
ಸ್ಯಾಂಡಲ್ವುಡ್ನ ತಾರೆ ಅಮೂಲ್ಯ ಮಾರ್ಚ್ 1ರಂದು ತಾಯಿಯಾಗಿದ್ದಾರೆ. ಅವರ ಪತಿ ಜಗದೀಶ್ ಇನ್ಸ್ಟಾಗ್ರಾಂ ಮೂಲಕ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

2017ರಲ್ಲಿ ಅಮೂಲ್ಯ ಹಾಗೂ ಜಗದೀಶ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಅಮೂಲ್ಯ ಹಾಗೂ ಜಗದೀಶ್ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿದ್ದಾರೆ.

ಕುಟುಂಬದೊಂದಿಗೆ ಕಳೆದ ಸುಂದರ ಕ್ಷಣಗಳನ್ನು ಈರ್ವರೂ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಪೋಷಕರಾಗುತ್ತಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲೇ ಘೋಷಿಸಿದ್ದರು ಅಮೂಲ್ಯ ಹಾಗೂ ಜಗದೀಶ್.

ಮಂಗಳವಾರದಂದು ಅವಳಿ ಗಂಡು ಮಕ್ಕಳ ಆಗಮನವನ್ನು ಜಗದೀಶ್ ಘೋಷಿಸಿದ್ದಾರೆ. ಸ್ಯಾಂಡಲ್ವುಡ್ನ ಖ್ಯಾತ ತಾರೆಯರೂ ಸೇರಿದಂತೆ ಅಭಿಮಾನಿಗಳು ಈರ್ವರಿಗೂ ಶುಭಕೋರಿದ್ದಾರೆ.

ತಾಯಿ-ಮಗು ಆರೋಗ್ಯವಾಗಿದೆ ಎಂದು ಜಗದೀಶ್ ಮಾಹಿತಿ ನೀಡಿದ್ದಾರೆ.