ಸಾಂಸ್ಕೃತಿಕ ಪರಂಪರೆ, ನೈಸರ್ಗಿಕ ಸೌಂದರ್ಯ ಮತ್ತು ಶ್ರೀಮಂತ ಸಂಸ್ಕೃತಿಯನ್ನು ಅನುಭವಿಸಲು ಪ್ರಧಾನಿ ಮೋದಿ ವೈಯಕ್ತಿಕ ಆಹ್ವಾನವನ್ನು ನೀಡಿದ್ದಾರೆ. ರನ್ನ್ ಉತ್ಸವವು 1 ಡಿಸೆಂಬರ್ 2024 ರಂದು ಪ್ರಾರಂಭವಾಗಿದ್ದು, ಮುಂದಿನ ವರ್ಷದ 28 ಫೆಬ್ರವರಿ 2025 ರವರೆಗೆ ನಡೆಯುತ್ತದೆ. ರನ್ ಉತ್ಸವದಲ್ಲಿ ಟೆಂಟ್ ಸಿಟಿ ಮಾರ್ಚ್ 2025 ರವರೆಗೆ ತೆರೆದಿರುತ್ತದೆ.
ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ (ಸಿಂಧೂ ಕಣಿವೆ ನಾಗರೀಕತೆಗೆ ಸಂಬಂಧಿಸಿದ) ಧೋಲವೀರಕ್ಕೆ ಭೇಟಿ ನೀಡುವ ಮೂಲಕ ಪ್ರಾಚೀನಕಾಲದ ಶ್ರೀಮಂತ ಸಂಸ್ಕೃತಿಯನ್ನು ಕಣ್ತುಂಬಿಸಿಕೊಳ್ಳಬಹುದು. ಅದರೊಂದಿಗೆ ವಿಜಯ್ ವಿಲಾಸ್ ಅರಮನೆ, ಕಲಾ ಡುಂಗರ್‌ಗೆ ಸೇರಿದಂತೆ ಪ್ರಕೃತಿಯ ನಡುವೆ ಇರುವ ಈ ಸ್ಥಳಗಳಿಗೂ ಭೇಟಿ ನೀಡಬಹುದು.
ಬಿಳಿ ಉಪ್ಪಿನ ಬಯಲಿನಿಂದ ಸುತ್ತುವರಿದಿರುವ 'ರೋಡ್ ಟು ಹೆವನ್' ಭಾರತದ ಅತ್ಯಂತ ಸುಂದರವಾದ ರಸ್ತೆಯಲ್ಲಿ ಒಂದಾಗಿದೆ. ಇದು ಸುಮಾರು 30 ಕಿಲೋಮೀಟರ್ ಉದ್ದವಿದ್ದು, ಖವ್ರಾವನ್ನು ಧೋಲಾವಿರಾಗೆ ಸಂಪರ್ಕಿಸುತ್ತದೆ. ಉತ್ಸವ ನೋಡಲು ಹೋದರೆ ಈ ರಸ್ತೆಯ ಸೊಬಗನ್ನು ಕಣ್ತುಂಬಿಸಿಕೊಳ್ಳಬಹುದಾಗಿದೆ.
ಲಖ್ಪತ್ ಕೋಟೆಗೆ ಭೇಟಿ ನೀಡುವ ಮೂಲಕ ಭವ್ಯವಾದ ಸಂಸ್ಕೃತಿಯೊಂದಿಗೆ ಬೆರೆತು ಹೋಗಬಹುದು. ಅದಲ್ಲದೇ ಜಡೇಜಾಗಳ ಆಶ್ರಯ ದೇವತೆಯಾಗಿರುವ ಮಾತಾ ನೊ ಮಧ್ ಆಶಾಪುರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ನಮ್ಮ ಆಧ್ಯಾತ್ಮಿಕ ಲೋಕದಲ್ಲಿ ವಿಹರಿಸಬಹುದು.
ಕ್ರಾಂತಿ ತೀರ್ಥದ ಶ್ಯಾಮ್‌ಜಿ ಕೃಷ್ಣ ವರ್ಮಾ ಸ್ಮಾರಕದಲ್ಲಿ ನಮನ ಸಲ್ಲಿಸುವ ಮೂಲಕ ನಮ್ಮ ಸ್ವಾತಂತ್ರ್ಯ ಹೋರಾಟದ ನೆನಪುಗಳನ್ನು ಮೆಲುಕು ಹಾಕಬಹುದು . ಅದಲ್ಲದೇ, ಕಚ್ ಕರಕುಶಲ ವಸ್ತುಗಳ ವೀಕ್ಷಿಸುವ ಮೂಲಕ ಕಚ್ ಜನರ ಪ್ರತಿಭೆಗೆ ನೀವು ಸಾಕ್ಷಿಯಾಗಬಹುದು.
Published On - 5:50 pm, Sat, 21 December 24