Toy Train: ಮತ್ತೆ ಸಂಚಾರ ಆರಂಭಿಸಿದೆ ಟಾಯ್ ಟ್ರೈನ್; ಡಾರ್ಜಿಲಿಂಗ್​ಗೆ ಹೋಗಿ ಈ ರೈಲಿನಲ್ಲಿ ಪ್ರಯಾಣಿಸದಿದ್ದರೆ ಹೇಗೆ?

Tourism: ಕಳೆದ ವರ್ಷ ಲಾಕ್​ಡೌನ್ ಬಳಿಕ ಟಾಯ್ ಟ್ರೈನ್ ಸಂಚಾರ ಸ್ಥಗಿತಗೊಂಡಿತ್ತು. ಆದರೆ, ಈಗ ಮತ್ತೆ ಕಾರ್ಯಾರಂಭ ಆಗುತ್ತಿರುವಂತೆ ಪ್ರವಾಸಿಗರು ಬರಲು ಆರಂಭಿಸಿದ್ದಾರೆ.

| Updated By: ಆಯೇಷಾ ಬಾನು

Updated on: Aug 30, 2021 | 7:39 AM

ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ಹಾಗೂ ಡಾರ್ಜಿಲಿಂಗ್ ನಡುವೆ ಸಂಚರಿಸುವ ವಿಶ್ವ ವಿಖ್ಯಾತ ಟಾಯ್ ಟ್ರೈನ್ ಮತ್ತೆ ಓಡಾಟ ಆರಂಭಿಸಿದೆ. ಕೊರೊನಾ ಕಾರಣದಿಂದ ಈ ರೈಲು ಓಡಾಟ ಸ್ಥಗಿತಗೊಂಡಿತ್ತು. ಕಳೆದ ಒಂದೂವರೆ ವರ್ಷದಿಂದ ಈ ರೈಲು ಓಡಾಟ ನಡೆಸುತ್ತಿರಲಿಲ್ಲ. ಈ ಆಟಿಕೆ ರೈಲು ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೇ ಎಂದು ಖ್ಯಾತವಾಗಿದೆ. ಇದೀಗ ಯುನೆಸ್ಕೋ ವರ್ಲ್ಡ್ ಹೆರಿಟೇಜ್​ಗೂ ಸೇರಿಕೊಂಡಿದೆ. ರೈಲು ಸಂಚಾರ ಮತ್ತೆ ಆರಂಭಗೊಂಡಿರುವುದು ಪ್ರವಾಸಿಗರ ಸಂಭ್ರಮ ಹೆಚ್ಚಿಸಿದೆ. ನೀವು ಕೂಡ ಈ ರೈಲಿನಲ್ಲಿ ಪ್ರಯಾಣಿಸಬೇಕು ಎಂದಾದರೆ ಡಾರ್ಜಿಲಿಂಗ್ ಟೂರ್ ಫಿಕ್ಸ್ ಮಾಡಿಕೊಳ್ಳಿ.

Toy Train resumed after Coronavirus best destination for Tourists Tourism Spot in North East India

1 / 5
ಈ ರೈಲು ಪ್ರಯಾಣ ಎಷ್ಟು ಖ್ಯಾತವಾಗಿದೆ ಎಂದರೆ ಬಹಳಷ್ಟು ಪ್ರವಾಸಿಗರು ಇಲ್ಲಿಗೆ ರೈಲು ಪ್ರಯಾಣಕ್ಕೆ ಎಂದೇ ಭೇಟಿ ಕೊಡುತ್ತಾರೆ. ಡಾರ್ಜಿಲಿಂಗ್​ಗೆ ಭೇಟಿ ಕೊಟ್ಟು ಈ ರೈಲು ಪ್ರಯಾಣ ಮಾಡದಿದ್ದರೆ ಆ ಪ್ರವಾಸವೇ ದಂಡ ಎಂದು ಹೇಳಬಹುದು. ಅಷ್ಟೊಂದು ಖ್ಯಾತಿ ಈ ರೈಲು ಪ್ರಯಾಣಕ್ಕಿದೆ. ಈ ಟಾಯ್ ಟ್ರೈನ್​ನ್ನು 1879 ಮತ್ತು 1881 ರ ನಡುವೆ ನಿರ್ಮಿಸಲಾಗಿದೆ.

