
ನಟಿ ರಾಧಿಕಾ ಪಂಡಿತ್ ಅವರು ನಟನೆಯಿಂದ ದೂರವೇ ಉಳಿದುಕೊಂಡಿದ್ದಾರೆ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಅವರು ಆ್ಯಕ್ಟೀವ್ ಆಗಿದ್ದಾರೆ. ಅವರೀಗ ಯುವರಾಣಿಯಂತೆ ಕಾಣಿಸಿಕೊಂಡಿದ್ದು, ಫೋಟೋ ವೈರಲ್ ಆಗಿದೆ.

ರಾಧಿಕಾ ಪಂಡಿತ್ ಅವರ ಹೊಸ ಫೋಟೋಗಳು ಗಮನ ಸೆಳೆದಿವೆ. ಅವರು ಸೀರೆ ಉಟ್ಟು ಗಮನ ಸೆಳೆದಿದ್ದಾರೆ. ನಟಿಯ ಸೌಂದರ್ಯವನ್ನು ಎಲ್ಲರೂ ಹಾಡಿಹೊಗಳಿದ್ದಾರೆ. ಯಾವ ಕಾರಣಕ್ಕೆ ರಾಧಿಕಾ ಈ ರೀತಿಯ ಫೋಟೋ ಹಂಚಿಕೊಂಡಿದ್ದಾರೆ ಎಂಬುದು ರಿವೀಲ್ ಆಗಿಲ್ಲ.

ರಾಧಿಕಾ ಪಂಡಿತ್ ಎರಡು ಮಕ್ಕಳ ತಾಯಿ. ಅವರಿಗೆ ಆಯ್ರಾ ಹಾಗೂ ಯಥರ್ವ್ ಹೆಸರಿನ ಮಕ್ಕಳು ಇದ್ದಾರೆ. ಈಗಲೂ ರಾಧಿಕಾ ಪಂಡಿತ್ ಅವರು ಸಖತ್ ಯಂಗ್ ಆಗಿ ಕಾಣಿಸುತ್ತಾರೆ.

ರಾಧಿಕಾ ಪಂಡಿತ್ ಅವರು 2016ರಲ್ಲಿ ಮದುವೆ ಆದರು. ಆ ಬಳಿಕ ರಾಧಿಕಾ ಅವರು ನಟನೆಯಿಂದ ದೂರವೇ ಉಳಿದುಕೊಂಡಿದ್ದಾರೆ. ಈ ಬಗ್ಗೆ ಫ್ಯಾನ್ಸ್ಗೆ ಬೇಸರ ಇದೆ.

ರಾಧಿಕಾ ಪಂಡಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾರೆ. ಲೈಫ್ ಅಪ್ಡೇಟ್ನ ಅವರು ನೀಡುತ್ತಾ ಇರುತ್ತಾರೆ.

ರಾಧಿಕಾ ಪಂಡಿತ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಈಗಲೂ ಅವರು ಚಿತ್ರರಂಗಕ್ಕೆ ಮರಳಬೇಕು ಎಂದು ಅನೇಕರು ಬಯಸುತ್ತಿದ್ದಾರೆ. ಆದರೆ, ಸದ್ಯಕ್ಕಂತೂ ಅದು ಸಾಧ್ಯವಿಲ್ಲ.