Rambutan Benefits: ಫೈಬರ್ಭರಿತವಾಗಿರುವ ರಾಂಬುಟಾನ್ ಹಣ್ಣಿನ ಅಚ್ಚರಿಯ ಪ್ರಯೋಜನಗಳಿವು
ರಾಂಬುಟಾನ್ ಕಡಿಮೆ ಕ್ಯಾಲೋರಿ ಇರುವ ಹಣ್ಣು. ಇದರಲ್ಲಿ ನೀರಿನಂಶ ಮತ್ತು ಫೈಬರ್ ಹೇರಳವಾಗಿದೆ. ಇದು 80 ಅಡಿ ಎತ್ತರವನ್ನು ತಲುಪುವ ಮರದಲ್ಲಿ ಬೆಳೆಯುತ್ತದೆ. ಮಲೇಷ್ಯಾ ಮತ್ತು ಇಂಡೋನೇಷ್ಯಾದಂತಹ ಉಷ್ಣವಲಯದ ಹವಾಮಾನದಲ್ಲಿ ಈ ಹಣ್ಣು ಉತ್ತಮವಾಗಿ ಬೆಳೆಯುತ್ತದೆ.
1 / 17
ರಾಂಬುಟಾನ್ ಆಗ್ನೇಯ ಏಷ್ಯಾದ ಸ್ಥಳೀಯ ಹಣ್ಣು.
2 / 17
ಇದು 80 ಅಡಿ ಎತ್ತರವನ್ನು ತಲುಪುವ ಮರದಲ್ಲಿ ಬೆಳೆಯುತ್ತದೆ. ಮಲೇಷ್ಯಾ ಮತ್ತು ಇಂಡೋನೇಷ್ಯಾದಂತಹ ಉಷ್ಣವಲಯದ ಹವಾಮಾನದಲ್ಲಿ ಈ ಹಣ್ಣು ಉತ್ತಮವಾಗಿ ಬೆಳೆಯುತ್ತದೆ.
3 / 17
ಗಾಲ್ಫ್ ಚೆಂಡಿನ ಗಾತ್ರದ ರಾಂಬುಟಾನ್ ಹಣ್ಣುಗಳ ಮೇಲೆ ಕೂದಲುಗಳ ವಿನ್ಯಾಸದ ಕೆಂಪು ಮತ್ತು ಹಸಿರು ಚಿಪ್ಪು ಇರುತ್ತದೆ.
4 / 17
ರಾಂಬುಟಾನ್ ಹಣ್ಣಿನ ಪ್ರಯೋಜನಗಳು ಬಹುತೇಕರಿಗೆ ತಿಳಿದಿಲ್ಲ. ಕೆಂಪು ಬಣ್ಣದ ಈ ಹಣ್ಣಿನೊಳಗೆ ಬಿಳಿಯ, ಶಿವಲಿಂಗದ ರೀತಿಯ ತಿರುಳು ಮತ್ತು ಬೀಜ ಇರುತ್ತದೆ. ಈ ಹಣ್ಣು ಬಹಳ ಪೌಷ್ಟಿಕಭರಿತವಾದ ಹಣ್ಣಾಗಿದೆ.
5 / 17
ರಾಂಬುಟಾನ್ ಕರಗಬಲ್ಲ ಮತ್ತು ಕರಗದ ನಾರಿನ ಉತ್ತಮ ಮೂಲವಾಗಿದೆ. ಕರಗದ ಫೈಬರ್ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ.
6 / 17
ಇದರಲ್ಲಿರುವ ಕರಗುವ ಫೈಬರ್ ನಿಮ್ಮ ಕರುಳಿನ ಉತ್ತಮ ಬ್ಯಾಕ್ಟೀರಿಯಾಕ್ಕೆ ಆಹಾರವನ್ನು ಒದಗಿಸುತ್ತದೆ.
7 / 17
ರಾಂಬುಟಾನ್ ಕಡಿಮೆ ಕ್ಯಾಲೋರಿ ಇರುವ ಹಣ್ಣು. ಇದರಲ್ಲಿ ನೀರಿನಂಶ ಮತ್ತು ಫೈಬರ್ ಹೇರಳವಾಗಿದೆ.
8 / 17
ಹೆಚ್ಚು ನೀರಿನಂಶ ಇರುವುದರಿಂದ ಈ ಹಣ್ಣನ್ನು ತಿಂದಾಗ ಬೇಗ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ. ಇದರಿಂದ ದೀರ್ಘಕಾಲದವರೆಗೆ ನಿಮಗೆ ಹಸಿವಾಗುವುದಿಲ್ಲ.
