Sania Mirza Retirement: 6 ಗ್ರ್ಯಾಂಡ್ ಸ್ಲಾಮ್‌, 43 ಪ್ರಶಸ್ತಿಗಳು, ನಂ.1 ಕಿರೀಟ! ಟೆನಿಸ್​ನಲ್ಲಿ ಸಾನಿಯಾ ಮಿರ್ಜಾ ಸಾಧನೆ ಹೀಗಿತ್ತು

|

Updated on: Feb 22, 2023 | 10:16 AM

Sania Mirza Retirement: ದುಬೈ ಟೆನಿಸ್ ಚಾಂಪಿಯನ್‌ಶಿಪ್‌ ಬಳಿಕ ನಿವೃತ್ತಿಯಾಗುವುದಾಗಿ ಸಾನಿಯಾ ಟೂರ್ನಿಗೂ ಮುನ್ನವೇ ಹೇಳಿದ್ದರು. ದುಃಖಕರವೆಂದರೆ, ಸಾನಿಯಾ ಅವರ ಅದ್ಭುತ ವೃತ್ತಿಜೀವನವು ಸೋಲಿನೊಂದಿಗೆ ಕೊನೆಗೊಂಡಿತು.

1 / 7
ಭಾರತದ ಸ್ಟಾರ್ ಮಹಿಳಾ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ 20 ವರ್ಷಗಳ ವೃತ್ತಿಪರ ವೃತ್ತಿಜೀವನ ಮಂಗಳವಾರ ಅಂತ್ಯಗೊಂಡಿದೆ. ದುಬೈ ಟೆನಿಸ್ ಚಾಂಪಿಯನ್‌ಶಿಪ್‌ನ ಮಹಿಳೆಯರ ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಸಾನಿಯಾ ಸೋಲನ್ನು ಎದುರಿಸಬೇಕಾಯಿತು. ಇದರೊಂದಿಗೆ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.

2 / 7
ದುಬೈ ಟೆನಿಸ್ ಚಾಂಪಿಯನ್‌ಶಿಪ್‌ ಬಳಿಕ ನಿವೃತ್ತಿಯಾಗುವುದಾಗಿ ಸಾನಿಯಾ ಟೂರ್ನಿಗೂ ಮುನ್ನವೇ ಹೇಳಿದ್ದರು. ದುಃಖಕರವೆಂದರೆ, ಸಾನಿಯಾ ಅವರ ಅದ್ಭುತ ವೃತ್ತಿಜೀವನವು ಸೋಲಿನೊಂದಿಗೆ ಕೊನೆಗೊಂಡಿತು.

3 / 7
ಭಾರತದ ಮಹಿಳಾ ಕ್ರೀಡಾ ಪಟುಗಳಿಗೆ ಮಾದರಿಯಾಗಿರುವ ಸಾನಿಯಾ, 2003 ರ ವಿಂಬಲ್ಡನ್ ಚಾಂಪಿಯನ್‌ಶಿಪ್‌ನಲ್ಲಿ ಬಾಲಕಿಯರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಾಗ ಎಲ್ಲರ ಗಮನ ಸೆಳೆದರು. ಅಂದಿನಿಂದ ಸಾನಿಯಾ ಭಾರತೀಯ ಟೆನಿಸ್ ಅನ್ನು ಉತ್ತುಂಗಕ್ಕೇರಿಸಿದರು.

4 / 7
ಸಾನಿಯಾ ತಮ್ಮ ವೃತ್ತಿಜೀವನದಲ್ಲಿ ಆರು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಮತ್ತು ಗ್ರ್ಯಾಂಡ್ ಸ್ಲಾಮ್ ಡಬಲ್ಸ್‌ ಕೂಡ ಗೆದ್ದಿದ್ದಾರೆ. 2009 ರಲ್ಲಿ ದೇಶದ ಇನ್ನೊಬ್ಬ ಅತ್ಯುತ್ತಮ ಪುರುಷ ಆಟಗಾರ ಮಹೇಶ್ ಭೂಪತಿ ಅವರೊಂದಿಗೆ ತಮ್ಮ ಮೊದಲ ಗ್ರ್ಯಾಂಡ್ ಸ್ಲಾಮ್ ಗೆದ್ದರು. ಬಳಿಕ ಇವರಿಬ್ಬರೂ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿ ಕೂಡ ಗೆದ್ದಿದ್ದರು.

5 / 7
ಇದರ ನಂತರ, 2012 ರಲ್ಲಿ ತಮ್ಮ ಮುಂದಿನ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ಸಾನಿಯಾ, ಈ ಬಾರಿಯೂ ಅವರಿಗೆ ಮಹೇಶ್ ಭೂಪತಿ ಸಾಥ್ ನೀಡಿದರು. ಈ ಜೋಡಿ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಬಳಿಕ 2014ರಲ್ಲಿ ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ, ಬ್ರೂನೋ ಸೋರೆಸ್ ಜೊತೆಗೂಡಿ ಯುಎಸ್ ಓಪನ್ ಪ್ರಶಸ್ತಿಯನ್ನು ಗೆದ್ದರು.

6 / 7
ಸಾನಿಯಾ ಹಾಗೂ ಮಾರ್ಟಿನಾ ಹಿಂಗಿಸ್ ಜೋಡಿ ಮಹಿಳಾ ಡಬಲ್ಸ್‌ನಲ್ಲಿ ಮೂರು ಬಾರಿ ಗ್ರ್ಯಾಂಡ್ ಸ್ಲಾಮ್ ಟ್ರೋಫಿ ಎತ್ತಿ ಹಿಡಿದ ಸಾಧನೆ ಕೂಡ ಮಾಡಿದೆ. ಮಾರ್ಟಿನಾ ಹಿಂಗಿಸ್ ಅವರೊಂದಿಗೆ ಸಾನಿಯಾ ವಿಂಬಲ್ಡನ್, ಯುಎಸ್ ಓಪನ್ ಮತ್ತು ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

7 / 7
ಅಲ್ಲದೆ ಈ ಜೋಡಿಯು ಮಹಿಳಾ ಡಬಲ್ಸ್‌ನಲ್ಲಿ ಸತತ 41 ಪಂದ್ಯಗಳನ್ನು ಗೆದ್ದಿದೆ, ಇದು ಈ ವಿಭಾಗದಲ್ಲಿ ಹೆಚ್ಚು ಸತತ ಪಂದ್ಯಗಳನ್ನು ಗೆದ್ದ ವಿಷಯದಲ್ಲಿ ಎರಡನೇ ಸ್ಥಾನದಲ್ಲಿದೆ. ಹಾಗೆಯೇ ಈ ಜೋಡಿ WTA ಶ್ರೇಯಾಂಕದಲ್ಲಿ ನಂಬರ್-1 ಸ್ಥಾನ ಕೂಡ ಗಿಟ್ಟಿಸಿಕೊಂಡಿತ್ತು.

Published On - 10:15 am, Wed, 22 February 23