ತೀರ್ಥಹಳ್ಳಿ ರಾಮೇಶ್ವರನ ಅದ್ಧೂರಿ ರಥೋತ್ಸವ; ರಥ ಎಳೆದು ಸಂಭ್ರಮಿಸಿದ ಫೋಟೋಗಳಿವೆ
TV9 Web | Updated By: ಆಯೇಷಾ ಬಾನು
Updated on:
Dec 25, 2022 | 2:00 PM
ತೀರ್ಥಹಳ್ಳಿಯ ತುಂಗಾ ನದಿಯ ತಟದಲ್ಲಿ ರಾಮೇಶ್ವರ ದೇವಸ್ಥಾನವಿದೆ. ಈ ಪುರಾಣ ಪ್ರಸಿದ್ಧಿ ದೇಗುಲವು ದಕ್ಷಿಣದ ಕಾಶಿ ಎನ್ನುವ ಕೀರ್ತಿ ಪಡೆದುಕೊಂಡಿದೆ. ಪ್ರತಿ ವರ್ಷ ಎಳ್ಳು ಅಮವಾಸ್ಯೆ ಪ್ರಯುಕ್ತ ನಾಲ್ಕು ದಿನಗಳ ಕಾಲ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಹಬ್ಬದ ವಾತಾವರಣ ಸೃಷ್ಟಿ ಮಾಡುತ್ತವೆ.
1 / 10
ನೈಸರ್ಗಿಕವಾಗಿ ಹಲವು ಕೊಡುಗೆಗಳನ್ನು ಹೊಂದಿರುವ ತೀರ್ಥಹಳ್ಳಿ ಪಟ್ಟಣದಲ್ಲಿ ತುಂಗೆಯು ಹರಿದು ಹೋಗಿದ್ದಾಳೆ. ಈ ತುಂಗಾ ನದಿ ತಟದಲ್ಲಿ ಪುರಾಣ ಪ್ರಸಿದ್ಧ ರಾಮೇಶ್ವರ ದೇವಸ್ಥಾನಕ್ಕೆ ಶತಮಾನಗಳ ಇತಿಹಾಸವಿದೆ. ಈ ದೇವಸ್ಥಾನವೂ ಹಲವಾರು ವೈಶಿಷ್ಟಗಳನ್ನು ಹೊಂದಿದೆ. ಪ್ರತಿ ವರ್ಷ ಎಳ್ಳು ಅಮವಾಸ್ಯೆಯಿಂದ ಮೂರು ದಿನಗಳ ಕಾಲ ರಾಮೇಶ್ವರನ ಜಾತ್ರೆಯು ನಡೆಯುತ್ತಿದೆ.
2 / 10
ಎಳ್ಳು ಅಮಾಸ್ಯೆಯ ದಿನ ಸಾವಿರಾರು ಭಕ್ತರು ರಾಮೇಶ್ವರನ ಸನ್ನಿಧಾನಕ್ಕೆ ಭೇಟಿ ನೀಡುತ್ತಾರೆ. ತುಂಗೆಯ ತಟದಲ್ಲಿರುವ ರಾಮಕೊಂಡದಲ್ಲಿ ಸಾವಿರಾರು ಜನರು ಪವಿತ್ರ ಸ್ನಾನ ಮಾಡುತ್ತಾರೆ. ರಾಮೇಶ್ವರನಿಗೆ ವಿಜೃಂಭಣೆಯಿಂದ ರಥೋತ್ಸವ ನಡೆಯುತ್ತದೆ. ಈ ರಥೋತ್ಸವಕ್ಕೆಂದು ಮಲೆನಾಡು ಸೇರಿದಂತೆ ವಿವಿಧ ಜಿಲ್ಲೆಯಿಂದ ಭಕ್ತರು ಆಗಮಿಸುತ್ತಾರೆ. ತೀರ್ಥಹಳ್ಳಿ ಕ್ಷೇತ್ರದ ಶಾಸಕ ಮತ್ತು ಗೃಹ ಸಚಿವ ಆರಗ ಜ್ಷಾನೇಂದ್ರ ಅವರು ರಥೋತ್ಸವ ಪೂಜೆಯಲ್ಲಿ ಭಾಗವಹಿಸಿದ್ದರು.
