಳಿ ಬೆಡಗಿಯ ಸೌಂದರ್ಯಕ್ಕೆ ಫ್ಯಾನ್ಸ್​ ಫಿದಾ

| Updated By: ಮದನ್​ ಕುಮಾರ್​

Updated on: Nov 12, 2021 | 11:45 AM

ನಟಿ ಪೂಜಾ ಹೆಗ್ಡೆ ಅವರು ಬಹುಭಾಷೆಯಲ್ಲಿ ಫೇಮಸ್​ ಆಗಿದ್ದಾರೆ. ಟಾಲಿವುಡ್​ ಮತ್ತು ಬಾಲಿವುಡ್​ ಸಿನಿಮಾಗಳಲ್ಲಿ ಅವರು ಮಿಂಚುತ್ತಿದ್ದಾರೆ. ಈ ಕರಾವಳಿ ಬೆಡಗಿಯ ಫ್ಯಾಷನ್​ ಸೆನ್ಸ್​ ಎಲ್ಲರಿಗೂ ಇಷ್ಟ. ಇತ್ತೀಚೆಗೆ ಅವರು ಲೆಹೆಂಗಾ ಧರಿಸಿ ಪೋಸ್​ ನೀಡಿದ್ದಾರೆ. ಆ ಫೋಟೋಗಳು ವೈರಲ್​ ಆಗಿವೆ.

1 / 6
ಮೂಲತಃ ಕನ್ನಡದವರಾದರೂ ನಟಿ ಪೂಜಾ ಹೆಗ್ಡೆ ಹೆಚ್ಚು ಸಕ್ರಿಯವಾಗಿರುವುದು ತೆಲುಗು ಚಿತ್ರರಂಗದಲ್ಲಿ. ಅಲ್ಲಿ ಅವರಿಗೆ ಸಖತ್​ ಡಿಮ್ಯಾಂಡ್​ ಸೃಷ್ಟಿ ಆಗಿದೆ.

2 / 6
ಬಾಲಿವುಡ್​ ಸಿನಿಮಾಗಳಲ್ಲೂ ಪೂಜಾ ಹೆಗ್ಡೆ ಅಭಿನಯಿಸುತ್ತಿದ್ದಾರೆ. ಸ್ಟಾರ್​ ನಟರ ಚಿತ್ರಗಳಿಗೆ ಅವರು ನಾಯಕಿ ಆಗಿದ್ದಾರೆ. ಹಲವು ಆಫರ್​ಗಳು ಸದ್ಯ ಅವರ ಕೈಯಲ್ಲಿವೆ.

3 / 6
ಅಲ್ಲು ಅರ್ಜುನ್​ ಜೊತೆ ನಟಿಸಿದ ‘ಅಲಾ ವೈಕುಂಟಪುರಮುಲೋ’ ಸಿನಿಮಾದಿಂದ ಪೂಜ ಹೆಗ್ಡೆಗೆ ಕಳೆದ ವರ್ಷ ಭರ್ಜರಿ ಗೆಲುವು ಸಿಕ್ಕಿತ್ತು. ಈ ವರ್ಷ ಅವರ ‘ಮೋಸ್ಟ್​ ಎಲಿಜಬಲ್​ ಬ್ಯಾಚುಲರ್​’ ಚಿತ್ರ ಕೂಡ ಗೆದ್ದಿದೆ.

4 / 6
ಪ್ರಭಾಸ್​ ಮತ್ತು ಪೂಜಾ ಹೆಗ್ಡೆ ಜೋಡಿಯಾಗಿ ನಟಿಸಿರುವ ‘ರಾಧೆ ಶ್ಯಾಮ್​’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. 2022ರ ಜ.14ರಂದು ಈ ಚಿತ್ರ ರಿಲೀಸ್​ ಆಗಿಲಿದೆ. ಈಗಾಗಲೇ ಟೀಸರ್​ಗಳು ಹೈಪ್​ ಸೃಷ್ಟಿಸಿವೆ.

5 / 6
ಬಹುನಿರೀಕ್ಷಿತ ‘ಆಚಾರ್ಯ’ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ರಾಮ್​ ಚರಣ್​ಗೆ ಜೋಡಿ ಆಗಿದ್ದಾರೆ. ಇತ್ತೀಚೆಗೆ ಈ ಚಿತ್ರದ ಎರಡನೇ ಸಾಂಗ್​ ರಿಲೀಸ್​ ಆಗಿ, ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ.

6 / 6
ದೊಡ್ಡ ಗ್ಯಾಪ್​ ಬಳಿಕ ಪೂಜಾ ಹೆಗ್ಡೆ ಅವರು ತಮಿಳು ಚಿತ್ರರಂಗಕ್ಕೂ ಕಾಲಿಡುತ್ತಿದ್ದಾರೆ. ದಳಪತಿ ವಿಜಯ್​ ನಟನೆಯ ‘ಬೀಸ್ಟ್​’ ಚಿತ್ರಕ್ಕೆ ಅವರು ನಾಯಕಿ ಆಗಿದ್ದಾರೆ. ಈ ಚಿತ್ರದ ಮೇಲೆ ಅಭಿಮಾನಿಗಳು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.