Samsung: 576 ಮೆಗಾಪಿಕ್ಸೆಲ್ ಕ್ಯಾಮೆರಾ ಸ್ಮಾರ್ಟ್ಫೋನ್ ಪರಿಚಯಿಸಲಿದೆ ಸ್ಯಾಮ್‌ಸಂಗ್
TV9 Web | Updated By: ಝಾಹಿರ್ ಯೂಸುಫ್
Updated on:
Sep 09, 2021 | 9:03 PM
ಈ ತಂತ್ರಜ್ಞಾನ ಹೇಗೆ ಕೆಲಸ ಮಾಡಲಿದೆ: 200MP ISOCELL HP1 ಕ್ಯಾಮೆರಾದಲ್ಲಿ ಬಳಸಿರುವ ಪಿಕ್ಸೆಲ್ ಬಿನ್ನಿಂಗ್ ತಂತ್ರಜ್ಞಾನದ ಬಗ್ಗೆ ಹೇಳುವುದಾದರೆ, ಇದಲರಲ್ಲಿ 200MP 0.64μm- ಗಾತ್ರದ ಪಿಕ್ಸೆಲ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಸೆಲ್ ಪಿಕ್ಸೆಲ್-ಬಿನ್ನಿಂಗ್ ತಂತ್ರಜ್ಞಾನವನ್ನು ಬಳಸಲಾಗಿದ್ದು, ಇದು ಬೆಳಕಿನ ಸನ್ನಿವೇಶಗಳನ್ನು ಅವಲಂಬಿಸಿ, ತೀಕ್ಷ್ಣವಾದ ಚಿತ್ರಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ. ಸನ್ನಿವೇಶವನ್ನು ಅವಲಂಬಿಸಿ, ಸ್ಯಾಮ್‌ಸಂಗ್ ಐಸೊಸೆಲ್ ಎಚ್‌ಪಿ 1 200MP ಸೆನ್ಸಾರ್ ಕಡಿಮೆ ಬೆಳಕಿನ ಪರಿಸ್ಥಿತಿಯಲ್ಲಿ 200 ಎಂಪಿ ಸೆನ್ಸಾರ್, 50 ಎಂಪಿ ಸೆನ್ಸರ್ ಮತ್ತು 12.5 ಎಂಪಿ ಸೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ.
1 / 5
ಸ್ಯಾಮ್‌ಸಂಗ್ ಕಂಪೆನಿಯು ಇತ್ತೀಚೆಗೆ 200 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್ (ISOCELL HP1) ಅನ್ನು ಪರಿಚಯಿಸಿತು. ಈ ಮೂಲಕ ವಿಶ್ವದ ಅತ್ಯುತ್ತಮ ಕ್ಯಾಮೆರಾ ಸೆನ್ಸಾರ್ ಹೊಂದಿರುವ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. ಇದೀಗ ಅದನ್ನೇ ಮಿರಿಸುವ ಮತ್ತೊಂದು ಕ್ಯಾಮೆರಾ ಅನ್ನು ಪರಿಚಯಿಸಲು ಸ್ಯಾಮ್‌ಸಂಗ್ ಮುಂದಾಗಿದೆ.
2 / 5
ಹೌದು, ಸ್ಯಾಮ್‌ಸಂಗ್ 576 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್ ಪರಿಚಯಿಸುವುದಾಗಿ ಘೋಷಿಸಿದೆ. ಈ ತಂತ್ರಜ್ಞಾನದ ಕೆಲಸವನ್ನು ಈಗಾಗಲೇ ಆರಂಭಿಸಿರುವುದಾಗಿ ತಿಳಿಸಿದೆ.
