‘ಆರ್​ಆರ್​ಆರ್​’ ನಿರ್ದೇಶಕ ರಾಜಮೌಳಿ ಮನೆಗೆ ಬಂತು ಹೊಸ ಕಾರು; ಇದರ ಬೆಲೆ ಎಷ್ಟು?

Edited By:

Updated on: Apr 24, 2022 | 4:31 PM

ರಾಜಮೌಳಿ ಹೊಸ ಕಾರು ಖರೀದಿಸಿದ್ದಾರೆ. ಅವರು ಐಷಾರಾಮಿ ಕಾರಿನ ಕೀ ಪಡೆದುಕೊಳ್ಳುತ್ತಿರುವ ಫೋಟೋ ವೈರಲ್​ ಆಗಿದೆ.

1 / 5
ನಿರ್ದೇಶಕ ಎಸ್​ಎಸ್​ ರಾಜಮೌಳಿ ಅವರು ‘ಆರ್​ಆರ್​ಆರ್​’ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈಗ ಅವರು ಹೊಸ ಕಾರು ಖರೀದಿಸಿದ್ದಾರೆ. ಅದರ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ನಿರ್ದೇಶಕ ಎಸ್​ಎಸ್​ ರಾಜಮೌಳಿ ಅವರು ‘ಆರ್​ಆರ್​ಆರ್​’ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈಗ ಅವರು ಹೊಸ ಕಾರು ಖರೀದಿಸಿದ್ದಾರೆ. ಅದರ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.

2 / 5

ಪ್ರತಿ ಸಿನಿಮಾಗೆ ರಾಜಮೌಳಿ ಅವರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಾರೆ. ಅವರ ಬಳಿ ಈಗಾಗಲೇ ಅನೇಕ ಕಾರುಗಳಿವೆ. ಅವುಗಳ ಜೊತೆ ಈಗ volvo xc40 ಕಾರು ಕೂಡ ಸೇರ್ಪಡೆ ಆಗಿದೆ. ಇದರ ಬೆಲೆ ಸುಮಾರು 45 ಲಕ್ಷ ರೂಪಾಯಿ.

3 / 5

ಚಿತ್ರರಂಗದಲ್ಲಿ ರಾಜಮೌಳಿ ಅವರು ಸೋಲಿಲ್ಲದ ಸರದಾರ. ಈವರೆಗೂ ಅವರು ಮಾಡಿರುವ ಸಿನಿಮಾಗಳು ನಿರ್ಮಾಪಕರಿಗೆ ಭರ್ಜರಿ ಲಾಭ ತಂದುಕೊಟ್ಟಿವೆ. ಇತ್ತೀಚೆಗೆ ಅವರು ನಿರ್ದೇಶಿಸಿದ ‘ಆರ್​ಆರ್​ಆರ್​’ ಸಿನಿಮಾ ಬ್ಲಾಕ್​ ಬಸ್ಟರ್​ ಹಿಟ್​ ಆಗಿದೆ.

4 / 5

ರಾಜಮೌಳಿ ನಿರ್ದೇಶನ ಮಾಡಲಿರುವ ಮುಂದಿನ ಸಿನಿಮಾ ಬಗ್ಗೆ ಈಗಾಗಲೇ ಚರ್ಚೆ ಶುರುವಾಗಿದೆ. ಟಾಲಿವುಡ್​ ಪ್ರಿನ್ಸ್​ ಮಹೇಶ್​ ಬಾಬು ಜೊತೆ ಅವರು ಸಿನಿಮಾ ಮಾಡಲಿದ್ದಾರೆ. ಅದು ಕೂಡ ಬೃಹತ್​ ಬಜೆಟ್​ನಲ್ಲಿ ಮೂಡಿಬರಲಿದೆ.

5 / 5

ರಾಜಮೌಳಿ ಮತ್ತು ಮಹೇಶ್​ ಕಾಂಬಿನೇಷನ್​ನ ಸಿನಿಮಾಗೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್​ ಅವರು ಕಥೆ ಬರೆಯಲಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳ ವಲಯದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇದೆ.

Loading...
Unable to load recommendations.
Follow Us