ಕನ್ನಡದ ಖ್ಯಾತ ನಟ ರಮೇಶ್ ಅರವಿಂದ್ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಬಣ್ಣದ ಲೋಕದಲ್ಲಿ ವಿಶೇಷ ಛಾಪು ಮೂಡಿಸಿರುವ ಅವರು ಪ್ರತಿ ಬಾರಿ ಏನಾದರೂ ಹೊಸತನ್ನು ಪ್ರಯತ್ನಿಸುತ್ತಾರೆ. ಫೋಟೋ ಕೃಪೆ: Focus Raghu
ನಟನಾಗಿ, ನಿರ್ದೇಶಕನಾಗಿ, ನಿರೂಪಕನಾಗಿ, ಮೋಟಿವೇಷನಲ್ ಸ್ಪೀಕರ್ ಆಗಿ ರಮೇಶ್ ಬ್ಯುಸಿ ಆಗಿದ್ದಾರೆ. ಈ ನಡುವೆ ಅವರು ಯಕ್ಷಗಾನದ ಬಗ್ಗೆಯೂ ಆಸಕ್ತಿ ತೋರಿಸಿದ್ದಾರೆ. ಅದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಫೋಟೋ ಕೃಪೆ: Focus Raghu
ಇತ್ತೀಚೆಗೆ ರಮೇಶ್ ಅರವಿಂದ್ ಅವರು ಯಕ್ಷಗಾನದ ವೇಷ ಧರಿಸಿದ್ದಾರೆ. ವೃತ್ತಿಪರ ಯಕ್ಷಗಾನದ ಕಲಾವಿದನ ರೀತಿಯಲ್ಲಿ ಬಣ್ಣ ಹಚ್ಚಿಕೊಂಡು ಪೋಸ್ ನೀಡಿದ್ದಾರೆ. ಆ ಫೋಟೋಗಳನ್ನು ಅವರು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಫೋಟೋ ಕೃಪೆ: Focus Raghu
ಇದೇ ಮೊದಲ ಬಾರಿಗೆ ಈ ರೀತಿಯ ಗೆಟಪ್ ಧರಿಸಿದ ರಮೇಶ್ ಅರವಿಂದ್ ಅವರಿಗೆ ಸಖತ್ ಖುಷಿ ಆಗಿದೆ. ಅಲ್ಲದೇ, ಯಕ್ಷಗಾನದ ಕಲೆ ಮತ್ತು ಅದರ ಕಲಾವಿದರ ಬಗ್ಗೆ ಇದ್ದ ಗೌರವ ಇನ್ನಷ್ಟು ಜಾಸ್ತಿ ಆಯಿತು ಎಂದು ಅವರು ಹೇಳಿದ್ದಾರೆ. ಫೋಟೋ ಕೃಪೆ: Focus Raghu
ಈ ಫೋಟೋಗಳನ್ನು ಕಂಡು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ‘ಯಕ್ಷಗಾನದ ಸಣ್ಣ ಪ್ರಸಂಗದಲ್ಲಿ ನೀವು ನಟಿಸಬೇಕು’ ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ. ಸಿನಿಮಾದಲ್ಲಿಯೂ ಇಂಥ ಪಾತ್ರ ಮಾಡಿ ಎಂದು ಕೆಲವರು ಸಲಹೆ ನೀಡಿದ್ದಾರೆ. ಫೋಟೋ ಕೃಪೆ: Focus Raghu
Published On - 11:05 am, Thu, 13 October 22