9 / 17
ಇದರಿಂದ ಅನಗತ್ಯವಾಗಿ ಅತಿಯಾಗಿ ತಿನ್ನುವುದನ್ನು ತಪ್ಪಿಸಲು ಸಾಧ್ಯವಿದೆ. ತೂಕವನ್ನು ಕಳೆದುಕೊಳ್ಳಲು ಇದು ಸಹಾಯ ಮಾಡುತ್ತದೆ.
10 / 17
ರಾಂಬುಟಾನ್ ವಿಟಮಿನ್ ಬಿ3 ಅನ್ನು ಒಳಗೊಂಡಿದೆ. ಇದು ಚಯಾಪಚಯ ಪ್ರಕ್ರಿಯೆ ಮತ್ತು ರಕ್ಷಣಾ ವ್ಯವಸ್ಥೆಗಳನ್ನು ಹೆಚ್ಚಿಸುವ ಮೂಲಕ ಮಾನವ ದೇಹದ ಉತ್ತಮ ಕಾರ್ಯನಿರ್ವಹಣೆಗೆ ಕೊಡುಗೆ ನೀಡುತ್ತದೆ.
11 / 17
ಕೊಬ್ಬನ್ನು ಕರಗಿಸುವ ವಿಟಮಿನ್‌ಗಳು (ಎ, ಡಿ, ಇ ಮತ್ತು ಕೆ) ರಾಂಬುಟಾನ್‌ನಲ್ಲಿ ಕಂಡುಬರುತ್ತವೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ.
12 / 17
ವಿಟಮಿನ್ ಸಿ ಬಿಳಿ ರಕ್ತ ಕಣಗಳನ್ನು ಆರೋಗ್ಯಕರವಾಗಿ ಇರಿಸುವ ಮೂಲಕ ವಯಸ್ಸಾದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
13 / 17
ರಾಂಬುಟಾನ್ ಹಣ್ಣುಗಳು ಲಿಚಿ ಮತ್ತು ಲಾಂಗನ್ ಹಣ್ಣುಗಳಿಗೆ ಸಂಬಂಧಿಸಿವೆ. ಇದರ ಸಿಪ್ಪೆ ತೆಗೆದಾಗ ಒಂದೇ ರೀತಿಯ ನೋಟವನ್ನು ಹೊಂದಿರುತ್ತದೆ.
14 / 17
ರಾಂಬುಟಾನ್ ತುಂಬಾ ಪೌಷ್ಟಿಕವಾದ ಹಣ್ಣು. ತೂಕ ನಷ್ಟ ಮತ್ತು ಉತ್ತಮ ಜೀರ್ಣಕ್ರಿಯೆಯಿಂದ ಸೋಂಕುಗಳಿಗೆ ಹೆಚ್ಚಿದ ಪ್ರತಿರೋಧದವರೆಗೆ ಇದು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
15 / 17
ಇದರ ಅರೆಪಾರದರ್ಶಕ ಬಿಳಿ ತಿರುಳು ಸಿಹಿ ಮತ್ತು ಕೆನೆ ರುಚಿಯನ್ನು ಹೊಂದಿರುತ್ತದೆ. ಇದರ ಮಧ್ಯದಲ್ಲಿ ಬೀಜವನ್ನು ಹೊಂದಿರುತ್ತದೆ.
16 / 17
ರಾಂಬುಟಾನ್ ಹಣ್ಣಿನಲ್ಲಿ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ. ರಾಂಬುಟಾನ್ ಹಣ್ಣು ಅನೇಕ ಜೀವಸತ್ವಗಳು, ಖನಿಜಗಳು ಮತ್ತು ಪ್ರಯೋಜನಕಾರಿ ಸಸ್ಯ ಸಂಯುಕ್ತಗಳಲ್ಲಿ ಸಮೃದ್ಧವಾಗಿದೆ.
17 / 17
ರಾಂಬುಟಾನ್ ಉತ್ತಮ ಪ್ರಮಾಣದ ತಾಮ್ರದ ಅಂಶವನ್ನು ಸಹ ಹೊಂದಿದೆ. ಇದು ನಿಮ್ಮ ಮೂಳೆಗಳು, ಮೆದುಳು ಮತ್ತು ಹೃದಯ ಸೇರಿದಂತೆ ವಿವಿಧ ಜೀವಕೋಶಗಳ ಸರಿಯಾದ ಬೆಳವಣಿಗೆ ಮತ್ತು ನಿರ್ವಹಣೆಯಲ್ಲಿ ಪಾತ್ರವನ್ನು ವಹಿಸುತ್ತದೆ.