Kannada News Photo gallery Remembering Atal Bihari Vajpayee: Here are some fascinating facts about this renowned leader that everyone should be aware
Atal Bihari Vajpayee Death Anniversary: ಅಟಲ್ ಬಿಹಾರಿ ವಾಜಪೇಯಿ ಕುರಿತ ಇಂಟರೆಸ್ಟಿಂಗ್ ಸಂಗತಿಗಳು ಇಲ್ಲಿವೆ
ಇಂದು ಅಟಲ್ ಬಿಹಾರಿ ವಾಜಪೇಯಿ ಅವರ 5ನೇ ವರ್ಷದ ಪುಣ್ಯ ತಿಥಿಯನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಆದ್ದರಿಂದ ನೀವು ತಿಳಿದುಕೊಳ್ಳಬೇಕಾದ ಕೆಲವೊಂದು ಇಂಟರೆಸ್ಟಿಂಗ್ ಸಂಗತಿಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.
1 / 9
ಭಾರತದ ಮಾಜಿ ಪ್ರಧಾನಿ,ಮಹಾನ್ ವಾಗ್ಮಿ ಅಟಲ್ ಬಿಹಾರಿ ವಾಜಪೇಯಿ ಅವರು 16 ಆಗಸ್ಟ್ 2018 ರಂದು ನಿಧನರಾದರು. ಇಂದು ಅವರ 5ನೇ ವರ್ಷದ ಪುಣ್ಯ ತಿಥಿಯನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ.
2 / 9
ಅಟಲ್ ಬಿಹಾರಿ ವಾಜಪೇಯಿ ಅವರ ಕುರಿತು ನೀವು ತಿಳಿದುಕೊಳ್ಳಬೇಕಾದ ಕೆಲವೊಂದು ಇಂಟರೆಸ್ಟಿಂಗ್ ಸಂಗತಿಗಳನ್ನು ನೀವು ಈ ಲೇಖನದಲ್ಲಿ ತಿಳಿದುಕೊಳ್ಳಿ.
3 / 9
ಅಟಲ್ ಬಿಹಾರಿ ವಾಜಪೇಯಿ ಅವರು 25 ಡಿಸೆಂಬರ್ 1924 ರಂದು (ಕ್ರಿಸ್‌ಮಸ್ ದಿನ) ಜನಿಸಿದರು. ತಾಯಿ ಕೃಷ್ಣಾ ದೇವಿ ಮತ್ತು ಅವರ ತಂದೆ ಕೃಷ್ಣ ಬಿಹಾರಿ ವಾಜಪೇಯಿ.
4 / 9
ಅಟಲ್ ಬಿಹಾರಿ ವಾಜಪೇಯಿ ಅವರು ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದರೂ ಕೂಡ ಮಾಂಸಾಹಾರ ಎಂದರೆ ಅಚ್ಚು ಮೆಚ್ಚು. ವಿಶೇಷವಾಗಿ ಸಮುದ್ರಹಾರಗಳನ್ನು ಹೆಚ್ಚಾಗಿ ಇಷ್ಟ ಪಡುತ್ತಿದ್ದರು.
5 / 9
10ನೇ ತರಗತಿಯಲ್ಲಿ ಕವನಗಳನ್ನು ಬರೆಯುವ ಅತಿಯಾದ ಆಸಕ್ತಿಯನ್ನು ಹೊಂದಿದ್ದರು. "ಹಿಂದೂ ತಾನ್ ಮನ್, ಹಿಂದೂ ಜೀವನ್, ರಾಗ್ ರಾಗ್ ಹಿಂದೂ-ಮೇರಾ ಪರಿಚಯ್" ಮುಂತಾದ ಕವಿತೆಗಳನ್ನು ಬರೆದಿದ್ದಾರೆ.
6 / 9
ವಾಜಪೇಯಿ ಅವರು ಮರಾಠಿ ಭಾಷೆಯಲ್ಲೂ ನಿರರ್ಗಳವಾಗಿ ಮಾತನಾಡುತ್ತಿದ್ದರು. ಅವರು ವೀರ್ ಸಾವರ್ಕರ್ ಅವರ ಕವಿತೆಗಳನ್ನು ಮರಾಠಿಯಿಂದ ಹಿಂದಿಗೆ ಅನುವಾದಿಸಿದ್ದಾರೆ.
7 / 9
ಅಟಲ್ ಬಿಹಾರಿ ವಾಜಪೇಯಿ ಮತ್ತು ಅವರ ಹಿರಿಯ ಸಹೋದರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ 23 ದಿನಗಳ ವರೆಗೆ ಜೈಲುವಾಸವನ್ನೂ ಅನುಭವಿಸಿದರು.
8 / 9
ಅಟಲ್ ಬಿಹಾರಿ ವಾಜಪೇಯಿ ಮತ್ತು ಅವರ ತಂದೆ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದರು. ಅವರು ಮತ್ತು ಅವರ ತಂದೆ ತಮ್ಮ ಕಾನೂನು ಅಧ್ಯಯನಕ್ಕಾಗಿ ಒಂದೇ ಕಾನೂನು ಕಾಲೇಜಿಗೆ (ಕಾನ್ಪುರದ ಡಿಎವಿ ಕಾಲೇಜು) ಒಟ್ಟಿಗೆ ದಾಖಲಾತಿ ಪಡೆದು, ಹಾಸ್ಟೆಲ್‌ನಲ್ಲಿ ಒಂದೇ ಕೊಠಡಿಯನ್ನು ಹಂಚಿಕೊಂಡಿದ್ದರು.
9 / 9
ಅಟಲ್ ಬಿಹಾರಿ ವಾಜಪೇಯಿ ಅವರು ಮದುವೆಯಾಗಿಲ್ಲ. ಆದರೆ ಪುತ್ರಿ ನಮಿತಾ ಭಟ್ಟಾಚಾರ್ಯ ಅವರನ್ನು ದತ್ತು ಪಡೆದುಕೊಂಡಿದ್ದರು. 2004 ರಲ್ಲಿ, ಅಟಲ್ ಬಿಹಾರಿ ಅವರು ತಮ್ಮ ಕೊನೆಯ ಚುನಾವಣೆಯಲ್ಲಿ ಲಕ್ನೋದಿಂದ ಸ್ವತಂತ್ರ ಅಭ್ಯರ್ಥಿಯಾದ ರಾಮ್ ಜೇಠ್ಮಲಾನಿ ಅವರ ವಿರುದ್ಧ ಗೆದ್ದರು.