3 / 5
ಅನೇಕ ಮೊಬೈಲ್ ಬ್ರಾಂಡ್‌ಗಳು ಈಗಾಗಲೇ 108 ಮೆಗಾಪಿಕ್ಸೆಲ್ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿವೆ. ಇದಕ್ಕಾಗಿ, ಈ ಕಂಪನಿಗಳು ಪಿಕ್ಸೆಲ್ ಬಿನ್ನಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡಿವೆ. ಸ್ಯಾಮ್‌ಸಂಗ್ ಈ ತಂತ್ರಜ್ಞಾನವನ್ನು ISOCELL HP1 ಗಾಗಿ ಸುಧಾರಿಸಿದೆ. ಅಷ್ಟೇ ಅಲ್ಲದೆ ಅದಕ್ಕೆ ChameleonCel ಎಂದು ಹೆಸರಿಟ್ಟಿದೆ. 2021ರ SEMI ಯುರೋಪ್ ಶೃಂಗಸಭೆಯಲ್ಲಿ ಮಾತನಾಡಿದ ಸ್ಯಾಮ್‌ಸಂಗ್‌ನ SVP ಮತ್ತು ಆಟೋಮೇಟಿವ್ ಸೆನ್ಸಾರ್‌ಗಳ ಮುಖ್ಯಸ್ಥ ಹೆಚಾಂಗ್ ಲಿ, ಸ್ಯಾಮ್‌ಸಂಗ್ ಮುಂದಿನ ದಿನಗಳಲ್ಲಿ 576 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
4 / 5
ಈ ತಂತ್ರಜ್ಞಾನ ಹೇಗೆ ಕೆಲಸ ಮಾಡಲಿದೆ: 200MP ISOCELL HP1 ಕ್ಯಾಮೆರಾದಲ್ಲಿ ಬಳಸಿರುವ ಪಿಕ್ಸೆಲ್ ಬಿನ್ನಿಂಗ್ ತಂತ್ರಜ್ಞಾನದ ಬಗ್ಗೆ ಹೇಳುವುದಾದರೆ, ಇದಲರಲ್ಲಿ 200MP 0.64μm- ಗಾತ್ರದ ಪಿಕ್ಸೆಲ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಸೆಲ್ ಪಿಕ್ಸೆಲ್-ಬಿನ್ನಿಂಗ್ ತಂತ್ರಜ್ಞಾನವನ್ನು ಬಳಸಲಾಗಿದ್ದು, ಇದು ಬೆಳಕಿನ ಸನ್ನಿವೇಶಗಳನ್ನು ಅವಲಂಬಿಸಿ, ತೀಕ್ಷ್ಣವಾದ ಚಿತ್ರಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ. ಸನ್ನಿವೇಶವನ್ನು ಅವಲಂಬಿಸಿ, ಸ್ಯಾಮ್‌ಸಂಗ್ ಐಸೊಸೆಲ್ ಎಚ್‌ಪಿ 1 200MP ಸೆನ್ಸಾರ್ ಕಡಿಮೆ ಬೆಳಕಿನ ಪರಿಸ್ಥಿತಿಯಲ್ಲಿ 200 ಎಂಪಿ ಸೆನ್ಸಾರ್, 50 ಎಂಪಿ ಸೆನ್ಸರ್ ಮತ್ತು 12.5 ಎಂಪಿ ಸೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ.
5 / 5
ವೀಡಿಯೊಗಳ ವಿಷಯಕ್ಕೆ ಬಂದರೆ, ಈ ಕ್ಯಾಮೆರಾ ಪ್ರಕಾಶಮಾನವಾದ ಬೆಳಕಿನಲ್ಲಿ ಹಾಗೂ ಕಡಿಮೆ ಬೆಳಕಿನ ಸ್ಥಿತಿಯಲ್ಲಿ ಛಾಯಾಗ್ರಹಣಕ್ಕೆ ಸೂಕ್ತವಾಗಿರುತ್ತದೆ. ISOCELL HP1 ಸೆಕೆಂಡಿಗೆ 30 ಫ್ರೇಮ್‌ಗಳಲ್ಲಿ 8K ವೀಡಿಯೋವನ್ನು ಸೆರೆಹಿಡಿಯಬಹುದು. HP1 ಸೆನ್ಸಾರ್ ರೆಸಲ್ಯೂಶನ್ ಅನ್ನು 50MP ಅಥವಾ 8,192 x 6,144p ಗೆ ಇಳಿಸಲು ಇದು ನಾಲ್ಕು ಪಿಕ್ಸೆಲ್‌ಗಳನ್ನು ಒಂದೇ ಪಿಕ್ಸೆಲ್‌ಗೆ ವಿಲೀನಗೊಳಿಸುತ್ತದೆ. ಇದರಿಂದ, ಯಾವುದೇ ಸೆನ್ಸಾರ್ ಕ್ರಾಪಿಂಗ್ ಇಲ್ಲದೆ ಸ್ಥಳೀಯ 8K ವಿಡಿಯೋಗಳನ್ನು (7,680 x 4,320p) ಚಿತ್ರೀಕರಿಸಬಹುದು. ಇದೀಗ ಇದನ್ನೂ ಮೀರಿಸುವ 576 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್ ಪರಿಚಯಿಸುವುದಾಗಿ ಸ್ಯಾಮ್‌ಸಂಗ್ ಘೋಷಿಸಿದೆ.