ರಾಷ್ಟ್ರಪತಿ ಭವನದಲ್ಲಿ 2023ರ ಪದ್ಮ ಶ್ರೀ ಪಡೆಯುವಾಗ ರವೀನಾ ಟಂಡನ್ ಧರಿಸಿದ ಸೊಗಸಾದ ಚಿನ್ನದ ಸೀರೆ ನೋಡಿ

|

Updated on: Apr 06, 2023 | 6:19 PM

ರವೀನಾ ಟಂಡನ್ 2023ರ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಪಡೆಡಿದ್ದಾರೆ. ಅವರು ತಮ್ಮ ಕುಟುಂಬದೊಂದಿಗೆ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಚಿತ್ರಗಳಲ್ಲಿ ರವೀನಾ ಅವರು ಉಟ್ಟ ಚಿನ್ನದ ಬಣ್ಣದ ಸೀರೆ ಎಲ್ಲರ ಗಮನ ಸೆಳೆದಿದೆ.

1 / 7
ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ರವೀನಾ ಟಂಡನ್ ಅವರಿಗೆ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. "ಪ್ರೀತಿ ಮತ್ತು ಆಚರಣೆಗಳ ದಿನ #ಪದ್ಮಶ್ರೀ #23" ಎಂಬ ಶೀರ್ಷಿಕೆಯೊಂದಿಗೆ ರವೀನಾ ಇನ್ಸ್ಟಾಗ್ರಾಮ್ನಲ್ಲಿ ಸಮಾರಂಭದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅವರು ಪ್ರಶಸ್ತಿ ಸ್ವೀಕರಿಸುವ ವೀಡಿಯೊವನ್ನು ಸಹ ಪೋಸ್ಟ್ ಮಾಡಿದ್ದಾರೆ ಮತ್ತು "ಪ್ರೀತಿ ಮತ್ತು ಗೌರವಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ನಿಮ್ಮ ಆಶೀರ್ವಾದಕ್ಕಾಗಿ ಅಪ್ಪಾ, ಮಾಮಿ ಮತ್ತು ಅಮ್ಮನಿಗೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.

2 / 7
ರವೀನಾ ಅವರ ಪೋಸ್ಟ್ ತನ್ನ ಕುಟುಂಬ ಸದಸ್ಯರೊಂದಿಗೆ ತೆಗೆದುಕೊಂಡಿದ್ದರು. ಅದರಲ್ಲಿ ಪತಿ-ನಿರ್ಮಾಪಕ ಅನಿಲ್ ಥಡಾನಿ, ಮಗ ರಣಬೀರ್ ಥಡಾನಿ ಮತ್ತು ಮಗಳು ರಾಶಾ ಥಡಾನಿ - ರಾಷ್ಟ್ರಪತಿ ಭವನದ ಹೊರಗೆ ಪೋಸ್ ನೀಡುತ್ತಿರುವುದನ್ನು ತೋರಿಸುತ್ತದೆ. ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ RRR ನಿರ್ದೇಶಕ SS ರಾಜಮೌಳಿ ಅವರೊಂದಿಗೂ ಫೋಟೋ ಕ್ಲಿಕ್ ಮಾಡಿಕೊಂಡಿದ್ದಾರೆ.

3 / 7
ಈ ವಿಶೇಷ ಸಂದರ್ಭಕ್ಕಾಗಿ ರವೀನಾ ಸೊಗಸಾದ ರೇಷ್ಮೆ ಸೀರೆಯನ್ನು ಆರಿಸಿಕೊಂಡಿದ್ದಾರೆ. ಸರಳವಾಗಿ ಸೀರೆಯನ್ನು ಉಟ್ಟಿದ್ದರು. ಈ ಚಿನ್ನದ ಬಣ್ಣದ ಸೀರೆಯನ್ನು ಕಪ್ಪು ಪಟ್ಟಿಯಿಂದ  ಅಲಂಕರಿಸಲ್ಪಟ್ಟಿತ್ತು. ಚಿನ್ನದ ಜಾಲ್ ಕಸೂತಿ, ರೌಂಡ್ ನೆಕ್ ಲೈನ್, ಕ್ರಾಪ್ ಹೆಮ್ ಲೆಂಥ್ ಮತ್ತು ಅಳವಡಿಸಲಾದ ಸಿಲೂಯೆಟ್ ಅನ್ನು ಒಳಗೊಂಡಿರುವ ಕಪ್ಪು ಅರ್ಧ ತೋಳಿನ ರವಿಕೆಯೊಂದಿಗೆ ಆರು ಗಜದ ಸೀರೆಯನ್ನು ಉಟ್ಟಿದ್ದರು.

