Updated on: Nov 07, 2022 | 9:01 PM
ಸಾಗರದ ಶಿಲ್ಪ ಗುರುಕುಲದಲ್ಲಿ 2022-23 ಸಾಲಿನ ಮರ ಕೆತ್ತನೆ ಮತ್ತು ಕಲ್ಲು ಕೆತ್ತನೆ ತರಬೇತಿ ಕಾರ್ಯಕ್ರಮವನ್ನು ನಿನ್ನೆ (ನ.06) ಎಂಎಲ್ಎ ಹರತಾಳು ಹಾಲಪ್ಪ ಉದ್ಘಾಟನೆ ಮಾಡಿದರು.
ಕರ್ನಾಟಕದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಬಂದಿದ್ದು, ಮೊಟ್ಟ ಮೊದಲ ಬಾರಿಗೆ ಇಬ್ಬರು ದಿವ್ಯ ಚೇತನರನ್ನು ತರಬೇತಿಗೆ ದಾಖಲು ಮಾಡಿಕೊಳ್ಳಲಾಗಿದೆ.
ಕರಕುಶಲ ನಿಗಮದ ಒಟ್ಟು 20 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ತರಬೇತಿ, ಊಟ, ವಸತಿ, ಸಲಕರಣೆಗಳು, ಶೈಕ್ಷಣಿಕ ಪ್ರವಾಸ ಎಲ್ಲವೂ ಉಚಿತವಿದ್ದು, ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ಜಾಹೀರಾತಿನ ಮೂಲಕ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಐಪಿಎಸ್ ಡಿ. ರೂಪಾ ಅವರಿಗೆ ವಿಶೇಷ ಬಹುಮಾನ ನೀಡಲಾಯಿತು.
ಕರ್ನಾಟಕ ಕರಕುಶಲ ನಿಗಮದ ಅಧ್ಯಕ್ಷ ಮಾರುತಿ ಅಷ್ಟಗಿ, ವ್ಯವಸ್ಥಾಪಕ ನಿರ್ದೇಶಕಿ ಡಿ. ರೂಪಾ, ಕೈಗಾರಿಕಾ ಇಲಾಖೆಯ ಜಂಟಿ ಹಾಗೂ ಉಪ ನಿರ್ದೇಶಕರು, ಕೌನ್ಸಿಲರ್ ಶಂಕರ್ ಉಪಸ್ಥಿತರಿದ್ದರು.
Published On - 8:59 pm, Mon, 7 November 22