ಬಾಕ್ಸಾಫೀಸ್ನಲ್ಲಿ ಬರೋಬ್ಬರಿ ₹ 326 ಕೋಟಿ ಕಲೆಕ್ಷನ್ ಮಾಡಿರುವ ‘ಪುಷ್ಪ: ದಿ ರೈಸ್’ನ ಯಶಸ್ಸಿನಲ್ಲಿದ್ದಾರೆ ರಶ್ಮಿಕಾ ಮಂದಣ್ಣ.
ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಇರುವ ನಟಿ ಹೊಸ ಫೋಟೋಶೂಟ್ ಮಾಡಿಸಿದ್ದು, ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಚಿತ್ರಗಳನ್ನು ಹಂಚಿಕೊಂಡಿರುವ ರಶ್ಮಿಕಾ ‘ಈ ಲುಕ್ ಹೇಗನ್ನಿಸುತ್ತದೆ?’ ಎಂದು ಫ್ಯಾನ್ಸ್ ಬಳಿ ಪ್ರಶ್ನಿಸಿದ್ದಾರೆ.
ಸಂಯುಕ್ತಾ ಹೊರನಾಡು, ಶೃತಿ ಹರಿಹರನ್, ಆಶಿಕಾ ರಂಗನಾಥ್ ಸೇರಿದಂತೆ ಖ್ಯಾತ ನಟಿಯರು ಪೋಸ್ಟ್ಗೆ ಪ್ರತಿಕ್ರಿಯಿಸಿ ಅದ್ಭುತ ಎಂದು ಉದ್ಗರಿಸಿದ್ದಾರೆ.
ಸದ್ಯ ಸ್ಕ್ರಿಪ್ಟ್ ಆಯ್ಕೆಯಲ್ಲಿ ಚ್ಯೂಸಿಯಾಗಿರುವ ರಶ್ಮಿಕಾಗೆ ವಿವಿಧ ಭಾಷೆಗಳಿಂದ ಖ್ಯಾತ ತಾರೆಯರ ಜತೆ ತೆರೆ ಹಂಚಿಕೊಳ್ಳಲು ಆಫರ್ ಬರುತ್ತಿದೆ.
ಸದ್ಯ ರಶ್ಮಿಕಾ ‘ಆಡವಾಲ್ಲು ಮೀಕು ಜೋಹಾರ್ಲು’, ‘,ಮಿಷನ್ ಮಜ್ನು’, ‘ಗುಡ್ ಬೈ’ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.