
ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ನಂತರದಲ್ಲಿ ಅವರ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ಬದುಕು ಸಂಪೂರ್ಣವಾಗಿ ಬದಲಾಯಿತು. ಸಾಕಷ್ಟು ಏಳುಬೀಳುಗಳನ್ನು ಅವರು ಕಂಡರು. ಸುಶಾಂತ್ ಸಾವಿನಿಂದ ಅವರ ವೃತ್ತಿ ಜೀವನಕ್ಕೆ ದೊಡ್ಡ ನಷ್ಟ ಉಂಟಾಯಿತು.

ಸುಶಾಂತ್ ಸಾವಿಗೆ ರಿಯಾ ನೇರ ಕಾರಣ ಎಂದು ಅಭಿಮಾನಿಗಳು ಗೂಬೆ ಕೂರಿಸಿದರು. ಈ ಪ್ರಕರಣದ ಜಾಡು ಹುಡುಕಿ ಹೊರಟವರಿಗೆ ಮಾದಕದ್ರವ್ಯದ ವಾಸನೆ ಹೊಡೆದಿತ್ತು. ಹೀಗಾಗಿ, ರಿಯಾ ಅವರನ್ನು ಬಂಧಿಸಲಾಯಿತು. ಕೆಲ ದಿನ ಜೈಲಿನಲ್ಲಿದ್ದ ಅವರು ಜಾಮೀನಿನ ಮೇಲೆ ಬಿಡುಗಡೆ ಆದರು.

ಸದ್ಯ, ರಿಯಾ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. 2018ರಲ್ಲಿ ‘ಜಲೇಬಿ’ ಸಿನಿಮಾದಲ್ಲಿ ನಟಿಸಿದ್ದರು. ನಂತರ 3 ವರ್ಷಗಳ ಬಳಿಕ ಅಂದರೆ 2021ರಲ್ಲಿ ‘ಚೆಹ್ರೆ’ ಸಿನಿಮಾದಲ್ಲಿ ಕಾಣಿಸಿಕೊಂಡರು. ಈ ಸಿನಿಮಾ ಸೋತಿತು.

ಸುಶಾಂತ್ ಸಾವಿನ ನಂತರದಲ್ಲಿ ರಿಯಾ ಅಪಖ್ಯಾತಿ ಹೆಚ್ಚಿದೆ. ಹೀಗಾಗಿ ಅವರಿಗೆ ಸಿನಿಮಾ ಆಫರ್ ನೀಡೋಕೆ ಸಿನಿಮಂದಿ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.

ಹೊಸಹೊಸ ಫೋಟೋಶೂಟ್ ಮಾಡಿಸಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅವರು ಪೋಸ್ಟ್ ಮಾಡುತ್ತಾ ಇರುತ್ತಾರೆ.