Kannada News Photo gallery Savadatti Yallamma hundi Crores and crores of money flowed, gold, silver offerings
ಸವದತ್ತಿ ಯಲ್ಲಮ್ಮನ ಹುಂಡಿಗೆ ಹರಿದುಬಂತು ಕೋಟಿ-ಕೋಟಿ ಹಣ: ಚಿನ್ನ, ಬೆಳ್ಳಿ ಸಮರ್ಪಣೆ
ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸವದತ್ತಿ ಯಲ್ಲಮ ದೇವಸ್ಥಾನವು ಪಟ್ಟಣದಿಂದ 5 ಕಿ.ಮೀ ದೂರದಲ್ಲಿದೆ. ಈ ಹಿಂದೆ ಸಿದ್ಧಾಚಲ ಪರ್ವತ ಎಂದು ಕರೆಯಲ್ಪಡುವ ಬೆಟ್ಟದ ಮೇಲೆ ನೆಲೆಗೊಂಡಿತ್ತು, ಈಗ ಇದನ್ನು "ಯಲ್ಲಮ್ಮ ಗುಡ್ಡ" ಎಂದು ಕರೆಯಲಾಗುತ್ತದೆ. ಇಂದು(ಮಾ.29) ಯಲ್ಲಮ್ಮ ದೇವಿ ದೇವಸ್ಥಾನದ ಹುಂಡಿ ಎಣಿಕೆ ಮಾಡಲಾಗಿದ್ದು, ದೇಶದ ನಾನಾ ಭಾಗದ ಭಕ್ತರಿಂದ ನಗದು, ಚಿನ್ನ ಮತ್ತು ಬೆಳ್ಳಿ ಆಭರಣಗಳು ದೇವಸ್ಥಾನದ ಹುಂಡಿಯಲ್ಲಿ ಹಾಕಿ ಭಕ್ತಿ ಸಮರ್ಪಣೆ ಮೆರೆದಿದ್ದಾರೆ.