Kannada News Photo gallery Rafael nadal becomes the player who won the most grand slams in mens know top 5 players novak djokovic roger federer
Australian Open: ದಾಖಲೆಯ 21ನೇ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ನಡಾಲ್! ಯಾರ ಹೆಸರಲ್ಲಿ ಎಷ್ಟು ಗ್ರ್ಯಾಂಡ್ ಸ್ಲ್ಯಾಮ್ಗಳಿವೆ?
TV9 Web | Updated By: ಪೃಥ್ವಿಶಂಕರ
Updated on:
Jan 30, 2022 | 10:38 PM
Australian Open: ನಡಾಲ್ ತಮ್ಮ 21 ನೇ ಗ್ರ್ಯಾಂಡ್ ಸ್ಲ್ಯಾಮ್ ಗೆಲ್ಲುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಅವರು ಪುರುಷರ ವಿಭಾಗದಲ್ಲಿ ಹೆಚ್ಚು ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ಆಟಗಾರರಾದರು.
1 / 6
ಸ್ಪೇನ್‌ನ ರಾಫೆಲ್ ನಡಾಲ್ ವರ್ಷದ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಅವರು ಐದು ಸೆಟ್‌ಗಳ ಹೋರಾಟದಲ್ಲಿ ರಷ್ಯಾದ ಡೇನಿಯಲ್ ಮೆಡ್ವೆಡೆವ್ ಅವರನ್ನು 2-6, 6-7, 6-4, 6-4, 7-5 ಸೆಟ್‌ಗಳಿಂದ ಸೋಲಿಸಿದರು. ಈ ಪಂದ್ಯ ಐದು ಗಂಟೆ 24 ನಿಮಿಷಗಳ ಕಾಲ ನಡೆಯಿತು. ಇದರೊಂದಿಗೆ, ನಡಾಲ್ ತಮ್ಮ 21 ನೇ ಗ್ರ್ಯಾಂಡ್ ಸ್ಲ್ಯಾಮ್ ಗೆಲ್ಲುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಅವರು ಪುರುಷರ ವಿಭಾಗದಲ್ಲಿ ಹೆಚ್ಚು ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ಆಟಗಾರರಾದರು. ಅದೇ ಸಮಯದಲ್ಲಿ, ಇದು ಅವರ ವೃತ್ತಿಜೀವನದ ಎರಡನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯಾಗಿದೆ. ಅತಿ ಹೆಚ್ಚು ಗ್ರ್ಯಾಂಡ್ ಸ್ಲ್ಯಾಮ್ಗಳ ಓಟದಲ್ಲಿ ನಡಾಲ್ ಯಾರನ್ನು ಹಿಂದಿಕ್ಕಿದ್ದಾರೆ ಎಂಬುದನ್ನು ಇಲ್ಲಿ ಓದಿ.
2 / 6
ನಡಾಲ್ ಅವರು ಈ ಹಿಂದೆ ಅತಿ ಹೆಚ್ಚು ಗ್ರ್ಯಾಂಡ್ ಸ್ಲ್ಯಾಮ್ಗಳನ್ನು ಗೆದ್ದಿರುವ ವಿಷಯದಲ್ಲಿ ಸೆರ್ಬಿಯಾದ ನೊವಾಕ್ ಜೊಕೊವಿಕ್ ಮತ್ತು ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್‌ಗೆ ಸಮಾನರಾಗಿದ್ದರು. ಈ ಮೂವರ ಹೆಸರುಗಳಲ್ಲಿ 20-20 ಗ್ರ್ಯಾಂಡ್ ಸ್ಲ್ಯಾಮ್ಗಳಾಗಿದ್ದವು, ಆದರೆ ನಡಾಲ್ ಭಾನುವಾರ ಈ ಇಬ್ಬರು ದೈತ್ಯರನ್ನು ಸೋಲಿಸಿದರು. ನಡಾಲ್ ತಮ್ಮ ವೃತ್ತಿಜೀವನದಲ್ಲಿ 2009 ಮತ್ತು 2022 ರಲ್ಲಿ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದಾರೆ. ಅವರು ಫ್ರೆಂಚ್ ಓಪನ್ ಅನ್ನು 13 ಬಾರಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ 2008 ಮತ್ತು 2010 ರಲ್ಲಿ ಎರಡು ಬಾರಿ ವಿಂಬಲ್ಡನ್ ಗೆಲ್ಲುವಲ್ಲಿ ಸಫಲರಾಗಿದ್ದಾರೆ. ನಾಲ್ಕು ಬಾರಿ ಅವರು US ಓಪನ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
