Realme 9i 5G: ರಿಯಲ್ ಮಿ ಹೊಸ ಫೋನ್ ಬಿಡುಗಡೆಗೆ ದಿನಗಣನೆ: ಯಾವುದು?, ಏನು ಫೀಚರ್ಸ್?

Edited By:

Updated on: Aug 15, 2022 | 12:34 PM

ರಿಯಲ್ ಮಿ ಕಂಪನಿ ಇದೇ ತಿಂಗಳು ಆಗಸ್ಟ್ 18 ರಂದು ಭಾರತದಲ್ಲಿ ತನ್ನ ಹೊಸ ರಿಯಲ್ ಮಿ 9i ಸ್ಮಾರ್ಟ್ ಫೋನನ್ನು ಅನಾವರಣ ಮಾಡುತ್ತಿದೆ. ಈ 5G ಫೋನ್ ಬೆಳಗ್ಗೆ 11:30 ಕ್ಕೆ ವಿಶೇಷ ಕಾರ್ಯಕ್ರಮದಲ್ಲಿ ಲಾಂಚ್ ಆಗಲಿದೆ.

1 / 7
ಎರಡನೇ ಕ್ವಾರ್ಟರ್​ ನಲ್ಲಿ ಪ್ರಸಿದ್ಧ ರಿಯಲ್ ಮಿ ಸಂಸ್ಥೆ ತನ್ನ ಸ್ಮಾರ್ಟ್​ ಫೋನ್ ಗಳನ್ನು ಬಿಡುಗಡೆ ಮಾಡುತ್ತಿರುವ ಸಂಖ್ಯೆಯಲ್ಲಿ ಕೊಂಚ ಇಳಿಕೆ ಕಂಡಿದೆ. ಈ ಹಿಂದೆ ತಿಂಗಳಿಗೆ ಕನಿಷ್ಠ ಎರಡು ಮೊಬೈಲ್ ಗಳನ್ನು ಅನಾವರಣ ಮಾಡುತ್ತಿದ್ದ ಕಂಪನಿ ಈಗೀಗ ಅಪರೂಪಕ್ಕೆ ಒಂದೊಂದು ಫೋನ್ ಗಳನ್ನು ರಿಲೀಸ್ ಮಾಡುತ್ತಿದೆ. ಹೀಗಿರುವಾಗ ರಿಯಲ್ ಮಿ ಭಾರತದಲ್ಲಿ ಹೊಸ ಫೋನೊಂದನ್ನ ಬಿಡುಗಡೆ ಮಾಡುವ ಕುರಿತು ಮಾಹಿತಿ ನೀಡಿದೆ.

2 / 7

ರಿಯಲ್ ಮಿ ಕಂಪನಿ ಇದೇ ತಿಂಗಳು ಆಗಸ್ಟ್ 18 ರಂದು ಭಾರತದಲ್ಲಿ ತನ್ನ ಹೊಸ ರಿಯಲ್ ಮಿ 9i ಸ್ಮಾರ್ಟ್ ಫೋನನ್ನು ಅನಾವರಣ ಮಾಡುತ್ತಿದೆ. ಈ 5G ಫೋನ್ ಬೆಳಗ್ಗೆ 11:30 ಕ್ಕೆ ವಿಶೇಷ ಕಾರ್ಯಕ್ರಮದಲ್ಲಿ ಲಾಂಚ್ ಆಗಲಿದೆ.

3 / 7

ಈ ಫೋನಿನ ಬಗ್ಗೆ ಖಚಿತ ಮಾಹಿತಿ ತಿಳಿದುಬಂದಿಲ್ಲ. ಆದರೆ, ಮೂಲಗಳ ಪ್ರಕಾರ ಇದು 6.6-ಇಂಚಿನ ಫುಲ್‌ HD+ LCD ಡಿಸ್‌ ಪ್ಲೇಯನ್ನು ಹೊಂದಿರಲಿದೆ. ಈ ಡಿಸ್‌ ಪ್ಲೇ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿರಲಿದೆ ಎನ್ನಲಾಗಿದೆ.

4 / 7

ಬಲಿಷ್ಠವಾದ ಮೀಡಿಯಾ ಟೆಕ್‌ ಹಿಲಿಯೋ 810 5G ಪ್ರೊಸೆಸರ್‌ ಬಲವನ್ನು ಪಡೆದಿರಲಿದೆ. ಇದು ಆಂಡ್ರಾಯ್ಡ್‌ 11 ಆಧಾರಿತ ರಿಯಲ್‌ಮಿ UI 2.o ಅನ್ನು ರನ್ ಮಾಡುತ್ತದೆ. ಈ ಫೋನ್‌ ಗೋಲ್ಡ್ ಕಲರ್ ರೂಪಾಂತರದಲ್ಲಿ ಬರುತ್ತದೆ.

5 / 7

ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿರಲಿದೆ. ಎರಡನೇ ಕ್ಯಾಮೆರಾ 2MP ಡೆಪ್ತ್‌ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾದಲ್ಲಿ 2MP ಮ್ಯಾಕ್ರೋ ಲೆನ್ಸ್‌ ನೀಡಲಾಗಿದೆ. 16MP ಸೆಲ್ಫಿ ಕ್ಯಾಮೆರಾ ಕೂಡ ಇದೆ.

6 / 7

ರಿಯಲ್‌ಮಿ 9i 5G ಸ್ಮಾರ್ಟ್‌ ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಆದರೆ, ಇದು ಎಷ್ಟೊ ವೋಲ್ಟ್ ನ ಬೆಂಬಲ ಪಡೆದುಕೊಂಡಿದೆ ಎಂದು ತಿಳಿದುಬಂದಿಲ್ಲ.

7 / 7

ಈ ಸ್ಮಾರ್ಟ್‌ ಫೋನಿನ ನಿಖರ ಬೆಲೆ ಕೂಡ ಬಹಿರಂಗಗೊಂಡಿಲ್ಲ. ಮೂಲಗಳ ಪ್ರಕಾರ ಭಾರತದಲ್ಲಿ ಇದರ ಬೆಲೆ 15,000ರೂ. ಯಿಂದ 20,000ರೂ. ನಡುವೆ ಇರಬಹುದು ಎನ್ನಲಾಗಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಅಥವಾ ಫ್ಲಿಪ್ ಕಾರ್ಟ್ ಮೂಲಕ ಸೇಲ್ ಕಾಣಲಿದೆ.

Published On - 12:33 pm, Mon, 15 August 22

Loading...
Unable to load recommendations.
Follow Us