
ಸೈರಾಟ್ ಸಿನಿಮಾದ ನಾಯಕಿ ರಿಂಕು ರಾಜ್ಗುರು ಈಗ ಹೀಗಾಗಿದ್ದಾರೆ. ತೂಕ ಇಳಿಸಿಕೊಂಡು ಬಾಲಿವುಡ್ ನಟಿಯಂತೆ ಸಪೂರವಾಗಿದ್ದಾರೆ.

ನಟಿಸಿದ ಮೊದಲ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಪಡೆದುಕೊಂಡ ನಟಿ ರಿಂಕು. ನಾಯಕಿ ಪಾತ್ರಕ್ಕೆ ರಾಷ್ಟ್ರಪ್ರಶಸ್ತಿ (ತೀರ್ಪುಗಾರರ ವಿಶೇಷ ಪ್ರಶಸ್ತಿ) ಪಡೆದ ಕಡಿಮೆ ವಯಸ್ಸಿನ ನಟಿಯೂ ಹೌದು ರಿಂಕು.

9ನೇ ತರಗತಿಯಲ್ಲಿದ್ದಾಗಲೇ ಸೈರಾಟ್ ಸಿನಿಮಾಕ್ಕೆ ನಾಯಕಿಯಾಗಿ ನಟಿಸಿದ್ದರು ರಿಂಕು ರಾಜ್ಗುರು ಆ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು.

ಸೈರಾಟ್ ಸಿನಿಮಾದಿಂದ ಭಾರಿ ದೊಡ್ಡ ಜನಪ್ರಿಯತೆಗಳಿಸಿದ ರಿಂಕು ಆ ಬಳಿಕ ಅದೇ ಸಿನಿಮಾದ ಕನ್ನಡ ರೀಮೇಕ್ ಆದ ಮನಸ್ಸು ಮಲ್ಲಿಗೆಯಲ್ಲಿ ನಟಿಸಿದರು.

ಇದೀಗ ಸಾಲು-ಸಾಲು ಮರಾಠಿ ಹಾಗೂ ಹಿಂದಿ ಸಿನಿಮಾಗಳಲ್ಲಿ ರಿಂಕು ರಾಜ್ಗುರು ನಟಿಸುತ್ತಿದ್ದಾರೆ. ಇನ್ಸ್ಟಾಗ್ರಾಂನಲ್ಲಿಯೂ ಸಕ್ರಿಯವಾಗಿರುವ ರಿಂಕು ತಮ್ಮ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರ.