
‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಅವರು ಸ್ನೇಹಜೀವಿ ಆಗಿದ್ದರು. ನಟ ಜೂನಿಯರ್ ಎನ್ಟಿಆರ್ ಜೊತೆ ಅವರು ಬಾಂಧವ್ಯ ಹೊಂದಿದ್ದರು. ಇವರಿಬ್ಬರ ಸ್ನೇಹಕ್ಕೆ ಈ ಫೋಟೋಗಳೇ ಸಾಕ್ಷಿ.

ಅಪ್ಪು ನಟಿಸಿದ್ದ ‘ಚಕ್ರವ್ಯೂಹ’ ಸಿನಿಮಾದ ‘ಗೆಳೆಯ.. ಗೆಳೆಯ..’ ಹಾಡಿಗೆ ಜೂನಿಯರ್ ಎನ್ಟಿಆರ್ ಧ್ವನಿ ನೀಡಿದ್ದರು. ಆ ಹಾಡು ಜನಮೆಚ್ಚುಗೆ ಪಡೆದುಕೊಂಡಿತು. ಅನೇಕ ಸಂದರ್ಭದಲ್ಲಿ ಅಪ್ಪು ಮತ್ತು ಜೂನಿಯರ್ ಎನ್ಟಿಆರ್ ಭೇಟಿ ಆಗಿದ್ದರು.

ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲಾಗುತ್ತಿದೆ. ಈ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಜೂನಿಯರ್ ಎನ್ಟಿಆರ್ ಭಾಗವಹಿಸುತ್ತಿದ್ದಾರೆ.

ಅಪ್ಪು ಬಗ್ಗೆ ಜೂನಿಯರ್ ಎನ್ಟಿಆರ್ ಅವರಿಗೆ ಸಖತ್ ಗೌರವ ಇತ್ತು. ಪುನೀತ್ ರಾಜ್ಕುಮಾರ್ ನಿಧನರಾದಾಗ ಅವರ ಅಂತಿಮ ದರ್ಶನ ಪಡೆಯಲು ಜೂನಿಯರ್ ಎನ್ಟಿಆರ್ ಬೆಂಗಳೂರಿಗೆ ಬಂದಿದ್ದರು.

ಇಂದು ಅಪ್ಪು ಇಲ್ಲ ಎಂಬ ನೋವು ಎಲ್ಲರನ್ನೂ ಕಾಡುತ್ತಿದೆ. ಜೂನಿಯರ್ ಎನ್ಟಿಆರ್ ಅವರ ಮನದಲ್ಲೂ ಈ ಬಗ್ಗೆ ನೋವಿದೆ. ಅವರ ಮನೆಯಲ್ಲಿ ಪುನೀತ್ ರಾಜ್ಕುಮಾರ್ ಫೋಟೋ ರಾರಾಜಿಸುತ್ತಿದೆ.
Published On - 3:34 pm, Tue, 1 November 22