25 ವರ್ಷಗಳ ಬಳಿಕ ಸಿಕ್ಕ ತಾಯಿ, ಏರ್ಪೋರ್ಟ್ನಲ್ಲಿ ಬಿಗಿದಪ್ಪಿ ಕಣ್ಣೀರಿಟ್ಟ ಮಕ್ಕಳು
ಸುಮಾರು 25 ವರ್ಷಗಳಿಂದ ಡಣನಾಯಕಕೆರೆಯಿಂದ ರೈಲು ಹತ್ತಿ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ವೃದ್ದಾಶ್ರಮ ಸೇರಿದ ಸಾಕಮ್ಮನ ಕಥೆಯ ಯಾವ ಸಿನಿಮೀಯಾ ಕಥೆಗಿಂತ ಕಡಿಮೆ ಇಲ್ಲ. ಸಾಕಮ್ಮಳು ಕೆಂಚ್ಚಿನ ಬಂಡಿ ಗ್ರಾಮದ ನಾಗೇಶ್ ಎನ್ನುವವರನ್ನು ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ರು. ಇವರಿಗೆ ಮೂವರು ಮಕ್ಕಳು ಕೂಡ ಇದ್ದರು. ಆದರೆ ಮಾನಸಿಕ ಅಸ್ವಸ್ತರಾಗಿದ್ದ ಸಾಕಮ್ಮ ರೈಲು ಹತ್ತಿ ಹಿಮಾಚಲ ಪ್ರದೇಶದ ಮಂಡಿಗೆ ಹೋಗಿದ್ದರು. ಅಲ್ಲಿ ಒಂದು ವೃದ್ದಾಶ್ರಮದಲ್ಲಿ ಆಶ್ರಯ ಪಡೆದಿದ್ದರು. ಆದರೆ ಸಾಕಮ್ಮ ಸತ್ತಿದ್ದಾಳೆ ಎಂದು ಆಕೆಯ ಮಕ್ಕಳು ತಿಥಿ ಕಾರ್ಯ ಮಾಡಿ ಮುಗಿಸಿದ್ದರು. ಆದ್ರೆ, ಇದೀಗ ಅಚ್ಚರಿ ಎಂಬಂತೆ ಬರೋಬ್ಬರಿ 25 ವರ್ಷಗಳ ಬಳಿಕ ಸಾಕಮ್ಮ ಪತ್ತೆಯಾಗಿದ್ದು, ಇಂದು (ಡಿಸೆಂಬರ್ 24) ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾಳೆ. ಇನ್ನು ಸಾಕಮ್ಮ ಪತ್ತೆ ಹೇಗಾಯ್ತು ಎನ್ನುವ ರೋಚಕ ಕಥೆ ಇಲ್ಲಿದೆ ನೋಡಿ.