ರಿಷಬ್ ಶೆಟ್ಟಿ ಕಾಲುಗಳು ಹೇಳುತ್ತಿವೆ ‘ಕಾಂತಾರ’ದ ಹಿಂದಿನ ಶ್ರಮದ ಕತೆ

Updated on: Oct 13, 2025 | 10:12 AM

Kantara: Chapter 1: ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿದೆ. ಇದೀಗ ರಿಷಬ್ ತಮ್ಮ ಕಾಲುಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ ರಿಷಬ್ ಅವರ ಕಾಲುಗಳೇ ಹೇಳುತ್ತಿವೆ ಕಾಂತಾರ ಶೂಟಿಂಗ್​​ನ ಶ್ರಮದ ಕತೆಯನ್ನು. ಚಿತ್ರಗಳ ನೋಡಿ...

1 / 7
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಬಲು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆ ಆದ 11 ದಿನಗಳಲ್ಲಿ ದಾಖಲೆ ಮೊತ್ತದ ಗಳಿಕೆ ಮಾಡಿದೆ ಸಿನಿಮಾ.

2 / 7
ರಿಷಬ್ ಶೆಟ್ಟಿ ಸತತ ಮೂರು ವರ್ಷಗಳ ಕಾಲ ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕಾಗಿ ತಮ್ಮ ತಂಡದೊಂದಿಗೆ ಅವಿರತವಾಗಿ ದುಡಿದಿದ್ದಾರೆ. ಈ ಬಗ್ಗೆ ಅವರೇ ಕೆಲವೆಡೆ ಹೇಳಿಕೊಂಡಿದ್ದಾರೆ.

3 / 7
ಇದೀಗ ರಿಷಬ್ ಶೆಟ್ಟಿ ತಮ್ಮ ಕಾಲುಗಳ ಚಿತ್ರಗಳನ್ನು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ರಿಷಬ್ ಶೆಟ್ಟಿಯವರ ಊದಿಕೊಂಡಿರುವ ಕಾಲುಗಳೇ ಹೇಳುತ್ತಿವೆ ಕಾಂತಾರದ ಹಿಂದಿರುವ ಶ್ರಮದ ಕತೆಯನ್ನು.

4 / 7
‘ಕಾಂತಾರ: ಚಾಪ್ಟರ್ 1’ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣದ ಸಮಯದಲ್ಲಿ ಕಾಲುಗಳು ಊದಿಕೊಂಡು ಇಡೀ ದೇಹವೇ ನಿತ್ರಾಣವಾಗಿತ್ತಂತೆ ರಿಷಬ್ ಶೆಟ್ಟಿಗೆ. ಆದರೂ ಬಿಡದೇ ಚಿತ್ರೀಕರಣ ಮಾಡಿದ್ದಾರೆ.

5 / 7
ಅರಣ್ಯ ಪ್ರದೇಶದಲ್ಲಿ ವಿಷಮ ಪರಿಸ್ಥಿತಿಗಳಲ್ಲಿ, ಮೇಕಪ್ ಧರಿಸಿ ಗಂಟೆ ಗಟ್ಟಲೆ ನಡೆದೇ ಶೂಟಿಂಗ್ ಸ್ಥಳ ಸೇರಬೇಕಿತ್ತಂತೆ. ಇಂಥಹಾ ನೂರಾರು ಕಷ್ಟಗಳನ್ನು ಎದುರಿಸಿ ಸಿನಿಮಾ ಮಾಡಿದ್ದಾರೆ ರಿಷಬ್.

6 / 7
ರಿಷಬ್ ಹಂಚಿಕೊಂಡಿರುವ ಚಿತ್ರಗಳಲ್ಲಿ ರಿಷಬ್ ಕಾಲುಗಳು ಕಪ್ಪೆದ್ದು ಹೋಗಿವೆ. ಬಟ್ಟೆಗಳು ಬಿಗಿಯಾಗಿ ಕಟ್ಟಿದ್ದಕ್ಕೆ ರಕ್ತಚಲನೆ ಇಲ್ಲದೆ ಚರ್ಮ ಮರಗಟ್ಟಿದಂತಾಗಿರುವುದು ಕಾಣುತ್ತಿದೆ. ಕಾಲು ಊದಿಕೊಂಡಿದೆ.

7 / 7
ರಿಷಬ್ ಅವರೇ ಹೇಳಿರುವಂತೆ ಇಷ್ಟು ಕಷ್ಟ ಪಟ್ಟು ಸಿನಿಮಾ ಮಾಡಿದ್ದಕ್ಕೆ ಇವತ್ತು ಕೋಟ್ಯಂತರ ಜನ ನೋಡಿ ಮೆಚ್ಚುವಹಾಗೆ ಆಗಿದೆ. ಇದು ನಾವು ನಂಬಿರುವ ಶಕ್ತಿಗಳ ಆಶೀರ್ವಾದದಿಂದ ಮಾತ್ರ ಸಾಧ್ಯ. ಸಿನಿಮಾ ನೋಡಿ ಅಭಿಪ್ರಾಯ ವ್ಯಕ್ತ್ಯಪಡಿಸಿದ ತಮ್ಮೆಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.