ಬೆಂಗಳೂರು; ಗಾಳಿ-ಮಳೆಗೆ ಪಕ್ಷಿಗಳ ಜೀವಕ್ಕೆ ಸಂಚಕಾರ, 2 ತಿಂಗಳಲ್ಲಿ 2 ಸಾವಿರ ಪಕ್ಷಿಗಳ ಸಾವು

| Updated By: ಆಯೇಷಾ ಬಾನು

Updated on: Aug 06, 2024 | 12:45 PM

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ತಿಂಗಳಿನಿಂದ ಹೆಚ್ಚು ಮಳೆಯಾಗುತ್ತಿದೆ. ಇದರ ಎಫೆಕ್ಟ್ ಜನರ ಮೇಲೆ ಅಷ್ಟೇ ಅಲ್ಲದೇ ಪಕ್ಷಿಗಳ ಮೇಲೂ ತಟ್ಟಿದೆ. ಮಳೆ, ಗಾಳಿಗೆ ಸಾವಿರಾರು ಪಕ್ಷಿಗಳು ಜೀವ ತೆತ್ತಿವೆ. ಕಳೆದ ಜೂನ್​ನಿಂದ ಜುಲೈ 31ರವರೆಗೆ ಬರೋಬ್ಬರಿ 2 ಸಾವಿರ ಪಕ್ಷಿಗಳು ಮೃತಪಟ್ಟಿವೆ. ಅಷ್ಟೇ ಅಲ್ಲದೆ ಗಾಯಗೊಳ್ಳುತ್ತಿರುವ ಪಕ್ಷಿಗಳ ಸಂಖ್ಯೆಯೂ ಹೆಚ್ಚಿದೆ.

1 / 6
ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ತಿಂಗಳಿನಿಂದ ವರುಣ ಅಬ್ಬರಿಸುತ್ತಿದ್ದು, ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಇದರಿಂದ ನೀರು ರಸ್ತೆಗೆ ಹರಿದುಬಂದು ರಸ್ತೆಗಳು ಮುಳುಗುತ್ತಿವೆ, ಮನೆಗಳಿಗೆ ನೀರು ನುಗ್ಗುತ್ತಿದೆ. ಇದರಿಂದ ಜನ ಜೀವನ ಅಸ್ತವ್ಯಸ್ತವಾಗಿದೆ.‌ ಈ ಮಧ್ಯೆ ಮೂಕ‌ ಪ್ರಾಣಿಗಳು ಮಳೆ ಗಾಳಿಗೆ ಜೀವ ಕಳೆದುಕೊಳ್ಳುತ್ತಿವೆ.‌

2 / 6
ಈ ವರ್ಷದ ಮಳೆಯಲ್ಲಿ ಗಾಳಿಯ ಪ್ರಮಾಣ ಜಾಸ್ತಿಯಾಗಿದ್ದು, ಮಳೆ, ಗಾಳಿಗೆ ಪಕ್ಷಿಗಳ ಗೂಡುಗಳು ನಾಶವಾಗುತ್ತಿವೆ. ಹೀಗಾಗಿ ಎಳೆಯ ಪಕ್ಷಿಗಳು ಸಾಯುತ್ತಿದ್ದು, ಕಳೆದ ಜೂನ್​ನಿಂದ ಜುಲೈ 31ರವರೆಗೆ ಬರೋಬ್ಬರಿ 2 ಸಾವಿರ ಪಕ್ಷಿಗಳು ಮೃತಪಟ್ಟಿವೆ. ಅಷ್ಟೇ ಅಲ್ಲದೆ ಗಾಯಗೊಳ್ಳುತ್ತಿರುವ ಪಕ್ಷಿಗಳ ಸಂಖ್ಯೆಯೂ ಹೆಚ್ಚಿದೆ.

3 / 6
ಮಳೆ ಹಾಗೂ ಗಾಳಿಯಿಂದಾಗಿ ಪಕ್ಷಿಗಳಿಗೆ ಗಾಯಗಳಾಗುತ್ತಿವೆ.‌ ಜೂನ್ 1 ರಿಂದ ಜುಲೈ 31 ರವರೆಗೆ, ರಕ್ಷಣಾ ಕೇಂದ್ರಗಳು ಸುಮಾರು ಎರಡು ಸಾವಿರಕ್ಕೂ ಹೆಚ್ಚು ಗಾಯಗೊಂಡ ಪಕ್ಷಿಗಳನ್ನು ರಕ್ಷಿಸಿವೆ.

4 / 6
ಸಾಮಾನ್ಯವಾಗಿ, ಬೇಸಿಗೆಯ ತಿಂಗಳಲ್ಲಿ ಪಕ್ಷಿಗಳು ಸಾಯುವುದನ್ನ ನೋಡಿರ್ತೀವಿ. ಆದ್ರೆ ಈ ವರ್ಷ ಜೂನ್ ಹಾಗೂ ಜುಲೈ ತಿಂಗಳ ಗಾಳಿ ಮಳೆಗೆ ಪಕ್ಷಿಗಳ ಸಾವು ಹೆಚ್ಚಾಗಿದೆ.

5 / 6
ಎರಡು ತಿಂಗಳಲ್ಲಿ ಪಕ್ಷಿಗಳನ್ನ ರಕ್ಷಿಸಲು ಒಟ್ಟು 1,479 ರಕ್ಷಣಾ ಕರೆಗಳು ಬಂದಿದ್ದು, ಅದ್ರಲ್ಲಿ 515 ಪಕ್ಷಿಗಳನ್ನು ರಕ್ಷಿಸಲಾಗಿದೆ.‌ ಇನ್ನು‌ ಜನವರಿಯಿಂದ ಜುಲೈವರೆಗೆ ಒಟ್ಟು ನಗರದಾದ್ಯಂತ 7,000 ಕ್ಕೂ ಹೆಚ್ಚು ಪಕ್ಷಿಗಳನ್ನು ರಕ್ಷಿಸಲಾಗಿದೆ.

6 / 6
ಸಿಲಿಕಾನ್‌ ಸಿಟಿಯಲ್ಲಿ ಪಕ್ಷಿಗಳ ರಕ್ಷಣಾ ಕೇಂದ್ರಗಳು ಕಡಿಮೆ ಇವೆ. ಇವುಗಳನ್ನ ಹೆಚ್ಚಳ ಮಾಡಿದ್ದೆ ಆಗಿದ್ದಲ್ಲಿ ಪಕ್ಷಿಗಳನ್ನ ರಕ್ಷಣೆ ಮಾಡಬಹುದಾಗಿದೆ ಅಂತ ಪಕ್ಷಿ ಪ್ರಿಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಅರಣ್ಯ ಇಲಾಖೆ ಕ್ರಮ ತೆಗೆದುಕೊಳ್ಳಬೇಕಾಗಿದೆ.