4 / 7
ರವೀನಾ ಚಿನ್ನದ ಸೀರೆಯನ್ನು ಮುತ್ತು ಮತ್ತು ಚಿನ್ನದ ಜುಮುಕಿಗಳು, ಅಲಂಕೃತ ಚಿನ್ನದ ಬಳೆಗಳು ಮತ್ತು ಉಂಗುರಗಳು ಸೇರಿದಂತೆ ಸೊಗಸಾದ ಮತ್ತು ಸಾಂಪ್ರದಾಯಿಕ ಆಭರಣಗಳೊಂದಿಗೆ ಧರಿಸಿದ್ದರು. ಕೊನೆಯಲ್ಲಿ, ರವೀನಾ ಕಪ್ಪು ಕಾಡಿಗೆ, ನಯವಾದ ಐಲೈನರ್, ಸೂಕ್ಷ್ಮ ಎಯೇ ಶಾಡೋ, ಪ್ಲಮ್ ಲಿಪ್ ಶೇಡ್, ಗಾಢವಾದ ಹುಬ್ಬುಗಳು, ಚೀಕ್ ಬೋನ್, ರೆಪ್ಪೆಗಳಿಗೆ ಮಸ್ಕರಾ,ಡ್ಯೂಯಿ ಬೇಸ್ ಮತ್ತು ಬೀಮಿಂಗ್ ಹೈಲೈಟರ್ ಬಳಸಿ ಮೇಕ್ ಅಪ್ ಮಾಡಿಕೊಂಡಿದ್ದರು.

5 / 7
ಕೊನೆಯದಾಗಿ, ಬಿಳಿ ಹೂವಿನಿಂದ ಅಲಂಕರಿಸಲ್ಪಟ್ಟ ಮಧ್ಯಭಾಗದ ನಯವಾದ ಬನ್ ಮತ್ತು ಕಪ್ಪು ಬಿಂದಿ ಇಟ್ಟುಕೊಂಡಿದ್ದರು.

6 / 7
ರವೀನಾ ಅವರ ಚಿತ್ರಗಳಿಗೆ ಫ್ಯಾನ್ಸ್ ಹಲವಾರು ಲೈಕ್‌ಗಳು ಮತ್ತು ಕಾಮೆಂಟ್‌ಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ. ಮನೀಶ್ ಮಲ್ಹೋತ್ರಾ ಮತ್ತು ಸೋನಾಲಿ ಬೇಂದ್ರೆ ಹೃದಯದ ಎಮೋಜಿಗಳನ್ನು ಕಾಮೆಂಟ್ ಮಾಡಿದ್ದಾರೆ. ವಿಕ್ರಾಂತ್ ಮಾಸ್ಸೆ ಅವರು "ಬಹುತ್ ಬಹುತ್ ಬಧೈ" ಎಂದು ಪ್ರತಿಕ್ರಿಯಿಸಿದ್ದಾರೆ. ಅಭಿಮಾನಿಯೊಬ್ಬರು "ಅಭಿನಂದನೆಗಳು ಮೇಡಮ್" ಎಂದು ಬರೆದಿದ್ದಾರೆ. ಮತ್ತೊಬ್ಬರು "ವಾವ್ ವಾವ್ ವಾವ್" ಎಂಬ ಪ್ರತಿಕ್ರಿಯೆ ನೀಡಿದ್ದಾರೆ.

7 / 7
ಇದರ ಮಧ್ಯೆ, ರವೀನಾ ಕಳೆದ ವರ್ಷ ಬ್ಲಾಕ್ಬಸ್ಟರ್ ಕೆಜಿಎಫ್ 2 ನಲ್ಲಿ ಕೊನೆಯ ಭಾಗದಲ್ಲಿ ಕಾಣಿಸಿಕೊಂಡರು. ರವೀನಾ ಮುಂದಿನ ಚಿತ್ರದಲ್ಲಿ ಸಂಜಯ್ ದತ್, ಪಾರ್ಥ್ ಸಮತಾನ್ ಮತ್ತು ಖುಶಾಲಿ ಕುಮಾರ್ ಅವರೊಂದಿಗೆ ಮುಂಬರುವ ಚಿತ್ರ ಘುಡ್ಚಾಡಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರವೀನಾ ಅವರ ಮುಂಬರುವ ಚಿತ್ರಗಳಲ್ಲಿ ಅರ್ಬಾಜ್ ಖಾನ್ ಅವರ ಪಾಟ್ನಾ ಶುಕ್ಲಾ ಕೂಡ ಒಂದು.