ಐಫಾನಲ್ಲಿ ಮಿಂಚು ಹರಿಸಿದ ನಟ ಶಾರುಖ್ ಖಾನ್, ಕಿಂಗ್ ಖಾನ್ ನೋಡಲು ಅಭಿಮಾನಿ ಸಾಗರ

Updated on: Sep 29, 2024 | 1:21 PM

ಅಬುಧಾಬಿಯಲ್ಲಿ ನಡೆಯುತ್ತಿರುವ ಐಫಾ 2024 ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬಾಲಿವುಡ್​ನ ದೊಡ್ಡ ಸ್ಟಾರ್ ನಟರು ಭಾಗಿಯಾಗಿದ್ದಾರೆ. ಮೊದಲ ದಿನ ಗೈರಾಗಿದ್ದ ಶಾರುಖ್ ಖಾನ್ ಎರಡನೇ ದಿನ ಹಾಜರಾಗಿ ಪ್ರೇಕ್ಷಕರಿಗೆ ಭರಪೂರ ಮನೊರಂಜನೆ ನೀಡಿದ್ದಾರೆ.

1 / 7
ಐಫಾ (IIFA) 2024 ಪ್ರಶಸ್ತಿ ಪ್ರದಾನ ಸಮಾರಂಭ ಅಬುಧಾಬಿಯ ಯಾಸಾ ದ್ವೀಪದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಭಾರತ ಚಿತ್ರರಂಗದ ಪ್ರಮುಖ ಚಿತ್ರರಂಗದವರು ಐಫಾನಲ್ಲಿ ಭಾಗಿಯಾಗಿದ್ದಾರೆ.

ಐಫಾ (IIFA) 2024 ಪ್ರಶಸ್ತಿ ಪ್ರದಾನ ಸಮಾರಂಭ ಅಬುಧಾಬಿಯ ಯಾಸಾ ದ್ವೀಪದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಭಾರತ ಚಿತ್ರರಂಗದ ಪ್ರಮುಖ ಚಿತ್ರರಂಗದವರು ಐಫಾನಲ್ಲಿ ಭಾಗಿಯಾಗಿದ್ದಾರೆ.

2 / 7

ಸೆಪ್ಟೆಂಬರ್ 27 ರಿಂದ 29ರ ವರೆಗೆ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದ್ದು, ಭಾರತದ ಚಿತ್ರರಂಗದ ಸ್ಟಾರ್ ನಟರೆಲ್ಲರೂ ಈ ಕಾರ್ಯಕ್ರಮದಲ್ಲಿ ಒಟ್ಟಿಗೆ ಸೇರಿದ್ದಾರೆ.

3 / 7

ನಟ ಶಾರುಖ್ ಖಾನ್ ಮೊದಲ ದಿನ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಆದರೆ ಸೆಪ್ಟೆಂಬರ್ 28ರಂದು ಐಫಾನಲ್ಲಿ ಶಾರುಖ್ ಖಾನ್​ರದ್ದೆ ಹವಾ. ಅಭಿಮಾನಿಗಳೊಟ್ಟಿಗೆ ಬೆರೆತ ಶಾರುಖ್, ವೇದಿಕೆ ಮೇಲೆಯೂ ಮಿಂಚು ಹರಿಸಿದರು.

4 / 7

ಶಾರುಖ್ ಖಾನ್, ನಟ ವಿಕ್ಕಿ ಕೌಶಲ್ ಜೊತೆ ಸೇರಿಕೊಂಡು ಹಲವು ಹಿಂದಿ ಹಾಡುಗಳಿಗೆ ಸಖತ್ ಆಗಿ ಸ್ಟೆಪ್ಟ್ ಹಾಕಿದರು. ಕೆಲ ದಕ್ಷಿಣದ ನಟರೊಟ್ಟಿಗೂ ಸಹ ಶಾರುಖ್ ಡ್ಯಾನ್ಸ್ ಮಾಡಿದರು.

5 / 7

ಶಾರುಖ್ ಖಾನ್ ಅನ್ನು ನೋಡಲು ಭಾರಿ ಸಂಖ್ಯೆಯ ಜನ ಅಬುಧಾಬಿಯ ಯಾಸಾ ದ್ವೀಪದಲ್ಲಿ ಸೇರಿದ್ದರು. ನಟ ಶಾರುಖ್ ಖಾನ್ ಖುದ್ದಾಗಿ ಅಭಿಮಾನಿಗಳ ಬಳಿಗೆ ಹೋಗಿ ಹಲವರಿಗೆ ಹಸ್ತ ಲಾಘವ ಸಹ ಮಾಡಿದರು.

6 / 7

ವೇದಿಕೆ ಮೇಲೆ ದಕ್ಷಿಣ ಭಾರತದ ಸ್ಟಾರ್ ನಟ ವೆಂಕಟೇಶ್ ಅವರೊಟ್ಟಿಗೆ ಶಾರುಖ್ ಖಾನ್ ತುಸು ಕಾಲ ತಮಾಷೆಯ ಮಾತುಗಳನ್ನಾಡಿದರು. ಶಾರುಖ್ ಖಾನ್, ವೆಂಕಟೇಶ್​ಗೆ ಬಾಗಿ ಕೈ ಮುಗಿದರು.

7 / 7

ಐಫಾ ಅವಾರ್ಡ್ಸ್​ನಲ್ಲಿ ಬಾಲಿವುಡ್​, ದಕ್ಷಿಣ ಭಾರತದ ದೊಡ್ಡ ಸ್ಟಾರ್ ನಟ, ನಟಿಯರು ಭಾಗಿ ಆಗಿದ್ದಾರೆ. ಐಶ್ವರ್ಯಾ ರೈ, ಮಣಿರತ್ನಂ, ವಿಕ್ಕಿ ಕೌಶಲ್, ಸಲ್ಮಾನ್ ಖಾನ್, ಮೆಗಾಸ್ಟಾರ್ ಚಿರಂಜೀವಿ ಇನ್ನೂ ಹಲವಾರು ಮಂದಿ ಭಾಗಿಯಾಗಿದ್ದಾರೆ.

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us