3 / 6
ಜೊಕೊವಿಕ್ 2008, 2011, 2012, 2013, 2015, 2016, 2019, 2020 ಮತ್ತು 2021 ರಲ್ಲಿ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದಾರೆ. 2016 ಮತ್ತು 2021 ರಲ್ಲಿ ಅವರು ಫ್ರೆಂಚ್ ಓಪನ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಆರು ಬಾರಿ ವಿಂಬಲ್ಡನ್ ಗೆದ್ದು ಮೂರು ಬಾರಿ ಯುಎಸ್ ಓಪನ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
4 / 6
ಫೆಡರರ್ ಆರು ಬಾರಿ ಆಸ್ಟ್ರೇಲಿಯನ್ ಓಪನ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. 2009 ರಲ್ಲಿ ಅವರು ಫ್ರೆಂಚ್ ಓಪನ್ ಗೆದ್ದರು. ಎಂಟು ಬಾರಿ ಅವರ ಪಾಲಿನ ವಿಂಬಲ್ಡನ್ ಪ್ರಶಸ್ತಿ ಬಂದಿತ್ತು. ಐದು ಬಾರಿ ಯುಎಸ್ ಓಪನ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
5 / 6
ಈ ಮೂವರ ನಂತರ 14 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಹೊಂದಿರುವ ಪೀಟ್ ಸಾಂಪ್ರಾಸ್ ಬಂದಿದ್ದಾರೆ. ಸಾಂಪ್ರಾಸ್ ಎರಡು ಬಾರಿ ಆಸ್ಟ್ರೇಲಿಯನ್ ಓಪನ್, ಏಳು ಬಾರಿ ವಿಂಬಲ್ಡನ್ ಮತ್ತು ಐದು ಬಾರಿ ಯುಎಸ್ ಓಪನ್ ಗೆದ್ದಿದ್ದಾರೆ. ಒಂದು ಬಾರಿಯೂ ಫ್ರೆಂಚ್ ಓಪನ್ ಗೆಲ್ಲಲು ಸಾಧ್ಯವಾಗಲಿಲ್ಲ. ಅವರ ನಂತರ ರಾಯ್ ಎಮರ್ಸನ್ ಅವರ ವೃತ್ತಿಜೀವನದಲ್ಲಿ 12 ಗ್ರ್ಯಾಂಡ್ ಸ್ಲ್ಯಾಮ್ಗಳನ್ನು ಗೆದ್ದಿದ್ದಾರೆ. ಎಮರ್ಸನ್ ಆರು ಬಾರಿ ಆಸ್ಟ್ರೇಲಿಯನ್ ಓಪನ್, ಎರಡು ಬಾರಿ ಫ್ರೆಂಚ್ ಓಪನ್ ಮತ್ತು ಎರಡು ಬಾರಿ ವಿಂಬಲ್ಡನ್, ಯುಎ ಓಪನ್ ಗೆದ್ದರು.
6 / 6
ಮತ್ತೊಂದೆಡೆ, ಮಹಿಳೆಯರ ವಿಭಾಗದಲ್ಲಿ ನೋಡಿದರೆ, ಅತಿ ಹೆಚ್ಚು ಗ್ರ್ಯಾಂಡ್ ಸ್ಲ್ಯಾಮ್ಗಳನ್ನು ಗೆದ್ದ ದಾಖಲೆ ಆಸ್ಟ್ರೇಲಿಯಾದ ಮಾರ್ಗರೇಟ್ ಕೋರ್ಟ್ ಹೆಸರಿನಲ್ಲಿದೆ. ಅವರು ಒಟ್ಟು 24 ಗ್ರ್ಯಾಂಡ್ ಸ್ಲ್ಯಾಮ್ಗಳನ್ನು ಗೆದ್ದಿದ್ದಾರೆ. 23 ಗ್ರ್ಯಾಂಡ್ ಸ್ಲ್ಯಾಮ್ಗಳನ್ನು ಗೆದ್ದಿರುವ ಅಮೆರಿಕದ ಸೆರೆನಾ ವಿಲಿಯಮ್ಸ್ ನಂತರದ ಸ್ಥಾನದಲ್ಲಿದ್ದಾರೆ. 22 ಗ್ರ್ಯಾಂಡ್ ಸ್ಲ್ಯಾಮ್ಗಳನ್ನು ಗೆದ್ದಿರುವ ಜರ್ಮನಿಯ ಸ್ಟೆಫಿ ಗ್ರಾಫ್ ಮೂರನೇ ಸ್ಥಾನದಲ್ಲಿದ್ದಾರೆ.