ಸಪ್ತ ಸಾಗರದಾಚೆ ಎಲ್ಲೋ ಸಿನಿಮಾವನ್ನು ಚಿತ್ರಗಳಲ್ಲಿ ಹೇಳುವುದಾದರೆ

Updated on: Feb 04, 2024 | 11:12 PM

Sapta Sagaradache Ello: ರಕ್ಷಿತ್ ಶೆಟ್ಟಿ ನಟಿಸಿ, ಹೇಮಂತ್ ರಾವ್ ನಿರ್ದೇಶನ ಮಾಡಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಕೆಲವು ಸುಂದರ ಚಿತ್ರಗಳು ಇಲ್ಲಿವೆ.

1 / 7
ಹೇಮಂತ್ ರಾವ್ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಕನ್ನಡದ ಇತ್ತೀಚೆಗಿನ ಮಾಸ್ಟರ್​ಪೀಸ್​ಗಳಲ್ಲಿ ಒಂದೆಂದು ಪರಿಗಣಿತವಾಗಿದೆ.

ಹೇಮಂತ್ ರಾವ್ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಕನ್ನಡದ ಇತ್ತೀಚೆಗಿನ ಮಾಸ್ಟರ್​ಪೀಸ್​ಗಳಲ್ಲಿ ಒಂದೆಂದು ಪರಿಗಣಿತವಾಗಿದೆ.

2 / 7

ಸಿನಿಮಾದ ಕತೆಯ ಜೊತೆಗೆ ಹೇಮಂತ್ ರಾವ್ ಶಬ್ದ, ಬಣ್ಣ ಹಾಗೂ ರೂಪಕಗಳನ್ನು ಬಳಸಿರುವ ರೀತಿಗೆ ಸಿನಿಮಾ ಪ್ರೇಮಿಗಳು ಫಿದಾ ಆಗಿದ್ದಾರೆ.

3 / 7

ತನ್ನ ಪ್ರೇಯಸಿಯನ್ನು ಆಕೆಯ ಪತಿಯೊಟ್ಟಿಗೆ ಸುಖದಿಂದಿರುವುದು ಕಂಡು ಖುಷಿ ಪಡುವ ಈ ದೃಶ್ಯ ಅದ್ಭುತವಾಗಿದೆ.

4 / 7

ಒಂದನ್ನೊಂದು ಬಿಟ್ಟಿರದಿದ್ದ ಕೈಗಳು ಮತ್ತೆ ಸೇರಲು ಅಳುಕಿ ಹಿಂಜರಿಯುವ ಈ ದೃಶ್ಯ, ಹೇಮಂತ್ ರಾವ್​ರ ಪ್ರತಿಭೆಗೆ ಹಿಡಿದ ಕನ್ನಡಿ.

5 / 7

ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಗಿಂತಲೂ ಬಿ ನಲ್ಲಿ ಬಣ್ಣದ ಬಳಕೆ ರೂಪಕಗಳ ಬಳಕೆ ಹೆಚ್ಚು ಎನಿಸುತ್ತದೆ.

6 / 7

ಸುರಭಿಯನ್ನು ಮೊದಲ ಬಾರಿ ಭೇಟಿಯಾಗಿ ಆಕೆಯ ಕೈಲಿ ಮನು ಹಾಡಿಸಿದಾಗ ಪಕ್ಕದಲ್ಲಿದ್ದ ಕನ್ನಡಿಯಲ್ಲಿ ಪ್ರಿಯಾಳ ಬಿಂಬ ಮೂಡಿರುತ್ತದೆ ಗಮನಿಸಿದಿರಾ?

7 / 7

‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿಯ ಅತ್ಯುತ್ತಮ ದೃಶ್ಯಗಳಲ್ಲಿ ಇದು ಸಹ ಒಂದು. ಒಡೆದ ಕನ್ನಡಿಯಲ್ಲಿ ಎರಡು ಬಿಂಬ.

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us