Samantha Ruth Prabhu: ಐಸ್​ನಲ್ಲಿ ಮುಳುಗಿ ಕುಳಿತ ಸಮಂತಾ; ನಟಿಗೆ ಸಖತ್ ಟಾರ್ಚರ್

Updated on: May 03, 2023 | 6:37 AM

ಸಮಂತಾ ಮತ್ತೆ ಆ್ಯಕ್ಷನ್​ಗೆ ಇಳಿದಿದ್ದಾರೆ. ಈ ವೇಳೆ ನೋವು ಕಾಣಿಸಿಕೊಳ್ಳಬಹುದು ಎನ್ನುವ ಕಾರಣಕ್ಕೆ ಥೆರಪಿಗೆ ಒಳಗಾಗಿದ್ದಾರೆ.

1 / 5
ನಟಿ ಸಮಂತಾ ಅವರು ಆ್ಯಕ್ಷನ್​ ಮೋಡ್​ಗೆ ಮರಳಿದ್ದಾರೆ. ‘ಸಿಟಾಡೆಲ್​’ ಇಂಡಿಯನ್ ವರ್ಷನ್​ನಲ್ಲಿ ಅವರು ನಟಿಸುತ್ತಿದ್ದಾರೆ. ಈ ವೆಬ್ ಸೀರಿಸ್​ಗೆ ರಾಜ್ ಮತ್ತು ಡಿಕೆ ನಿರ್ದೇಶನ ಇದೆ.

ನಟಿ ಸಮಂತಾ ಅವರು ಆ್ಯಕ್ಷನ್​ ಮೋಡ್​ಗೆ ಮರಳಿದ್ದಾರೆ. ‘ಸಿಟಾಡೆಲ್​’ ಇಂಡಿಯನ್ ವರ್ಷನ್​ನಲ್ಲಿ ಅವರು ನಟಿಸುತ್ತಿದ್ದಾರೆ. ಈ ವೆಬ್ ಸೀರಿಸ್​ಗೆ ರಾಜ್ ಮತ್ತು ಡಿಕೆ ನಿರ್ದೇಶನ ಇದೆ.

2 / 5

ಈ ವೆಬ್​ ಸೀರಿಸ್​ನಲ್ಲಿ ಸಾಕಷ್ಟು ಆ್ಯಕ್ಷನ್ ಇರಲಿದೆ. ಈ ವಿಚಾರವನ್ನು ನಟಿ ಸಮಂತಾ ಈ ಮೊದಲೇ ರಿವೀಲ್ ಮಾಡಿದ್ದರು. ಈಗ ಆ್ಯಕ್ಷನ್ ಸರಣಿ​ಗಾಗಿ ಅವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

3 / 5

ಸಮಂತಾ ಅವರಿಗೆ ಸ್ನಾಯುವಿನಲ್ಲಿ ನೋವು ಕಾಣಿಸಿಕೊಂಡಿತ್ತು. ಇದರಿಂದ ಅವರು ಚೇತರಿಕೆ ಕಂಡಿದ್ದಾರೆ. ಈಗ ಅವರು ಮತ್ತೆ ಆ್ಯಕ್ಷನ್​ಗೆ ಇಳಿದಿದ್ದಾರೆ. ಈ ವೇಳೆ ನೋವು ಕಾಣಿಸಿಕೊಳ್ಳಬಹುದು ಎನ್ನುವ ಕಾರಣಕ್ಕೆ ಥೆರಪಿಗೆ ಒಳಗಾಗಿದ್ದಾರೆ.

4 / 5

ದೊಡ್ಡ ಟಬ್ ಒಳಗೆ ಐಸ್​​ಗಳನ್ನು ಇಡಲಾಗಿದೆ. ಇದರ ಒಳಗೆ ಸಮಂತಾ ಕುಳಿತಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ‘ಟಾರ್ಚರ್ ಸಮಯ’ ಎಂದು ಅವರು ಬರೆದುಕೊಂಡಿದ್ದಾರೆ.

5 / 5

ಸಮಂತಾ ಅವರು ‘ದಿ ಫ್ಯಾಮಿಲಿ ಮ್ಯಾನ್ 2’ ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್ ಮೆರೆದಿದ್ದರು. ಈಗ ಹೊಸ ವೆಬ್​ ಸೀರಿಸ್​ನಲ್ಲೂ ಆ್ಯಕ್ಷನ್ ಇರಲಿದೆ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us