
ಆಸ್ಟ್ರೇಲಿಯನ್ ಓಪನ್‌ನಲ್ಲಿ ಅಚ್ಚರಿಯ ಫಲಿತಾಂಶವೊಂದು ಹೊರಬಿದ್ದಿದೆ. ಹಾಲಿ ಚಾಂಪಿಯನ್ ಹಾಗೂ ಅನುಭವಿ ಆಟಗಾರ ರಾಫೆಲ್ ನಡಾಲ್ ಆಸ್ಟ್ರೇಲಿಯನ್ ಓಪನ್‌ನ ಎರಡನೇ ಸುತ್ತಿನಲ್ಲೇ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ.

ರಾಫೆಲ್ ನಡಾಲ್ ಅವರನ್ನು 6-4, 6-4, 7-5 ನೇರ ಸೆಟ್‌ಗಳಿಂದ ಅಮೆರಿಕದ ಮೆಕೆಂಜಿ ಮೆಕ್‌ಡೊನಾಲ್ಡ್ ಸೋಲಿಸಿ, ನಡಾಲ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ವಾಸ್ತವವಾಗಿ ಪಂದ್ಯದ ಎರಡನೇ ಸೆಟ್‌ನಲ್ಲಿ ನಡಾಲ್ ಸೊಂಟದ ನೋವಿಗೆ ತುತ್ತಾದರು. ಇದರ ಹೊರತಾಗಿಯೂ ಪಂದ್ಯವನ್ನು ಅರ್ಧಕ್ಕೆ ತೊರೆಯದೆ ಆಟವನ್ನು ಮುಂದುವರೆಸಿದ ನಡಾಲ್ ಅವರಿಗೆ ಸೋಲಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಮೊದಲ ಎರಡು ಸೆಟ್‌ಗಳಲ್ಲಿ 6-4, 6-4 ರಿಂದ ಹಿನ್ನಡೆ ಅನುಭವಿಸಿದ ನಡಾಲ್, ಮೂರನೇ ಸೆಟ್‌ನಲ್ಲಿ ಇಂಜುರಿ ನಡುವೆಯೂ ಆಟವನ್ನು ಮುಂದುವರೆಸಿದರು. ಆದರೆ ಕೊನೆಯಲ್ಲಿ, ಮೆಕೆಂಜಿ ಈ ಸೆಟ್ ಅನ್ನು 7-5 ರಿಂದ ಗೆಲ್ಲುವದರೊಂದಿಗೆ ಮುಂದಿನ ಸುತ್ತಿಗೆ ಅರ್ಹತೆ ಪಡೆದರು.

ಈ ವರ್ಷ ಎರಡನೇ ಸುತ್ತಿನಲ್ಲೇ ಹೊರಬಿದ್ದಿರುವ ನಡಾಲ್ ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿದ್ದರು. ಈ ಅನುಭವಿ ಆಟಗಾರ ಫೈನಲ್‌ನಲ್ಲಿ 2-6, 6-7, 6-4, 6-4, 7-5 ಸೆಟ್‌ಗಳಿಂದ ಡ್ಯಾನಿಲ್ ಮೆಡ್ವೆಡೆವ್ ಅವರನ್ನು ಸೋಲಿಸಿ ಆಸ್ಟ್ರೇಲಿಯನ್ ಓಪನ್ ಕಿರೀಟ ಧರಿಸಿದ್ದರು.