3 / 10
ವಿವಿಧ ಧಾರ್ಮಿಕ ಪೂಜೆಗಳ ಬಳಿಕ ರಾಮೇಶ್ವರ ಉತ್ಸವ ಮೂರ್ತಿಯನ್ನು ದೊಡ್ಡ ರಥದಲ್ಲಿಟ್ಟು ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತರು ರಥವನ್ನು ಎಳೆದ್ರು. ರಥಬೀದಿಯಲ್ಲಿ ರಥೋತ್ಸವ ಶುರುವಾಗುತ್ತಿದ್ದಂತೆ ಭಕ್ತರ ಉತ್ಸವ ಇಮ್ಮಡಿಕೊಂಡಿತ್ತು. ಹರ ಹರ ಎನ್ನುವ ಘೋಷಣೆ ಹಾಕುತ್ತಾ ಭಕ್ತರು ರಥವನ್ನು ಎಳೆದು ಪುಳಕಿತರಾದರು.
4 / 10
ತೀರ್ಥಹಳ್ಳಿಯಲ್ಲಿ ಡಿ.23ರಂದು ಎಳ್ಳು ಅಮವಾಸ್ಯೆಯ ಪುಣ್ಯ ಸ್ನಾನ ನಡೆಯಿತು. ಡಿ.24ರಂದು ರಥೋತ್ಸವ ಇಂದು ರಾತ್ರಿ ತೆಪ್ಪೋತ್ಸವ ಮತ್ತು ಸಿಡಿಮದ್ದು ಪ್ರದರ್ಶನವಿದೆ. ಹೀಗೆ ಕಳೆದ ಎರಡು ದಿನಗಳಿಂದ ತೀರ್ಥಹಳ್ಳಿಯ ಪಟ್ಟಣದಲ್ಲಿ ಜನ ಜಾತ್ರೆ.
5 / 10
ರಥಬೀದಿ ಮತ್ತು ತುಂಗಾ ನದಿಯ ತಟ ಮತ್ತು ಸುತ್ತಮುತ್ತಲಿನ ಆವರಣದಲ್ಲಿ ಎಲ್ಲಿ ನೋಡಿದ್ರೂ ಜಾತ್ರೆಯ ಸಂಭ್ರಮ ಸಡಗರ. ಜನರು ಭಕ್ತಿ ಭಾವದಿಂದ ಸರದಿಯಲ್ಲಿ ನಿಂತು ರಾಮೇಶ್ವರನಿಗೆ ನಮನ ಸಲ್ಲಿಸುತ್ತಿದ್ದರು. ಕೊರೊನಾ ಆತಂಕದ ನಡುವೆ ಕೂಡಾ ಜನರು ರಾಮೇಶ್ವನ ಸನ್ನಿಧಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ರಾಮೇಶ್ವರನ ಸನ್ನಿಧಾನದಲ್ಲಿ ಪವಾಡ ಶಕ್ತಿ ಇದೆ. ಹೀಗಾಗಿ ಭಕ್ತರಿಗೆ ಯಾವುದೇ ಭಯವಿಲ್ಲ. ರಾಮೇಶ್ವರನು ಎಲ್ಲ ಭಕ್ತರನ್ನು ರಕ್ಷಿಸುತ್ತಾನೆ ಎನ್ನುವ ಎನ್ನವ ಅಭಯ ನಂಬಿಕೆಯಿದೆ. ಹೀಗಾಗಿ ಕಳೆದ ವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ರಥೋತ್ಸವ ಮತ್ತು ಜಾತ್ರೆಯಲ್ಲಿ ಸೇರಿದ್ದರು. ಹೀಗೆ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.
6 / 10
ಪರಶುರಾಮನು ತಾಯಿಯ ಶೀರಚ್ಛೇಧನ ಮಾಡಿ ತಾಯಿ ಹತ್ಯೆ ಮಾಡಿದ ಎನ್ನುವ ಪಾಪಪ್ರಜ್ಚೆ ಪರುಶರಾಮನಿಗೆ ಕಾಡುತ್ತಿತ್ತು. ಹೀಗಾಗಿ ಆತ ದೇಶದ ಪುಣ್ಯಕ್ಷೇತ್ರದ ಪರ್ಯಟನೆ ನಡೆಸುತ್ತಾನೆ. ತಾಯಿಯ ಶಿರಚ್ಛೇದ ಮಾಡಲು ಬಳಿಸಿದ ಪರುಶರಾಮನ ಕೊಡಲಿಗೆ ಒಂದು ರಕ್ತದ ಕಲೆ ಹಾಗೇ ಉಳಿದುಕೊಂಡಿರುತ್ತದೆ. ಎಲ್ಲ ಪುಣ್ಯಕ್ಷೇತ್ರಗಳನ್ನು ಸುತ್ತಿದ್ರೂ ಆ ರಕ್ತದ ಕಲೆ ಮಾತ್ರ ಆಯುಧದಿಂದ ಹೋಗಿರುವುದಿಲ್ಲ.
