ನಿರ್ಮಾಪಕ ಜಾಕಿ ಬಗ್ನಾನಿ ಜೊತೆ ರಕುಲ್ ಪ್ರೀತ್ ಸಿಂಗ್ ವಿವಾಹ: ಇಲ್ಲಿವೆ ಚಿತ್ರಗಳು
Rakul-jackky: ನಟಿ ರಕುಲ್ ಪ್ರೀತ್ ಸಿಂಗ್ ಹಾಗೂ ನಿರ್ಮಾಪಕ ಜಾಕಿ ಭಗ್ನಾನಿ ಇಂದು (ಫೆಬ್ರವರಿ 21) ಗೋವಾದ ಕಡಲ ತಡಿಯಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಇಲ್ಲಿವೆ ವಿವಾಹದ ಕೆಲವು ಚಿತ್ರಗಳು.
1 / 7
ಕನ್ನಡದ ‘ಗಿಲ್ಲಿ’ ಸಿನಿಮಾ ಮೂಲಕ ನಟನೆಗೆ ಕಾಲಿಟ್ಟ ನಟಿ ರಕುಲ್ ಪ್ರೀತ್ ಸಿಂಗ್ ಇಂದು (ಫೆಬ್ರವರು 21) ನಟ, ನಿರ್ಮಾಪಕ ಜಾಕಿ ಭಗ್ನಾನಿ ಜೊತೆ ಹಸೆಮಣೆ ಏರಿದ್ದಾರೆ.
2 / 7
ರಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿ ಅವರುಗಳ ವಿವಾಹ ಇಂದು (ಫೆಬವರಿ 21) ಗೋವಾದಲ್ಲಿ ಹಿಂದೂ ಸಂಪ್ರದಾಯದಂತೆ ಅದ್ಧೂರಿಯಾಗಿ ನಡೆದಿದೆ.
3 / 7
ನಟಿ ರಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿ ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದರು. ತಮ್ಮ ಪ್ರೀತಿಯ ಬಗ್ಗೆ ಈ ಜೋಡಿ ಬಹಿರಂಗವಾಗಿ ಹೇಳಿಕೊಂಡಿತ್ತು.
4 / 7
ಗೋವಾದ ಬೀಚ್ ಸನಿಹದಲ್ಲಿ ಬೆಳಿಗ್ಗೆ ಸಿಖ್ ಸಂಪ್ರದಾಯದಂತೆ ಹಾಗೂ ಸಂಜೆ ಸಿಂಧಿ ಸಂಪ್ರದಾಯದಂತೆ ರಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿ ವಿವಾಹವಾಗಿದ್ದಾರೆ.
5 / 7
ಜಾಕಿ ಭಗ್ನಾನಿ ಬಾಲಿವುಡ್ನ ಜನಪ್ರಿಯ ಸಿನಿಮಾ ನಿರ್ಮಾಪಕರು. ನಟರಾಗಿ ಚಿತ್ರರಂಗಕ್ಕೆ ಕಾಲಿಟ್ಟರಾದರೂ, ನಟನೆಯಲ್ಲಿ ಯಶಸ್ಸು ಸಿಗಲಿಲ್ಲ. ಆದರೆ ಇವರಿಗೆ ನಿರ್ಮಾಣದಲ್ಲಿ ಯಶಸ್ಸು ಧಕ್ಕಿತು.
6 / 7
ಜಾಕಿ ಭಗ್ನಾನಿ ಹಾಗೂ ರಕುಲ್ ಪ್ರೀತ್ ಸಿಂಗ್ರ ವಿವಾಹದಲ್ಲಿ ಅಕ್ಷಯ್ ಕುಮಾರ್, ವರುಣ್ ಧವನ್, ಆದಿತ್ಯರಾಯ್ ಕಪೂರ್, ಅನನ್ಯ ಪಾಂಡೇ ಶಿಲ್ಪಾ ಶೆಟ್ಟಿ ಇನ್ನೂ ಹಲವರು ಭಾಗಿಯಾಗಿದ್ದರು.
7 / 7
ರಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿ ಮುಂಬೈನಲ್ಲಿ ಅದ್ಧೂರಿ ಆರತಕ್ಷತೆಯನ್ನು ಸಹ ಆಯೋಜನೆ ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ಆರತಕ್ಷತೆ ನಡೆಯಲಿದೆ.