
ಆಲಿಯಾ ಭಟ್ ಅವರು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಜುಲೈ 28ರಂದು ರಿಲೀಸ್ ಆಗಲಿದೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ.

ಹಲವು ವರ್ಷಗಳ ಬಳಿಕ ಕರಣ್ ಜೋಹರ್ ಅವರು ನಿರ್ದೇಶನಕ್ಕೆ ಮರಳಿದ್ದಾರೆ. ಈ ಕಾರಣದಿಂದಲೂ ಸಿನಿಮಾ ಹೈಪ್ ಪಡೆದಿದೆ.

‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾಗೆ ಆಲಿಯಾ ಅವರು ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಮುಂಬೈನ ವಿವಿಧ ಕಡೆಗಳಲ್ಲಿ ತೆರಳಿ ಆಲಿಯಾ ಪ್ರಮೋಷನ್ ಮಾಡುತ್ತಿದ್ದಾರೆ. ಆಲಿಯಾಗೆ ರಣವೀರ್ ಕೂಡ ಜೊತೆಯಾಗಿದ್ದಾರೆ.

ಆಲಿಯಾ ಭಟ್ ತಾಯಿ ಆದರು. ಈ ಕಾರಣಕ್ಕೆ ಅವರು ಚಿತ್ರರಂಗದಿಂದ ದೂರ ಇದ್ದರು. ಆದರೆ, ಕೇವಲ ಒಂದೇ ವರ್ಷದಲ್ಲಿ ಅವರು ಸಿನಿಮಾಗೆ ಮರಳಿದ್ದಾರೆ.

ಆಲಿಯಾ ಅವರು ಗ್ಲಾಮರಸ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಗುತ್ತಿದೆ.

ನೆಪೋ ಕಿಡ್ ಎಂಬ ಕಾರಣಕ್ಕೆ ಅನೇಕರು ಆಲಿಯಾ ಭಟ್ ಅವರನ್ನು ಟೀಕೆ ಮಾಡಿದ್ದಿದೆ. ಆದರೆ, ಅವರು ತಮ್ಮ ನಟನೆ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಆಲಿಯಾ ಭಟ್ ಅಭಿಮಾನಿಗಳಿಗೆ ಡಬಲ್ ಧಮಾಕ ಇದೆ. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ರಿಲೀಸ್ ಬಳಿಕ ಆಲಿಯಾ ನಟನೆಯ ಹಾಲಿವುಡ್ ಸಿನಿಮಾ ‘ಸ್ಟೋನ್ ಆಫ್ ಹಾರ್ಟ್’ ರಿಲೀಸ್ (ಆಗಸ್ಟ್ 11) ನೆಟ್ಫ್ಲಿಕ್ಸ್ ಮೂಲಕ ರಿಲೀಸ್ ಆಗಲಿದೆ.