Radhika Pandit: ರಾಧಿಕಾ ಪಂಡಿತ್​ ಹಂಚಿಕೊಂಡ ಈ ಫೋಟೋಗಳಲ್ಲಿ ಇದೆ ಒಂದು ವಿಶೇಷ; ಗುರುತಿಸಬಲ್ಲಿರಾ?

Updated on: May 07, 2023 | 11:23 AM

ರಾಧಿಕಾ ಪಂಡಿತ್​ ಅವರು ಮಗಳು ಆಯ್ರಾ ಜೊತೆ ಇರುವ ಕೆಲವು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಫ್ಯಾನ್ಸ್​ ಪೇಜ್​ಗಳಲ್ಲಿ ಇವು ವೈರಲ್​ ಆಗಿವೆ.

1 / 6
ನಟಿ ರಾಧಿಕಾ ಪಂಡಿತ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಮಕ್ಕಳ ಫೋಟೋಗಳನ್ನು ಅವರು ಆಗಾಗ ಹಂಚಿಕೊಳ್ಳುತ್ತಾರೆ. ಪ್ರತಿ ವೀಕೆಂಡ್​ನಲ್ಲೂ ಅವರು ಹೊಸ ಫೋಟೋಸ್​ ಅಪ್​ಲೋಡ್​ ಮಾಡುತ್ತಾರೆ.

ನಟಿ ರಾಧಿಕಾ ಪಂಡಿತ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಮಕ್ಕಳ ಫೋಟೋಗಳನ್ನು ಅವರು ಆಗಾಗ ಹಂಚಿಕೊಳ್ಳುತ್ತಾರೆ. ಪ್ರತಿ ವೀಕೆಂಡ್​ನಲ್ಲೂ ಅವರು ಹೊಸ ಫೋಟೋಸ್​ ಅಪ್​ಲೋಡ್​ ಮಾಡುತ್ತಾರೆ.

2 / 6

ಈಗ ರಾಧಿಕಾ ಪಂಡಿತ್​ ಅವರು ಮಗಳು ಆಯ್ರಾ ಜೊತೆ ಇರುವ ಕೆಲವು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಅದರ ಜೊತೆ ಅವರು ಬರೆದುಕೊಂಡಿರುವ ಕ್ಯಾಪ್ಷನ್​ ಗಮನ ಸೆಳೆಯುತ್ತಿದೆ.

3 / 6

ಅಮ್ಮನ ಜೊತೆ ಫೋಟೋಗೆ ಪೋಸ್​ ನೀಡಲು ಆಯ್ರಾ ಬಿಲ್​​ಕುಲ್​ ತಯಾರಿಲ್ಲ. ಎಷ್ಟೇ ಪ್ರಯತ್ನಪಟ್ಟರೂ ಆಕೆ ಕ್ಯಾಮೆರಾ ಕಡೆ ಸರಿಯಾಗಿ ನೋಡುತ್ತಲೇ ಇಲ್ಲ. ಆ ರೀತಿಯ ಕೆಲವು ಫೋಟೋಗಳನ್ನು ರಾಧಿಕಾ ಅವರು ಅಭಿಮಾನಿಗಳಿಗೆ ತೋರಿಸಿದ್ದಾರೆ.

4 / 6

ಆಯ್ರಾ ಸರಿಯಾಗಿ ಪೋಸ್​ ನೀಡುವ ಬದಲು ಎತ್ತೆತ್ತಲೋ ನೋಡಿದ್ದಾಳೆ. ವಿಚಿತ್ರವಾಗಿ ಮುಖಭಾವಗಳನ್ನು ತೋರಿಸಿದ್ದಾಳೆ. ಫೋಟೋಗಾಗಿ ಎಷ್ಟೆಲ್ಲ ಕಷ್ಟಪಡಬೇಕು ಎಂಬುದನ್ನು ಈ ಪೋಸ್ಟ್​ ಮೂಲಕ ರಾಧಿಕಾ ಪಂಡಿತ್​ ವಿವರಿಸಿದ್ದಾರೆ.

5 / 6

ವಿಶೇಷ ಎಂದರೆ ಇದೇ ರೀತಿಯ ಒಂದು ಫೋಟೋವನ್ನು ರಾಧಿಕಾ ಪಂಡಿತ್​ ಅವರು ಈ ಹಿಂದೆ ಶೇರ್​ ಮಾಡಿಕೊಂಡಿದ್ದರು. ಅದರಲ್ಲಿ ಯಶ್​ ಕೂಡ ಆಯ್ರಾ ರೀತಿಯೇ ಮಾಡಿದ್ದರು. ಒಂದು ಸೆಲ್ಫಿಗಾಗಿ ರಾಧಿಕಾ ಸಖತ್​ ಸರ್ಕಸ್​ ಮಾಡಬೇಕಿತ್ತು.

6 / 6

ಈಗ ಆಯ್ರಾ ಜೊತೆ ರಾಧಿಕಾ ಪಂಡಿತ್​ ಅವರು ಹಂಚಿಕೊಂಡ ಫೋಟೋ ನೋಡಿದರೆ ಯಶ್​ ಜೊತೆಗಿನ ಆ ಹಳೇ ಫೋಟೋ ನೆನಪಾಗುತ್ತದೆ. ಹಾಗಾಗಿ ಈ ಎರಡೂ ಸಂಗತಿಗಳನ್ನು ರಾಧಿಕಾ ಅವರು ಮತ್ತೆ ನೆನಪಿಸಿಕೊಂಡಿದ್ದಾರೆ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us