
ನಟಿ ರಮ್ಯಾ ದಿವ್ಯ ಸ್ಪಂದನಾ ಮತ್ತು ನಟ ವಿನಯ್ ರಾಜ್ಕುಮಾರ್ ಅವರು ಜೊತೆಯಾಗಿ ಸುತ್ತಾಡಿದ್ದಾರೆ. ಈ ಫೋಟೋಗಳನ್ನು ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇವು ಸಖತ್ ವೈರಲ್ ಆಗಿವೆ.

ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಬೇರೆ ಬೇರೆ ರೀತಿಯಲ್ಲಿ ಆಲೋಚಿಸಲು ಆರಂಭಿಸಿದರು. ರಮ್ಯಾ ದಿವ್ಯಾ ಸ್ಪಂದನಾ ಹಾಗೂ ವಿನಯ್ ಅವರ ನಡುವಿನ ಆಪ್ತತೆ ಕಂಡು ಎಲ್ಲರಿಗೂ ಅಚ್ಚರಿ ಆಯಿತು.

ಇದಕ್ಕಾಗಿ ರಮ್ಯಾ ಅವರು ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಸ್ಪಷ್ಟನೆ ನೀಡಿದ್ದಾರೆ. ‘ವಿನಯ್ ರಾಜ್ಕುಮಾರ್ ನನಗೆ ತಮ್ಮನಿದ್ದಂತೆ’ ಎಂದು ರಮ್ಯಾ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿ ಅನುಮಾನ ಪರಿಹಾರ ಆಗಿದೆ.

ಹಲವು ಸ್ಥಳಗಳಿಗೆ ರಮ್ಯಾ ಮತ್ತು ವಿನಯ್ ರಾಜ್ಕುಮಾರ್ ಅವರು ಜೊತೆಯಾಗಿ ಹೋಗಿದ್ದಾರೆ. ಅವರಿಗೆ ಪುನೀತ್ ರಾಜ್ಕುಮಾರ್ ಪುತ್ರಿ ವಂದಿತಾ ಕೂಡ ಸಾಥ್ ನೀಡಿದ್ದಾರೆ. ಅವರು ಸಹ ಫೋಟೋಗಳಲ್ಲಿ ಇದ್ದಾರೆ.

ರಮ್ಯಾ ಅವರಿಗೆ ಡಾ. ರಾಜ್ಕುಮಾರ್ ಕುಟುಂಬದ ಜೊತೆ ಮೊದಲಿನಿಂದಲೂ ಒಡನಾಟ ಇದೆ. ವಿನಯ್ ರಾಜ್ಕುಮಾರ್ ಜೊತೆ ಅವರು ಹೆಚ್ಚು ಆಪ್ತವಾಗಿದ್ದಾರೆ ಎಂಬುದಕ್ಕೆ ಹಲವು ಫೋಟೋಗಳೇ ಸಾಕ್ಷಿಯಾಗಿವೆ.