ಮೂರು ಹೊತ್ತು ಕೂಡ ಅನ್ನವೇ ಉಣ್ಣುತ್ತೀರಾ? ಹಾಗಿದ್ದರೆ ನೀವು ಈ ವಿಚಾರ ತಿಳಿಯಲೇಬೇಕು

| Updated By: Ganapathi Sharma

Updated on: Nov 13, 2023 | 10:37 PM

ಪ್ರಪಂಚದಲ್ಲಿ ಅತಿ ಹೆಚ್ಚು ಸೇವಿಸುವ ಆಹಾರಗಳಲ್ಲಿ ಅನ್ನ ಪ್ರಮುಖವಾದದ್ದು. ಬಿಳಿ ಅಕ್ಕಿಯನ್ನು ಅನೇಕ ರೀತಿಯ ಅಡುಗೆಗಳಲ್ಲಿ ಬಳಸಲಾಗುತ್ತದೆ. ಅಕ್ಕಿಯಿಂದ ತಯಾರಿಸಿದ ಆಹಾರ ಪದಾರ್ಥಗಳು ನಮಗೆ ತ್ವರಿತ ಶಕ್ತಿಯನ್ನು ನೀಡುತ್ತವೆ. ದಕ್ಷಿಣ ಭಾರತದವರಿಗೆ ಅನ್ನ ತಿನ್ನದೆ ಒಂದು ದಿನವೂ ಕಳೆಯುವುದಿಲ್ಲ. ಇಲ್ಲಿ ಅವರಿಗೆ ಅನ್ನವೇ ಮುಖ್ಯ ಆಹಾರ. ಆದರೆ ಹೆಚ್ಚು ಅನ್ನ ತಿನ್ನುವುದು ತುಂಬಾ ಹಾನಿಕಾರಕ ಎನ್ನುತ್ತಾರೆ ಆರೋಗ್ಯ ತಜ್ಞರು. ದೇಹಕ್ಕೆ ಸಾಕಷ್ಟು ನಾರಿನಂಶ ಸಿಗದಿದ್ದರೆ ಮಲಬದ್ಧತೆಯಂಥ ಸಮಸ್ಯೆಗಳು ಕಾಡತೊಡಗುತ್ತವೆ.

1 / 6
ವಿಶ್ವದಾದ್ಯಂತ ಅತಿ ಹೆಚ್ಚು ಜನರು ಸೇವಿಸುವ ಅನ್ನ ಕೂಡ ಅತಿಯಾದರೆ ಆರೋಗ್ಯಕ್ಕೆ ಅಹಿತ ಎಂದಿದ್ದಾರೆ ತಜ್ಞರು. ನಾವು ಸೇವಿಸುವ ಆಹಾರದಲ್ಲಿ ಸಾಕಷ್ಟು ನಾರಿನಂಶ ಇರಬೇಕು. ಇಲ್ಲದಿದ್ದರೆ ಮಲಬದ್ಧತೆಯಂಥ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಹೀಗಾಗಿ ಮೂರೂ ಹೊತ್ತು ಅನ್ನವನ್ನೇ ಉಣ್ಣುವುದು ಅಷ್ಟು ಒಳ್ಳೆಯದಲ್ಲ ಎಂಬುದು ತಜ್ಞರ ಅಭಿಪ್ರಾಯ.

2 / 6
ದೇಹವು ಸಾಕಷ್ಟು ಫೈಬರ್ ಅನ್ನು ಪಡೆಯದಿದ್ದರೆ ಮಲಬದ್ಧತೆ ಸಂಭವಿಸಬಹುದು. ದ್ವಿದಳ ಧಾನ್ಯಗಳು, ತರಕಾರಿಗಳು, ಗೋಧಿ, ಬೇಳೆ ಮತ್ತು ರಾಗಿಗಳನ್ನು ಊಟದಲ್ಲಿ ಸೇರಿಸಬೇಕು. ಇವೆಲ್ಲವೂ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಬಿಳಿ ಅಕ್ಕಿಯಲ್ಲಿ ನಾರಿನಂಶ ಕಡಿಮೆ ಇರುತ್ತದೆ. ಹಾಗಾಗಿ ಬಿಳಿ ಅನ್ನವನ್ನು ಕಡಿಮೆ ಸೇವಿಸಿ.

3 / 6
ಬಿಳಿ ಅಕ್ಕಿಯಲ್ಲಿ ಹೆಚ್ಚಿನ ಕ್ಯಾಲೋರಿಗಳಿವೆ. ಹೆಚ್ಚಿನ ಕ್ಯಾಲೋರಿ ಸೇವನೆಯು ಸೊಂಟದ ಸುತ್ತಲೂ ಕೊಬ್ಬಿನ ಶೇಖರಣೆಗೆ ಕಾರಣವಾಗಬಹುದು. ತೂಕ ಹೆಚ್ಚಾಗುವುದು ಮತ್ತು ರಕ್ತದಲ್ಲಿನ ಸಕ್ಕರೆಯ ಹೆಚ್ಚಳದಂತಹ ಸಮಸ್ಯೆಗಳು ಉದ್ಭವಿಸುತ್ತವೆ. ಹಾಗಾಗಿ ವೈದ್ಯರ ಸಲಹೆಯಂತೆ ಅನ್ನವನ್ನು ಸೇವಿಸುವುದು ಉತ್ತಮ.

4 / 6
ಇತರ ಧಾನ್ಯಗಳಿಗೆ ಹೋಲಿಸಿದರೆ ಬಿಳಿ ಅಕ್ಕಿಯಲ್ಲಿ ಪೋಷಕಾಂಶಗಳು ಕಡಿಮೆ. ಈ ಪೋಷಕಾಂಶಗಳ ಕೊರತೆಯು ಮೂಳೆ, ಹಲ್ಲು ಮತ್ತು ಇತರ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಅಪೌಷ್ಟಿಕತೆಯು ಇತರ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗೆಯೇ ಅನ್ನ ತಿಂದರೆ ರೋಗನಿರೋಧಕ ಶಕ್ತಿಯೂ ಕಡಿಮೆಯಾಗುತ್ತದೆ.

5 / 6
ಬಿಳಿ ಅಕ್ಕಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಮಧುಮೇಹ ಇರುವವರು ಬಿಳಿ ಅನ್ನವನ್ನು ತಿನ್ನಬಾರದು ಎಂದು ವೈದ್ಯರು ಆಗಾಗ್ಗೆ ಹೇಳುತ್ತಾರೆ.

6 / 6
ಅಕ್ಕಿಯು ಅತಿ ಹೆಚ್ಚು ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಬಿಳಿ ಅನ್ನ ತಿನ್ನುವುದರಿಂದ ಮಧುಮೇಹ ಬರಬಹುದು. ಮಧುಮೇಹಿಗಳು ಆದಷ್ಟು ಅನ್ನ ತಿನ್ನುವುದನ್ನು ತಪ್ಪಿಸಬೇಕು.

Published On - 10:31 pm, Mon, 13 November 23