ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ನಡುವಣ ದರ ಸಮರ ಮುಂದುವರೆದಿದೆ. ಈ ಮೂರು ಕಂಪೆನಿಗಳು ಒಂದೇ ಮಾದರಿ ದೀರ್ಘಾವಧಿಯ ರಿಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. ಗ್ರಾಹಕರನ್ನು ಸೆಳೆಯಲು ಕಂಪನಿಗಳು ಹೊಸ ಯೋಜನೆಗಳನ್ನು ನೀಡುತ್ತಲೇ ಇದ್ದು, ಇದೀಗ ಒಂದು ವರ್ಷದ ವ್ಯಾಲಿಡಿಟಿಯ ಭರ್ಜರಿ ಪ್ಯಾಕ್ಗಳನ್ನು ಗ್ರಾಹಕರ ಮುಂದಿಟ್ಟಿದೆ.
ನೀವು ಇಂತಹ ದೀರ್ಘಾವಧಿಯ ರಿಚಾರ್ಜ್ ಪ್ಲ್ಯಾನ್ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಹಣವನ್ನು ಸಹ ಉಳಿಸಿಕೊಳ್ಳಬಹುದು. ಏಕೆಂದರೆ ಪ್ರತಿ ತಿಂಗಳಿಗೆ 100 ರಿಂದ 200 ರೂ ರಿಚಾರ್ಜ್ ಮಾಡುವ ಗ್ರಾಹಕರು ಒಂದು ವರ್ಷ ವಾಲಿಡಿಟಿಯ ಪ್ಯಾಕ್ ಹಾಕಿಕೊಳ್ಳುವುದರಿಂದ ತಿಂಗಳಿಗೆ ಕಡಿಮೆ ಮೊತ್ತವನ್ನು ಪಾವತಿಸದಂತಾಗುತ್ತದೆ. ಅಂತಹ ಮೂರು ರಿಚಾರ್ಜ್ ಪ್ಲ್ಯಾನ್ಗಳನ್ನು ಇಲ್ಲಿ ತಿಳಿಸಲಾಗಿದೆ.
Jio Network Down
ಏರ್‌ಟೆಲ್ 249 ರೂ. ಪ್ಲ್ಯಾನ್: ಏರ್‌ಟೆಲ್ ಪರಿಚಯಿಸಿರುವ 249 ಕ್ಕೆ ಪ್ರಿಪೇಯ್ಡ್ ಪ್ಲ್ಯಾನ್ ವಾಲಿಡಿಟಿ 28 ದಿನಗಳು ಮಾತ್ರ. ಈ 28 ದಿನಗಳಲ್ಲಿ ಬಳಕೆದಾರರಿಗೆ ಪ್ರತಿದಿನ 1.5GB ಡೇಟಾ ಉಚಿತವಾಗಿ ದೊರೆಯಲಿದೆ. ಇನ್ನು ಈ ಪ್ಲ್ಯಾನ್ ಮೂಲಕ ಗ್ರಾಹಕರು ಅನಿಯಮಿತ ಕರೆ ಸೌಲಭ್ಯ ಪಡೆಯಲಿದ್ದಾರೆ. ಇದರ ಜೊತೆಗೆ ದಿನಕ್ಕೆ 100 SMS, ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿ, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಮತ್ತು ವಿಂಕ್ ಮ್ಯೂಸಿಕ್‌ಗೆ ಚಂದಾದಾರಿಕೆಯನ್ನು ಪಡೆಯಬಹುದು.
ವೊಡಾಫೋನ್ ಐಡಿಯಾ 1499 ರೂ. ಯೋಜನೆ: ವೊಡಾಫೋನ್ ಐಡಿಯಾ ಕೂಡ ದೀರ್ಘಾವಧಿ ಯೋಜನೆ ಪರಿಚಯಿಸಿದ್ದು, ಈ ರಿಚಾರ್ಜ್ ಪ್ಲ್ಯಾನ್ನಲ್ಲೂ ಗ್ರಾಹಕರಿಗೆ ಒಟ್ಟು 24 ಜಿಬಿ ಡೇಟಾ ಸಿಗಲಿದೆ. ಅನಿಯಮಿತ ಧ್ವನಿ ಕರೆ ಹಾಗೂ 3600 ಉಚಿತ ಎಸ್‌ಎಂಎಸ್‌ಗಳು ಲಭ್ಯವಿರುವ ಈ ಪ್ಲ್ಯಾನ್ನ ವಾಲಿಡಿಟಿ 365 ದಿನಗಳು. ಇದಲ್ಲದೇ, ವಿ ಮೂವೀಸ್ ಮತ್ತು ಟಿವಿ ಬೇಸಿಕ್‌ಗೆ ಉಚಿತ ಪ್ರವೇಶ ಲಭ್ಯವಿರುತ್ತದೆ. ಈ ರಿಚಾರ್ಜ್ ಮೊತ್ತವನ್ನು ಮಾಸಿಕ ರೀಚಾರ್ಜ್ ಆಗಿ ವಿಭಾಗಿಸಿದರೆ, ಪ್ರತಿ ತಿಂಗಳು ಸುಮಾರು 125 ರೂ. ಆಗಿರುತ್ತದೆ.