
ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರನ್ನು ಬರೋಬ್ಬರಿ 3.7 ಕೋಟಿ ಜನರು ಹಿಂಬಾಲಿಸುತ್ತಿದ್ದಾರೆ. ರಶ್ಮಿಕಾ ದೇಶಾದ್ಯಂತ ಜನಪ್ರಿಯತೆ ಹೊಂದಿದ್ದಾರೆ. ಈ ಕಾರಣಕ್ಕೆ ಅವರಿಗೆ ಇಷ್ಟೊಂದು ಹಿಂಬಾಲಕರಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಬೋಲ್ಡ್ಲುಕ್ನಲ್ಲಿ ಅವರು ಗಮನ ಸೆಳೆದಿದ್ದಾರೆ. ಇದರ ಜೊತೆಗೆ ಅವರ ನಗು ಕೂಡ ಅನೇಕರಿಗೆ ಇಷ್ಟವಾಗಿದೆ.

‘ಪ್ರತಿ ಬಾರಿ ನೀವು ನಿಮ್ಮ ನಗುವಿನ ಮೂಲಕವೇ ನಮ್ಮನ್ನು ಕೊಲ್ಲುತ್ತೀರಿ’ ಎಂದು ಅನೇಕರು ಈ ಫೋಟೋಗೆ ಕಮೆಂಟ್ ಮಾಡಿದ್ದಾರೆ. 12 ಗಂಟೆಯಲ್ಲಿ ಈ ಫೋಟೋಗೆ 20 ಲಕ್ಷ ಲೈಕ್ಸ್ ಸಿಕ್ಕಿದೆ.

ರಶ್ಮಿಕಾ ಮಂದಣ್ಣ ಅವರು ನಿತೀನ್ ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಮುಹೂರ್ತ ಇತ್ತೀಚೆಗೆ ನೆರವೇರಿತು. ಎರಡನೇ ಬಾರಿಗೆ ರಶ್ಮಿಕಾ ನಿತೀನ್ ಜೊತೆ ಒಂದಾಗುತ್ತಿದ್ದಾರೆ.

ರಶ್ಮಿಕಾ ಅವರ ಜನಪ್ರಿಯತೆ ಹೆಚ್ಚುತ್ತಲೇ ಇದೆ. ‘ಅನಿಮಲ್’ ಹಾಗೂ ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ರಶ್ಮಿಕಾ ಬ್ಯುಸಿ ಆಗಿದ್ದಾರೆ.