7 / 10
ಪರ್ಯಟನೆ ಮಾಡುತ್ತಾ ತೀರ್ಥಹಳ್ಳಿಯ ತುಂಗೆಯ ತಟದಲ್ಲಿರುವ ಬಂಡೆಯ ಮೇಲೆ ಧ್ಯಾನ ಮಾಡುತ್ತಾನೆ. ಈ ಸಂದರ್ಭದಲ್ಲಿ ರಕ್ತ ಕಲೆ ಹೊಂದಿರುವ ಕೊಡಲಿಯು ಜಾರಿ ಕೆಳಗೆ ಬೀಳುತ್ತದೆ. ಕೊಡಲಿ ಬಿದ್ದು ಅಲ್ಲಿದ್ದ ಬಂಡೆ ಇಬ್ಭಾಗವಾಗಿ ಕೊಡಲಿಯು ಕೆಳಗೆ ನೀರಿನಲ್ಲಿ ಬೀಳುತ್ತದೆ. ಆ ನೀರಿನಲ್ಲಿ ಬಿದ್ದ ತನ್ನ ಕೊಡಲಿಯನ್ನು ಪರುಶರಾಮನು ಮೇಲಕ್ಕೆತ್ತಿ ನೋಡಿದಾಗ ಆತನಿಗೆ ಆಶ್ಚರ್ಯವಾಗಿತ್ತು. ತನ್ನ ಶಾಪವಿಮೋಚನೆಗಾಗಿ ಪುಣ್ಯಕ್ಷೇತ್ರ ಸುತ್ತಿದ್ದ ಆತನಿಗೆ ಅಲ್ಲಿ ಪಾಪ ಪರಿಹಾರವಾಗಿತ್ತು.
8 / 10
ತಾಯಿಯ ಶಿರಚ್ಛೇದನ ಮಾಡಿದ ಆತನ ಆಯುಧಕ್ಕೆ ಅಂಟಿದ ರಕ್ತದ ಕಲೆಯು ತುಂಗೆ ನದಿಯ ನೀರಿನಿಂದ ಮಾಯೆವಾಗಿತ್ತು. ತನ್ನ ಪಾಪ ಪರಿಹಾರವಾದ ಹಿನ್ನಲೆಯಲ್ಲಿ ಪ್ರಸನ್ನನಾದ ಪರುಶರಾಮನು ತುಂಗೆಯ ತಟದಲ್ಲಿ ಈಶ್ವರನ ಲಿಂಗವನ್ನು ಪ್ರತಿಷ್ಠಾಪಿಸುತ್ತಾನೆ. ಇದೇ ಸ್ಥಳ ರಾಮವೇಶ್ವನ ಹೆಸರಿನಲ್ಲಿ ಮುಂದೆ ಪ್ರಸಿದ್ಧಿ ಪಡೆದುಕೊಳ್ಳುತ್ತದೆ.
9 / 10
ಪರಶುರಾಮನ ತಾಯಿ ಹತ್ಯೆ ಮಾಡಿದ ಪಾಪ ಪರಿಹಾರಗೊಂಡ ಸ್ಥಳವಾಗಿದ್ದರಿಂದ ತುಂಗೆಯ ತಟದಲ್ಲಿ ಕೊಡಲಿ ಬಿದ್ದು ರಕ್ತದ ಕಲೆ ಹೋಗಿದ್ದ ಸ್ಥಳವನ್ನು ರಾಮಕೊಂಡದಿಂದ ಪ್ರಸಿದ್ಧಿ ಪಡೆದುಕೊಂಡಿದೆ. ಪ್ರತಿ ವರ್ಷ ಎಳ್ಳು ಅಮವಾಸ್ಯೆ ದಿನ ಈ ರಾಮಕೊಂಡದಲ್ಲಿ ಪವಿತ್ರ ಪುಣ್ಯ ಸ್ನಾನ ನಡೆಯುತ್ತದೆ.
10 / 10
ತುಂಗಾ ನದಿಯ ತಟದಲ್ಲಿರುವ ರಾಮೇಶ್ವನ ಅದ್ಧೂರಿ ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗಿದ್ದರು. ಸ್ವತಃ ಗೃಹ ಸಚಿವರು ರಥೋತ್ಸದಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು. ಊರ ಜಾತ್ರೆಗೆ ರಾಜ್ಯದ ಮೂಲೆ ಮೂಲೆಯಿಂದ ಜನರು ಬಂದು ಭಾಗವಹಿಸಿದ್ದು ವಿಶೇಷವಾಗಿತ್ತು.