
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ಬಹುಭಾಷಾ ನಟಿ. ಹಲವು ಭಾಷೆಗಳಲ್ಲಿ ಅವರು ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ.

ರಶ್ಮಿಕಾ ಬಾಲಿವುಡ್ ಪ್ರವೇಶಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ‘ಮಿಷನ್ ಮಜ್ನು’ ಜೂನ್ 10ರಂದು ರಿಲೀಸ್ ಆಗಲಿದೆ.

ಲೇಟೆಸ್ಟ್ ವರದಿಗಳ ಪ್ರಕಾರ ರಶ್ಮಿಕಾ ಕಾಲಿವುಡ್ನ ಸ್ಟಾರ್ ಓರ್ವರ ಚಿತ್ರಕ್ಕೆ ನಾಯಕಿಯಾಗಲಿದ್ದಾರೆ.

ದಳಪತಿ ವಿಜಯ್ ನಟನೆಯ 66ನೇ ಚಿತ್ರಕ್ಕೆ ರಶ್ಮಿಕಾ ನಾಯಕಿ ಎಂದು ಕಾಲಿವುಡ್ ವರದಿಗಳು ಹೇಳುತ್ತಿವೆ.

ಆದರೆ ರಶ್ಮಿಕಾ ಹೊಸ ಚಿತ್ರದ ಬಗ್ಗೆ ಇನ್ನಷ್ಟೇ ಅಧಿಕೃತವಾಗಿ ಮಾಹಿತಿ ಬರಬೇಕಿದೆ. ಅದಾಗ್ಯೂ ಈ ಗಾಸಿಪ್ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಕೆಲ ಸಮಯದ ಹಿಂದೆ ರಶ್ಮಿಕಾ ಬಾಲಿವುಡ್ನ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಆಫೀಸ್ನಲ್ಲಿ ಕಾಣಿಸಿಕೊಂಡಿದ್ದರು.

ಕರಣ ಜೋಹರ್ ಜತೆ ಮಾತುಕತೆ ನಡೆಯುತ್ತಿರುವುದರಿಂದ ಮತ್ತೊಂದು ದೊಡ್ಡ ಬಾಲಿವುಡ್ ಚಿತ್ರ ರಶ್ಮಿಕಾ ತೆಕ್ಕೆಗೆ ಬೀಳಬಹುದು ಎಂಬ ಸುದ್ದಿಯೂ ಬಾಲಿವುಡ್ ಅಂಗಳದಿಂದ ಬಂದಿದೆ.

ಒಟ್ಟಿನಲ್ಲಿ ಕೈತುಂಬಾ ಅವಕಾಶಗಳನ್ನು ಹೊಂದಿರುವ ರಶ್ಮಿಕಾ, ಕನ್ನಡಕ್ಕೆ ಯಾವಾಗ ಮರಳಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
Published On - 9:48 pm, Fri, 11 March 22