Updated on: Jun 06, 2023 | 7:02 AM
ಎಲ್ಲೇ ಸುತ್ತಾಡಲು ಹೋದರು ರಾಧಿಕಾ ಪಂಡಿತ್ ಅವರ ಕೈನ ಹಿಡಿದೇ ಓಡಾಡುತ್ತಾರೆ ಯಶ್. ಪತ್ನಿ ಮೇಲೆ ಅವರಿಗೆ ಅಪಾರವಾದ ಪ್ರೀತಿ. ಇದು ಮತ್ತೊಮ್ಮೆ ಸಾಬೀತಾಗಿದೆ. ಈ ಫೋಟೋ ವೈರಲ್ ಆಗುತ್ತಿದೆ. (PC: Brides Of Karnatakaa)
ಅಭಿಷೇಕ್ ಹಾಗೂ ಅವಿವಾ ಜೂನ್ 5ರಂದು ಅದ್ದೂರಿಯಾಗಿ ಮದುವೆ ಆಗಿದ್ದಾರೆ. ಮದುವೆ ಸಂಭ್ರಮಕ್ಕೆ ಚಿತ್ರರಂಗ ಸಾಕ್ಷಿಯಾಗಿದೆ. ಸಖತ್ ಅದ್ದೂರಿಯಾಗಿ ಮದುವೆ ನಡೆದಿದೆ. (PC: Brides Of Karnatakaa)
ಈ ಮದುವೆಗೆ ಯಶ್ ಹಾಗೂ ರಾಧಿಕಾ ಪಂಡಿತ್ ಹಾಜರಿ ಹಾಕಿದ್ದರು. ಈ ವೇಳೆ ಇವರು ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ‘ಯಾರಾದರೂ ದೃಷ್ಟಿ ತೆಗೆಯಿರಿ’ ಎಂಬ ಕಮೆಂಟ್ ಈ ಫೋಟೋಗೆ ಬಂದಿದೆ. (PC: Brides Of Karnatakaa)
ಅಭಿಷೇಕ್ ಅಂಬರೀಷ್ ಮದುವೆಯನ್ನು ಕಣ್ತುಂಬಿಕೊಂಡು ಸುಮಲತಾ ಖುಷಿಯಾಗಿದ್ದಾರೆ. ಅಭಿಷೇಕ್ ಮದುವೆಗೆ ಎಲ್ಲರೂ ಹಾರೈಸಿದ್ದಾರೆ. (PC: Brides Of Karnatakaa)
ಅಭಿಷೇಕ್ ಮದುವೆ ಬಗ್ಗೆ ಅಂಬರೀಷ್ ಅವರು ಒಂದಷ್ಟು ಕನಸು ಕಂಡಿದ್ದರು. ಅದೇ ರೀತಿಯಲ್ಲಿ ಈ ಮದುವೆ ನಡೆದಿದೆ ಎನ್ನಲಾಗಿದೆ. (PC: Brides Of Karnatakaa)