‘ಮಹಾನಟಿ’ ಸಿನಿಮಾ ಖ್ಯಾತಿಯ ಕಲಾವಿದೆ ಕೀರ್ತಿ ಸುರೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿರುತ್ತಾರೆ. ಹೊಸ ಹೊಸ ಫೋಟೋಗಳ ಮೂಲಕ ಗಮನ ಸೆಳೆಯುತ್ತಾರೆ.
ಯಾವುದೇ ಬಗೆಯ ಉಡುಗೆಯಲ್ಲೂ ಕೀರ್ತಿ ಸುರೇಶ್ ಮಿರಿಮಿರಿ ಮಿಂಚುತ್ತಾರೆ. ಮಾಡರ್ನ್ ಡ್ರೆಸ್ ಮತ್ತು ಸಾಂಪ್ರದಾಯಿಕ ದಿರಿಸಿನಲ್ಲೂ ಅವರು ಮನಮೋಹಕವಾಗಿ ಕಾಣಿಸುತ್ತಾರೆ.
ಕೀರ್ತಿ ಸುರೇಶ್ ಹಂಚಿಕೊಂಡಿರುವ ಹೊಸ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಕೀರ್ತಿಯ ಫ್ಯಾಷನ್ ಸೆನ್ಸ್ ಬಗ್ಗೆ ಕಮೆಂಟ್ಗಳ ಮೂಲಕ ಪ್ರಶಂಸೆ ವ್ಯಕ್ತಪಡಿಸಲಾಗುತ್ತಿದೆ.
ದಕ್ಷಿಣ ಭಾರತದಲ್ಲಿ ನಟಿ ಕೀರ್ತಿ ಸುರೇಶ್ ಅವರಿಗೆ ಸಖತ್ ಡಿಮ್ಯಾಂಡ್ ಇದೆ. ಸ್ಟಾರ್ ನಟರ ಸಿನಿಮಾಗಳಿಗೆ ಅವರು ನಾಯಕಿಯಾಗಿ ಆಯ್ಕೆ ಆಗುತ್ತಿದ್ದಾರೆ. ಮಹಿಳಾ ಪ್ರಧಾನ ಕಥೆಯುಳ್ಳ ಚಿತ್ರಗಳನ್ನೂ ಒಪ್ಪಿಕೊಳ್ಳುತ್ತಿದ್ದಾರೆ.
ಮಹೇಶ್ ಬಾಬು ಅಭಿನಯದ ‘ಸರ್ಕಾರು ವಾರಿ ಪಾಟ’ ಚಿತ್ರಕ್ಕೆ ಕೀರ್ತಿ ಸುರೇಶ್ ನಾಯಕಿ. ಈ ಸಿನಿಮಾ ಮೇ 12ರಂದು ತೆರೆಕಾಣಲಿದೆ. ಮಹೇಶ್ ಬಾಬು-ಕೀರ್ತಿ ಸುರೇಶ್ ಜೋಡಿಯನ್ನು ಬಿಳ್ಳಿಪರದೆಯಲ್ಲಿ ನೋಡಲು ಫ್ಯಾನ್ಸ್ ಕಾದಿದ್ದಾರೆ.
Published On - 11:46 am, Wed, 9 February 22