ಅಮೂಲ್ಯಗೆ ಬೇಬಿ ಶವರ್; ರಾಧಿಕಾ ಪಂಡಿತ್, ಗಣೇಶ್ ಸೇರಿ ಹಲವರು ಭಾಗಿ, ಇಲ್ಲಿವೆ ಫೋಟೋಗಳು

Edited By:

Updated on: Feb 15, 2022 | 5:01 PM

ನಟಿ ಅಮೂಲ್ಯ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ಕುಟುಂಬದವರು ಅವರಿಗೆ ಸೀಮಂತ ಶಾಸ್ತ್ರ ನೆರವೇರಿಸಿದ್ದರು. ಈಗ ಚಿತ್ರರಂಗದವರು ಅಮೂಲ್ಯಗೆ ಬೇಬಿ ಶವರ್ ಮಾಡಿದ್ದಾರೆ.

1 / 9

2 / 9

ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಅದ್ದೂರಿಯಾಗಿ ಪಾರ್ಟಿ ಏರ್ಪಡಿಸಲಾಗಿತ್ತು ಸದ್ಯ, ಈ ಫೋಟೋ ಹಾಗೂ ವಿಡಿಯೋಗಳು ವೈರಲ್​ ಆಗುತ್ತಿವೆ. ಈ ಕಾರ್ಯಕ್ರಮದಲ್ಲಿ ನಟಿ ರಾಧಿಕಾ ಪಂಡಿತ್​, ಹಿರಿಯ ನಟಿ ಶ್ರುತಿ, ಸುಧಾರಾಣಿ, ಉಪೇಂದ್ರ, ಪ್ರಿಯಾಂಕಾ ಉಪೇಂದ್ರ ಮೊದಲಾದವರು ಪಾಲ್ಗೊಂಡಿದ್ದರು.

3 / 9

ತಾಯಿ ಆಗುತ್ತಿರುವ ಸಂಭ್ರಮದಲ್ಲಿರುವ ಅಮೂಲ್ಯ ಅವರಿಗೆ ಎಲ್ಲರೂ ಹರಸಿದರು. ಈ ಖುಷಿಯ ಕ್ಷಣದ ಫೋಟೋಗಳು ಅಭಿಮಾನಿ ವಲಯದಲ್ಲಿ ಸಖತ್​ ವೈರಲ್​ ಆಗುತ್ತಿದೆ. ರಾಜಕೀಯ ಹಿನ್ನೆಲೆಯ ಕುಟುಂಬದವರಾದ ಜಗದೀಶ್​ ಜತೆ ಅಮೂಲ್ಯ ಮದುವೆ 2017ರಲ್ಲಿ ನೆರವೇರಿತ್ತು.

4 / 9

ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಅಮೂಲ್ಯ ಅವರು ಇತ್ತೀಚಿನ ದಿನಗಳಲ್ಲಿ ಯಾವುದೇ ಹೊಸ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಸಂಸಾರದ ಕಡೆಗೆ ಅವರು ಹೆಚ್ಚು ಗಮನ ನೀಡಿದ್ದಾರೆ.

5 / 9

ಬಾಲನಟಿಯಾಗಿಯೇ ಚಿತ್ರರಂಗಕ್ಕೆ ಕಾಲಿಟ್ಟವರು ಅಮೂಲ್ಯ. ನಂತರ ಅವರು ‘ಚೆಲುವಿನ ಚಿತ್ತಾರ’ ಸಿನಿಮಾ ಮೂಲಕ ಹೀರೋಯಿನ್​ ಆಗಿ ಬಡ್ತಿ ಪಡೆದುಕೊಂಡರು. ಚಿಕ್ಕ ವಯಸ್ಸಿನಲ್ಲಿಯೇ ಸ್ಟಾರ್​ ಹೀರೋಯಿನ್​ ಆಗಿ ಮಿಂಚಿದರು.

6 / 9

ಗಣೇಶ್​, ಯಶ್​, ಲವ್ಲೀ ಸ್ಟಾರ್​ ಪ್ರೇಮ್​, ಕೃಷ್ಣ ಅಜಯ್​ ರಾವ್​, ದುನಿಯಾ ವಿಜಯ್​ ಮುಂತಾದ ಸ್ಟಾರ್​ ಕಲಾವಿದರಿಗೆ ಅವರು ಜೋಡಿಯಾಗಿ ನಟಿಸಿದರು. ‘ನಾನು ನನ್ನ ಕನಸು’ ಸಿನಿಮಾದಲ್ಲಿ ಬಹುಭಾಷಾ ಕಲಾವಿದ ಪ್ರಕಾಶ್​ ರೈ ಜತೆ ತೆರೆಹಂಚಿಕೊಂಡು ಮೆಚ್ಚುಗೆ ಗಳಿಸಿದರು. ಹೀಗೆ ಚಿತ್ರರಂಗದಲ್ಲಿ ಸಖತ್​ ಬೇಡಿಕೆ ಇರುವಾಗಲೇ ಅವರು 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

7 / 9

ಉಪೇಂದ್ರ ಗಣೇಶ್​ ಜತೆ ಅಮೂಲ್ಯ

8 / 9

ಲವ್ಲಿ ಸ್ಟಾರ್​ ಪ್ರೇಮ್​ ಸೆಲ್ಫಿಗೆ ಸ್ಮೈಲ್​ ಕೊಟ್ಟ ಅಮೂಲ್ಯ

9 / 9

ಗಣೇಶ್​ ಜತೆ ನಟಿ ಅಮೂಲ್ಯಾ

TV9 Web

TV9 Kannada

Read More
Loading...
Unable to load recommendations.
Follow Us