ಸಾಯಿ ಪಲ್ಲವಿ ದಕ್ಷಿಣ ಭಾರತದ ಜನಪ್ರಿಯ ನಟಿ. ಆನ್ ಸ್ಕ್ರೀನ್ ಹಾಗೂ ಆಫ್ಸ್ಕ್ರೀನ್ನಲ್ಲಿ ಸಾಯಿ ಪಲ್ಲವಿ ತೋರುವ ಸರಳತೆಗೆ ದೊಡ್ಡ ಅಭಿಮಾನಿ ವರ್ಗವೇ ಇದೆ.
ಅತ್ಯುತ್ತಮ ನೃತ್ಯಗಾರ್ತಿ, ಅತ್ಯುತ್ತಮ ನಟಿಯೂ ಆಗಿರುವ ಸಾಯಿ ಪಲ್ಲವಿ, ಇತ್ತೀಚೆಗೆ ಸಿನಿಮಾ ಆಯ್ಕೆ ವಿಷಯದಲ್ಲಿ ತುಸು ಹೆಚ್ಚು ಜಾಗರೂಕರಾಗಿದ್ದರು.
ಸಾಯಿ ಪಲ್ಲವಿಗೆ ಒಂದರ ಹಿಂದೊಂದು ದೊಡ್ಡ ದೊಡ್ಡ ಸಿನಿಮಾಗಳ ಅವಕಾಶಗಳು ಬಂದರೂ ಸಹ ಯಾವೊಂದನ್ನೂ ಸಹ ಸಾಯಿ ಪಲ್ಲವಿ ಒಪ್ಪಿಕೊಂಡಿರಲಿಲ್ಲ. ಅದಕ್ಕೆ ಕಾರಣವೂ ಇತ್ತು.
ದೊಡ್ಡ ನಟ, ನಿರ್ಮಾಣ ಸಂಸ್ಥೆ ಎಂಬ ಕಾರಣಕ್ಕೆ ಸಿನಿಮಾದಲ್ಲಿ ನಟಿಸುವ ಬದಲಿಗೆ ಸಂದೇಶವುಳ್ಳ, ಮಹಿಳಾ ಪ್ರಧಾನ, ಕತೆಗೆ ಹೆಚ್ಚು ಸ್ಕೋಪ್ ಇರುವ ಸಿನಿಮಾಗಳಲ್ಲಿ ಮಾತ್ರವೇ ನಟಿಸುವ ನಿರ್ಧಾರ ತಳೆದಿದ್ದರು.
ಆದರೆ ಈಗ ಸಾಯಿ ಪಲ್ಲವಿ ತಮ್ಮ ನಿರ್ಧಾರವನ್ನು ತುಸು ಸಡಿಲಿಸಿದಂತಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ನಟನ ಸಿನಿಮಾದಲ್ಲಿ ನಟಿಸಲು ಸಾಯಿ ಪಲ್ಲವಿ ಒಪ್ಪಿಕೊಂಡಿದ್ದಾರೆ.
ಕತೆಯಲ್ಲಿ ನಾಯಕಿ ಪಾತ್ರಕ್ಕೆ ಹೆಚ್ಚು ಒತ್ತು ಇರುವ ಕಾರಣದಿಂದಲೇ ಸಾಯಿ ಪಲ್ಲವಿ ಸ್ಟಾರ್ ನಟನ ಸಿನಿಮಾದಲ್ಲಿ ನಾಯಕಿಯಾಗಲು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಸಾಯಿ ಪಲ್ಲವಿ ಪ್ರಸ್ತುತ ಕಮಲ್ ಹಾಸನ್ ನಿರ್ಮಾಣದ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ಕತೆಯನ್ನು ಸಹ ಕಮಲ್ ಹಾಸನ್ ಅವರೇ ಬರೆದಿದ್ದಾರೆ.