Toy Train resumed after Coronavirus best destination for Tourists Tourism Spot in North East India

2 / 5
ಪಶ್ಚಿಮ ಬಂಗಾಳದ ದುರ್ಗಾ ಪೂಜೆಗೂ ಮೊದಲು ಈ ರೈಲು ಕಾರ್ಯಾರಂಭ ಶುರುಮಾಡಿದೆ. ಇದರಿಂದಾಗಿ ಅಲ್ಲಿನ ಪ್ರವಾಸೋದ್ಯಮಕ್ಕೆ ಬಹಳಷ್ಟು ಲಾಭ ಆಗುವ ನಿರೀಕ್ಷೆ ಇದೆ. ಆರ್ಥಿಕತೆ ಸುಧಾರಿಸುವ ಚಟುವಟಿಕೆಯಾಗಿಯೂ ಇದು ಕಾಣಿಸಿಕೊಂಡಿದೆ. ಜಲ್ಪೈಗುರಿ ಹಾಗೂ ಡಾರ್ಜಿಲಿಂಗ್ ನಡುವಿನ ಅಂತರ 88 ಕಿಲೋ ಮೀಟರ್ ಆಗಿದೆ.

3 / 5
ಹಿಮಾಲಯನ್ ರೈಲ್ವೇ ಯುನೆಸ್ಕೋದಿಂದ ವರ್ಲ್ಡ್ ಹೆರಿಟೇಜ್ ಸೈಟ್ ಎಂದು ಗುರುತಿಸಿಕೊಂಡಿದೆ. ನೀಲಗಿರಿ ಮೌಂಟೇನ್ ರೈಲ್ವೇ ಮತ್ತು ಕಲ್ಕಾ ಶಿಮ್ಲಾ ರೈಲ್ವೇ ಕೂಡ ಈ ಸಾಲಿನಲ್ಲಿದೆ. ಈ ರೈಲ್ವೇಯ ಹೆಡ್ ಕ್ವಾರ್ಟರ್ಸ್ ಕುರ್ಸೆಯೊಂಗ್ ನಗರದಲ್ಲಿದೆ. ಈ ರೈಲಿನ ಟ್ರಾಕ್ ಹಾಗೂ ಸಂಚರಿಸುವ ಮಾರ್ಗ ಬಹಳ ವಿಭಿನ್ನವಾಗಿದೆ. ಗುಡ್ಡಗಾಡುಗಳ ನಡುವೆ ರೈಲು ಹಾವಿನಂತೆ ಸಂಚರಿಸುತ್ತದೆ.

4 / 5
ಕಳೆದ ವರ್ಷ, ಲಾಕ್​ಡೌನ್ ಬಳಿಕ ಟಾಯ್ ಟ್ರೈನ್ ಸಂಚಾರ ಸ್ಥಗಿತಗೊಂಡಿತ್ತು. ಆದರೆ, ಈಗ ಮತ್ತೆ ಕಾರ್ಯಾರಂಭ ಆಗುತ್ತಿರುವಂತೆಯೇ ಪ್ರವಾಸಿಗರು ಬರಲು ಆರಂಭಿಸಿದ್ದಾರೆ. ಈ ಭಾಗದ ಜನರ ಆದಾಯವು ಪ್ರವಾಸೋದ್ಯಮವನ್ನೇ ಹೆಚ್ಚಾಗಿ ಅವಲಂಬಿಸಿದೆ. ಹಾಗಾಗಿ, ಟಾಯ್ ಟ್ರೈನ್ ಆರಂಭದ ಜೊತೆಗೆ ಅವರ ಜೀವನವೂ ಮತ್ತೆ ಹಳಿಗೆ ಬರುತ್ತಿದೆ.

5 / 5
Follow us
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘

ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ

ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ

ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ

ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ

ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ

ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...

ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ

Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