ಜಾಮ್​​ನಗರ ಉತ್ತರ ಕ್ಷೇತ್ರದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು; ಮೊದಲ ಚುನಾವಣೆಯಲ್ಲೇ ಗೆದ್ದ ರಿವಾಬಾ ಜಡೇಜಾ

| Updated By: ರಶ್ಮಿ ಕಲ್ಲಕಟ್ಟ

Updated on: Dec 08, 2022 | 3:31 PM

ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಜಾಮ್​​ನಗರ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ರಿವಾಬಾ ಬಿಜೆಪಿ ಟಿಕೆಟ್​​ನಿಂದ ಸ್ಪರ್ಧಿಸಿದ್ದು, ಇದು ಅವರ ಮೊದಲ ಚುನಾವಣೆ ಆಗಿದೆ.

1 / 10
ರಿವಸಿನ್ಹ್ ಹರ್ದೇವ್‌ಸಿನ್ಹ್ ಸೋಲಂಕಿ ಅಥವಾ ರಿವಾಬಾ ರವೀಂದ್ರ ಸಿಂಗ್ ಜಡೇಜಾ ರಾಜ್‌ಕೋಟ್ ಮೂಲದವರು.

2 / 10
2016ರಲ್ಲಿ  ಕ್ರಿಕೆಟಿಗ ರವೀಂದ್ರ ಜಡೇಜಾ ಅವರನ್ನು ರಿವಾಬಾ ಮದುವೆಯಾದರು

3 / 10
ರಿವಾಬಾ ಗುಜರಾತ್‌ನ ರಾಜ್‌ಕೋಟ್‌ನಲ್ಲಿರುವ ಆತ್ಮೀಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್‌ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿದ್ದಾರೆ.

4 / 10
ಡಿಸೆಂಬರ್ 1 ರಂದು ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಜಾಮ್‌ನಗರ (ಉತ್ತರ) ಕ್ಷೇತ್ರದಲ್ಲಿ ಮತದಾನವಾಗಿತ್ತು

5 / 10
ರಿವಾಬಾ ಜಡೇಜಾ 2019 ರಲ್ಲಿ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಿಜೆಪಿಗೆ ಸೇರಿದ್ದು ಜಾಮ್‌ನಗರ -ಸೌರಾಷ್ಟ್ರ ಪ್ರದೇಶದಲ್ಲಿ ಸಕ್ರಿಯರಾಗಿದ್ದಾರೆ.

6 / 10
ರಿವಾಬಾ ಅವರು ಹಿರಿಯ ಕಾಂಗ್ರೆಸ್ ನಾಯಕ ಹರಿ ಸಿಂಗ್ ಸೋಲಂಕಿ ಅವರ ಸಂಬಂಧಿ. ಅವರು ಮಹಿಳಾ ವಿಭಾಗದ ಮುಖ್ಯಸ್ಥರಾಗಿದ್ದ ಸಮುದಾಯ ಸಂಘಟನೆಯಾದ ಕರ್ಣಿ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ

7 / 10
 2022 ರ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಬಿಜೆಪಿ ಶಾಸಕ ಧರ್ಮೇಂದ್ರಸಿನ್ಹ್ ಜಡೇಜಾ ಕೈ ಬಿಟ್ಟು ರಿವಾಬಾ ಅವರಿಗೆ ಮಣೆ ಹಾಕಲಾಯಿತು. ಬಿಜೆಪಿಯ ಲೆಕ್ಕಾಚಾರ ತಪ್ಪಲಿಲ್ಲ, ರಿವಾಬಾ ತಾನು ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲೇ ಭರ್ಜರಿ ಗೆಲುವು ಸಾಧಿಸಿದ್ದಾರೆ

8 / 10
ರಿವಾಬಾ ಜಾಮ್‌ನಗರ ಉತ್ತರ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಜಾಮ್‌ನಗರ ರವೀಂದ್ರ ಜಡೇಜಾ ಅವರ ಹುಟ್ಟೂರು.

9 / 10
ಇದು ನನ್ನ ಗೆಲುವು ಮಾತ್ರವಲ್ಲ ನಮ್ಮೆಲ್ಲರ ಗೆಲುವು.ಗುಜರಾತ್ ಬಿಜೆಪಿ ಜತೆಗಿತ್ತು ಮತ್ತು ಮುಂದೆಯೂ ಅವರೊಂದಿಗಿರುತ್ತದೆ ಎಂದು ರಿವಾಬಾ ಹೇಳಿದ್ದಾರೆ

10 / 10
ಬಿಜೆಪಿಯ ರಿವಾಬಾ ಜಡೇಜಾ  ಜಾಮ್‌ನಗರ ಉತ್ತರ ಕ್ಷೇತ್ರದಿಂದ ತಮ್ಮ ಸಮೀಪದ ಪ್ರತಿಸ್ಪರ್ಧಿ ಆಮ್ ಆದ್ಮಿ ಪಕ್ಷದ ಕರ್ಸನ್ ಕರ್ಮುರ್ ಅವರನ್ನು 40,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ.